ಬಾರ್ ನಲ್ಲಿ ಮಾತಿನ ಚಕಮಕಿ, ಕ್ಯಾಷಿಯರ್ ಮೇಲೆ ಗ್ರಾಹಕರ ಹಲ್ಲೆ
ಕೋಲಾರ, ೨೯ ಏಪ್ರಿಲ್(ಹಿ.ಸ) : ಆ್ಯಂಕರ್ : ನಗರದ ಬಂಗಾರಪೇಟೆ ಸರ್ಕಲ್ನಲ್ಲಿರುವ ಸಾಮ್ರಾಟ್ ಅಶೋಕ ಬಾರ್ ನಲ್ಲಿ ಕ್ಯಾಶ
ಬಾರ್‌ನಲ್ಲಿ ಹಲ್ಲೆಗೆ ಒಳಗಾದ ಕ್ಯಾಷಿಯರ್ ಕೋಲಾರ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಕೋಲಾರ, ೨೯ ಏಪ್ರಿಲ್(ಹಿ.ಸ) :

ಆ್ಯಂಕರ್ : ನಗರದ ಬಂಗಾರಪೇಟೆ ಸರ್ಕಲ್ನಲ್ಲಿರುವ ಸಾಮ್ರಾಟ್ ಅಶೋಕ ಬಾರ್ ನಲ್ಲಿ ಕ್ಯಾಶಿಯರ್ ಶೇಷಗಿರಿ ನಾಯಕ್ ಹಾಗೂ ಸಿಬ್ಬಂದಿ ಮೇಲೆ ಹಣದ ವಿಚಾರಕ್ಕೆ ಕೊಲೆ ಮಾಡಲು ಯತ್ನಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಮದ್ಯದ ಅಂಗಡಿಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ರಕ್ಷಣೆ ನೀಡುವಂತೆ ಕೋಲಾರ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳು ಎಸ್ಪಿ ನಾರಾಯಣ್ ಅವರಿಗೆ ಮನವಿ ಮಾಡಿದ್ದಾರೆ.

ಮದ್ಯ ಮಾರಾಟಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಚಲಪತಿ ಮಾತನಾಡಿ ಇತ್ತೀಚೆಗೆ ಕೋಲಾರ ನಗರದ ಮದ್ಯದ ಅಂಗಡಿಗಳಲ್ಲಿ ಪುಂಡಪೋಕರಿಗಳು, ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದೆ. ನಗರದ ಟೇಕಲ್ ರಸ್ತೆಯಲ್ಲಿ ಬಾರ್ವೊಂದರ ಕಾರ್ಮಿಕನನ್ನು ಕೊಲೆ ಮಾಡಿದ ಘಟನೆ ಮಾಸುವ ಮುನ್ನವೇ ನಿನ್ನೆ ಸಂಜೆ ಸಾಮ್ರಾಟ್ ಅಶೋಕ ಬಾರ್ ಅಂಡ್ ರೆಸ್ಟೋರೆಂಟ್ನ ಕ್ಯಾಷಿಯರ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಕೊಲೆಗೆ ಯತ್ನಿಸಿದ ಹಲ್ಲೆಕೋರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದ ವೇಳೆ ಹಲ್ಲೆಗೆ ಒಳಗಾದ ಮದ್ಯದ ಅಂಗಡಿಯ ಮಾಲೀಕ ಮತ್ತು ಕಾರ್ಮಿಕರಿಗೆ ಬೆದರಿಕೆ ಹಾಕಿ ಒಂದು ವೇಳೆ ತಮ್ಮ ವಿರುದ್ಧ ದೂರು ಕೊಟ್ಟರೆ ನಿಮ್ಮ ಮೇಲೆ ಸುಳ್ಳು ಅಟ್ರಾಸಿಟಿ ಕೇಸ್ ಕೊಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ.

ಈ ಘಟನೆಯಿಂದ ದೂರದ ಊರುಗಳಿಂದ ಮದ್ಯದ ಅಂಗಡಿಯಲ್ಲಿ ದುಡಿಯಲು ಬರುವ ಕಾರ್ಮಿಕರು ಭಯಭೀತಾರಾಗಿದ್ದಾರೆ. ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ಕೊಡುವ ಅಬಕಾರಿ ಉದ್ಯಮಕ್ಕೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ಕಂಠಪೂರ್ತಿ ಕುಡಿದು ಹಣ ನೀಡದೆ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಜರಗಿಸಿ ಜಿಲ್ಲೆಯ ಎಲ್ಲಾ ಮದ್ಯದ ಅಂಗಡಿಯ ಮಾಲೀಕರು ಮತ್ತು ಸಿಬ್ಬಂದಿಗೆ ಪೊಲೀಸರು ಮತ್ತು ಅಬಕಾರಿ ಇಲಾಖೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.

ಈ ವೇಳೆ ಕೋಲಾರ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ಚಿತ್ರ : ಬಾರ್ ನಲ್ಲಿ ಹಲ್ಲೆಗೆ ಒಳಗಾದ ಕ್ಯಾಷಿಯರ್ ಕೋಲಾರ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


 rajesh pande