ಕಾಂಗ್ರೆಸ್ ಗೆ ಅಸ್ತ್ರವಾದ ಪ್ರಜ್ವಲ್.. ಬಿಜೆಪಿಗೆ ಕಷ್ಟ, ಇಂದು ಸಹ ಪ್ರತಿಭಟನೆಗೆ ಸಜ್ಜಾದ ಕಾಂಗ್ರೆಸ್
ಬೆಂಗಳೂರು, 6 ಮೇ (ಹಿ.ಸ):ಆ್ಯಂಕರ್: ಅಶ್ಲೀಲ ವಿಡಿಯೋ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ರೇವಣ
ನ


ಬೆಂಗಳೂರು, 6 ಮೇ (ಹಿ.ಸ):ಆ್ಯಂಕರ್:

ಅಶ್ಲೀಲ ವಿಡಿಯೋ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ರೇವಣ್ಣ ಬಂಧನದ ಬಗ್ಗೆ ಕೈ-ಕಮಲ ನಡುವೆ ಮಾತಿನ ಯುದ್ಧಕ್ಕೂ ಕಾರಣವಾಗಿದೆ. ಹಾಗಾದ್ರೆ, ಯಾವ ನಾಯಕರು ಏನ್ ಹೇಳಿದ್ರು. ಇತ್ತ, ವಿದೇಶಕ್ಕೆ ಹಾರಿರೋ ಪ್ರಜ್ವಲ್ ವಿರುದ್ಧ ಎಲ್ಲೆಲ್ಲಿ ಪ್ರತಿಭಟನೆ ಹೇಗಿತ್ತು? ನೋಡೋಣ ಬನ್ನಿ.

ರಾಜ್ಯ ರಾಜಕಾರಣದಲ್ಲಿ ಹಾಸನ ಅಶ್ಲೀಲ ವಿಡಿಯೋಗಳ ಹರಿದಾಟ ಹಲ್ ಚಲ್ ಎಬ್ಬಿಸಿದೆ. ಸಂತ್ರಸ್ತೆಯ ಕಿಡ್ನಾಪ್ ಪ್ರಕರಣದಲ್ಲಿ ಗೌಡರ ಮಗ ಎಸ್ಐಟಿ ವಶದಲ್ಲಿದ್ದಾರೆ. ಇದೀಗ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ರಾಜಕೀಯ ಕೆಸರರಚಾಟಕ್ಕೆ ಕಾರಣವಾಗಿದೆ.

ರಾಜ್ಯ ರಾಜಕೀಯದಲ್ಲಿ ಪೆನ್ ಡ್ರೈವ್ ಪ್ರಕರಣ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಪ್ರಕರಣದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಮೌನಕ್ಕೆ ಜಾರಿದೆ. ಇದರ ಜೊತೆಗೆ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಮಾತಿನ ವಾಗ್ಯುದ್ಧವೇ ನಡೆಯುತ್ತಿದೆ.

