ಮಾಲ್ಡೀವ್ಸ್ ಚುನಾವಣೆ: ಭಾರತ ವಿರೋಧಿ ಮುಯಿಝುಗೆ ಗೆಲುವು
ಮಾಲೆ, 22 ಏಪ್ರಿಲ್ (ಹಿ.ಸ):ಆ್ಯಂಕರ್:: ಮಾಲ್ಡೀವ್ಸ್ ನಲ್ಲಿ ಭಾನುವಾರ ನಡೆದ ಸಂಸದೀಯ ಚುನಾವಣೆಯಲ್ಲಿ ಅಧ್ಯಕ್ಷ ಮೊಹಮ್
aldives-president-mohamed-muizzus-ruling-pnc-secure


ಮಾಲೆ, 22 ಏಪ್ರಿಲ್ (ಹಿ.ಸ):ಆ್ಯಂಕರ್:: ಮಾಲ್ಡೀವ್ಸ್ ನಲ್ಲಿ ಭಾನುವಾರ ನಡೆದ ಸಂಸದೀಯ ಚುನಾವಣೆಯಲ್ಲಿ ಅಧ್ಯಕ್ಷ ಮೊಹಮ್ಮದ್ ಮುಯಿಝು ನೇತೃತ್ವದ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ 60ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿದೆ.

ಮಾಲ್ಡೀವ್ಸ್ ನ ಒಟ್ಟು 93 ಕ್ಷೇತ್ರಗಳಲ್ಲಿ ಸಂಸದರನ್ನು ಆಯ್ಕೆ ಮಾಡಲು ಮತದಾನ ನಡೆದಿದೆ. ಮಾಲ್ಡೀವ್ಸ್ ನಲ್ಲಿ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಭಾರತ ಮತ್ತು ಚೀನಾದ ನೀತಿಗಳ ಮೇಲೆ ನಿಗಾ ಇರಿಸಿರುವ ಮುಯಿಝುಗೆ ಈ ಚುನಾವಣೆಯು ಅತ್ಯಂತ ಮಹತ್ವದ್ದಾಗಿತ್ತು.

ಮಾಹಿತಿಯ ಪ್ರಕಾರ, 86 ಸ್ಥಾನಗಳ ಪೈಕಿ ಪಿಎನ್ ಸಿ 66 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪ್ರಮುಖ ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ ಕೇವಲ 12 ಸ್ಥಾನಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು 10 ಸ್ಥಾನಗಳನ್ನು ಗೆದ್ದಿದ್ದಾರೆ. ಉಳಿದ ಸೀಟುಗಳು ಬೇರೆ ಪಕ್ಷಗಳ ಪಾಲಾಗಿದೆ.

ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಕಳೆದ ವರ್ಷವಷ್ಟೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧಗಳು ಒಂದು ಕಾಲದಲ್ಲಿ ಬಹಳ ನಿಕಟವಾಗಿದ್ದವು. ಆದರೆ ಮೊಹಮ್ಮದ್ ಮುಯಿಝು ಅಧಿಕಾರಕ್ಕೆ ಬಂದ ನಂತರ ಈ ಎರಡು ದೇಶಗಳ ನಡುವಿನ ಸಂಬಂಧವು ಹದಗೆಟ್ಟಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande