ಅಕ್ರಮ ಮದ್ಯ ಸಾಗಾಣಿಕೆ: 06 ಪ್ರಕರಣ ದಾಖಲು
ಬಳ್ಳಾರಿ, 17 ಏಪ್ರಿಲ್ (ಹಿ.ಸ): ಆ್ಯಂಕರ್: ಲೋಕಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿಯಿರುವುದರಿಂದ ಜಿಲ್ಲೆಯಲ್ಲಿ ಅಕ್
ಅಕ್ರಮ ಮದ್ಯ ಸಾಗಾಣಿಕೆ: 06 ಪ್ರಕರಣ ದಾಖಲು


ಬಳ್ಳಾರಿ, 17 ಏಪ್ರಿಲ್ (ಹಿ.ಸ):

ಆ್ಯಂಕರ್: ಲೋಕಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿಯಿರುವುದರಿಂದ ಜಿಲ್ಲೆಯಲ್ಲಿ ಅಕ್ರಮ ಮದ್ಯ ಹೊಂದುವಿಕೆ ಮತ್ತು ಸಾಗಾಣಿಕೆ ಮಾಡಿದ್ದ 06 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಮಂಜುನಾಥ ಅವರು ತಿಳಿಸಿದ್ದಾರೆ.

ಸಿರುಗುಪ್ಪ ತಾಲ್ಲೂಕಿನ ಬೀರಳ್ಳಿ ಗ್ರಾಮದಿಂದ ರಾವಿಹಾಳ್ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿನ ಕೆರೆ ದಂಡೆಯ ಹತ್ತಿರ ರಸ್ತೆಗಾವಲು ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ 51.840 ಲೀ. (ಅಂದಾಜು ಮೌಲ್ಯ ರೂ.48,045) ಮದ್ಯವನ್ನು ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆಹಚ್ಚಿ, ವಾಹನ ಸವಾರನ್ನು ವಶಕ್ಕೆ ಪಡೆದುಕೊಂಡು ಮದ್ಯ ಹಾಗೂ ವಾಹನವನ್ನು ಜಪ್ತುಪಡಿಸಿ, ಪ್ರಕರಣ ದಾಖಲಿಸಿಲಾಗಿದೆ.

ಕುರುಗೋಡು ಪಟ್ಟಣದಿಂದ ಬಾದನಹಟ್ಟಿ ಗ್ರಾಮದ ಕಡೆ ಹೋಗುವ ರಸ್ತೆಯಲ್ಲಿ ರಸ್ತೆಗಾವಲು ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ 7.380 ಲೀ. (ಅಂದಾಜು ಮೌಲ್ಯ ರೂ.64516) ಮದ್ಯವನ್ನು ಸಾಗಾಣಿಕೆ ಮಾಡುತ್ತಿರುವುದನ್ನು ವಶಕ್ಕೆ ಪಡೆದುಕೊಂಡು ಮದ್ಯ ಹಾಗೂ ವಾಹನವನ್ನು ಜಪ್ತುಪಡಿಸಿ, ವಾಹನ ಸವಾರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸಿರುಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದಿಂದ ದೇವಿನಗರ ಕ್ಯಾಂಪ್ಗೆ ಹೋಗುವ ಮಾರ್ಗ ಮದ್ಯದಲ್ಲಿ ಬರುವ ಕೆ.ಇ.ಬಿ ಹತ್ತಿರ ರಸ್ತೆಗಾವಲು ವೇಳೆ ದ್ವಿಚಕ್ರ ವಾಹನದಲ್ಲಿ 17.100 ಲೀ. (ಅಂದಾಜು ಮೌಲ್ಯ ರೂ.78,589) ಮದ್ಯ ಹಾಗೂ ವಾಹನವನ್ನು ಜಪ್ತುಪಡಿಸಿದ್ದು, ಪ್ರಕರಣ ದಾಖಲಿಸಲಾಗಿದೆ.

ಬಳ್ಳಾರಿ ನಗರದ ಗುಗ್ಗರಹಟ್ಟಿಯಿಂದ ಹೊನ್ನಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ತ್ರಿಚಕ್ರ ವಾಹನದಲ್ಲಿ 12.960 ಲೀ. (ಅಂದಾಜು ಮೌಲ್ಯ ರೂ.85,760) ಮದ್ಯ ಹಾಗೂ ವಾಹನ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲಾಗಿದೆ.

ಸಿರುಗುಪ್ಪ ತಾಲ್ಲೂಕಿನ ಬೀರಳ್ಳಿ ಗ್ರಾಮದಿಂದ ರಾವಿಹಾಳ್ ಗ್ರಾಮಕ್ಕೆ ಹೋಗುವ ರಸ್ತೆಯಯಲ್ಲಿನ ಕಲ್ಲು ಕುಟಿಗಿನಹಾಳು(ಕೆ.ಕೆ ಹಾಳು) ಕ್ರಾಸ್ ಹತ್ತಿರ ರಸ್ತೆಗಾವಲು ಮಾಡುತ್ತಿರುವಾಗ ವೇಳೆ ದ್ವಿಚಕ್ರ ವಾಹನದಲ್ಲಿ 51.840 ಲೀ. (ಅಂದಾಜು ಮೌಲ್ಯ ರೂ.48,045) ಮದ್ಯ ಮತ್ತು ವಾಹನವನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲಾಗಿದೆ.

ಬಳ್ಳಾರಿ ತಾಲ್ಲೂಕಿನ ಜಾನೇಕುಂಟೆ ತಾಂಡಾದಲ್ಲಿನ ಕಿರಾಣಿ ಅಂಗಡಿಯ ಮೇಲೆ ದಾಳಿ ಮಾಡಿದಾಗ ಅಕ್ರಮವಾಗಿ 9.000 ಲೀ. ಮದ್ಯ ಮತ್ತು 6.500 ಲೀ. ಬಿಯರ್ (ಅಂದಾಜು ಮೌಲ್ಯ ರೂ.7,360) ಹೊಂದಿದ್ದಕ್ಕಾಗಿ ವಶಕ್ಕೆ ಪಡೆದುಕೊಂಡು ಮದ್ಯ ಮತ್ತು ಬಿಯರ್ ಜಪ್ತು ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.


 rajesh pande