ಪ್ರಕರಣದಿಂದ ಸ್ಪಲ್ಪ ಅಂತರ ಕಾಯ್ದುಕೊಂಡಿರೋ ಬಿಜೆಪಿ ನಾಯಕರು, ಬ್ಯಾಲೆನ್ಸ್, ಡಿಫೆನ್ಸ್ ಆಟಕ್ಕೆ ಇಳಿದಿದ್ದಾರೆ. ಪೆನ್ ಡ್ರೈವ್ ಸತ್ಯವೋ ಸುಳ್ಳೋ ಗೊತ್ತಿಲ್ಲ, ಎಸ್ಐಟಿ ತನಿಖೆಯನ್ನ ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ಮಹಿಳಾ ನ್ಯಾಯಾಧೀಶರು ಕಣ್ಗಾವಲಲ್ಲಿ ನಡೀಬೇಕು ಅಂತ ಮಾಜಿ ಸಚಿವ ಸಿ.ಟಿ. ರವಿ ಹೇಳಿದ್ರೆ, ಅರೆಸ್ಟ್ ಮಾಡಿದ ತಕ್ಷಣ ಅಪರಾಧಿ ಅನ್ನೋಕಾಗಲ್ಲ ಅಂತ ಬಿಜೆಿಪಿ ಶಾಸಕ ಟೆಂಗಿನಕಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇತ್ತ, ವಿದೇಶಕ್ಕೆ ಹಾರಿರೋ ಪ್ರಜ್ವಲ್ ರೇವಣ್ಣ ವಿರುದ್ಧ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಸಿಡಿದೆದ್ದಿದ್ದು, ಬಳ್ಳಾರಿಯ ರಾಯಲ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ನೇತೃತ್ವದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ಪ್ರಜ್ವಲ್ ರೇವಣ್ಣ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಮುಖಂಡ ವಿ. ಕೆ ಬಸಪ್ಪ ಮಾತನಾಡಿ, ಪ್ರಜ್ವಲ್ ಪ್ರಕರಣದಲ್ಲಿ ಕಾಂಗ್ರೆಸ್ಗೆ ರಾಜಕೀಯ ಮಾಡುವಂಥದ್ದು ಏನೂ ಇಲ್ಲ. ಪ್ರಕರಣಕ್ಕೆ ಸಂಬಂಧಿಸಿ ಎಸ್ ಐ ಟಿ ರಚನೆ ಮಾಡೋದು ರಾಜಕೀಯನಾ ಎಂದು ವಿ. ಕೆ ಬಸಪ್ಪ ಪ್ರಶ್ನಿಸಿದರು. ಬಿಜೆಪಿಯವರು ಪ್ರಜ್ವಲ್ ಬಗ್ಗೆ ಎಲ್ಲಾ ಗೊತ್ತಿದ್ದರೂ ವಿದೇಶಕ್ಕೆ ಪರಾರಿಯಾಗಲು ಅವಕಾಶ ಮಾಡಿಕೊಟ್ಟಿದ್ದಾರೆ. ವಿಶ್ವ ಗುರುವಿಗೆ ಎಲ್ಲಾ ವಿಚಾರ ಗೊತ್ತಿದೆ.ಬಿಜೆಪಿಯವರು ಯಾಕೆ ಈ ವಿಚಾರದಲ್ಲಿ ಮೈ ಮೇಲೆ ಎಣ್ಣೆ ಹಚ್ಚಿಕೊಂಡು ಕೂತಿದ್ದಾರೆ ಎಂದು ಪ್ರಶ್ನಿಸಿದರು. ಬೇರೆಯವರೇನಾದರೂ ಈ ರೀತಿ ಮಾಡಿದ್ದರೆ ಬಿಜೆಪಿಯವರು ದಿಲ್ಲಿಯಿಂದ ಹಳ್ಳಿಯವರೆಗೆ ಪ್ರಚಾರ ಮಾಡುತ್ತಿದ್ದರು. ಎಲ್ಲದರ ಬಗ್ಗೆ ಮಾತಾಡುವ ಬಿಜೆಪಿ ನಾಯಕರು ಇದರ ಬಗ್ಗೆ ಯಾಕೆ ಚಕಾರ ಎತ್ತುತ್ತಿಲ್ಲ? ಅಮಿತ್ ಶಾ, ನಡ್ಡಾ, ಅಶೋಕ್, ವಿಜಯೇಂದ್ರ, ಯಾಕೆ ಸಂತ್ರಸ್ತರ ಮನೆಗೆ ಹೋಗಿಲ್ಲ? ಬಿಜೆಪಿಯವರು ಯಾಕೆ ಪ್ರತಿಭಟನೆ ಮಾಡಿಲ್ಲ ಎಂದು ವಿ. ಕೆ ಬಸಪ್ಪ ಪ್ರಶ್ನಿಸಿದರು.

ಇತ್ತ ಮಂಡ್ಯದಲ್ಲಿಯೂ ಪ್ರಜ್ವಲ್ ವಿರುದ್ಧ ಪ್ರತಿಭಟನೆ ನಡೆದಿದೆ. ಸಂಜಯ್ ವೃತ್ತದಲ್ಲಿ ಪ್ರಜ್ವಲ್ ಪ್ರತಿಕೃತಿಗೆ ಚಪ್ಪಲಿಹಾರ ಹಾಕಿ, ಚಪ್ಪಲಿಯಲ್ಲಿ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ರು. ಬಳಿಕ ಪ್ರಜ್ವಲ್ ರೇವಣ್ಣ ಪ್ರತಿಕೃತಿ ದಹಿಸಿ ಸಂಸದನನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ಇಂದು ಹಲವು ಕಡೆ ಕಾಂಗ್ರೆಸ್ ಪಕ್ಷ ಪ್ರತಿಭಟನೆಗೆ ಸಜ್ಜಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande