ಏಪ್ರಿಲ್ ತಿಂಗಳಲ್ಲಿ ಯುಗಾದಿ, ಈದ್ ಸೇರಿ ಬ್ಯಾಂಕುಗಳಿಗೆ ಒಟ್ಟು 14 ದಿನ ರಜೆ
ಬೆಂಗಳೂರು, 29 ಮಾರ್ಚ್ (ಹಿ.ಸ):ಆ್ಯಂಕರ್: 2024ರ ಏಪ್ರಿಲ್ ತಿಂಗಳಲ್ಲಿ ದೇಶಾದ್ಯಂತ ಒಟ್ಟಾರೆ 14 ದಿನಗಳು ಬ್ಯಾಂಕುಗಳಿಗೆ
Holidays 2024 April Month, RBI Calend


ಬೆಂಗಳೂರು, 29 ಮಾರ್ಚ್ (ಹಿ.ಸ):ಆ್ಯಂಕರ್:

2024ರ ಏಪ್ರಿಲ್ ತಿಂಗಳಲ್ಲಿ ದೇಶಾದ್ಯಂತ ಒಟ್ಟಾರೆ 14 ದಿನಗಳು ಬ್ಯಾಂಕುಗಳಿಗೆ ರಜೆ ಇದೆ. ಆರ್ ಬಿ ಐ ರಜೆಯ ಕ್ಯಾಲಂಡರ್ ನಲ್ಲಿ ಶನಿವಾರ, ಭಾನುವಾರದ್ದೂ ಸೇರಿ ಒಟ್ಟು 14 ರಜಾದಿನಗಳಿವೆ. ಪ್ರದೇಶವಾರು ರಜೆಗಳಲ್ಲಿ ವ್ಯತ್ಯಾಸ ಇರುತ್ತದೆ. ಪ್ರಾದೇಶಿಕ ರಜೆಗಳೂ ಇರುವುದರಿಂದ ಕೆಲ ಪ್ರದೇಶಗಳಲ್ಲಿ ಹೆಚ್ಚಿನ ರಜೆ ಇರಬಹುದು, ಕೆಲವೆಡೆ ಕಡಿಮೆ ರಜೆ ಇರುತ್ತವೆ. ಈ ಏಪ್ರಿಲ್ ನಲ್ಲಿ ಯುಗಾದಿ, ಈದ್, ರಾಮನವಮಿ ಹಬ್ಬಗಳಿವೆ. ಇಂಥ ಹಬ್ಬ ಮತ್ತು ವಿಶೇಷ ದಿನಗಳ ಪ್ರಯುಕ್ತ ಒಂದು ತಿಂಗಳಲ್ಲಿ 9 ರಜೆಗಳಿವೆ. ಉಳಿದವು ಭಾನುವಾರ ಮತ್ತು ಶನಿವಾರದ ರಜೆಗಳು ಸೇರಿವೆ.

ಆರ್ ಬಿಐ ಕ್ಯಾಲಂಡರ್ ಪ್ರಕಾರ 2024ರ ಏಪ್ರಿಲ್ನಲ್ಲಿ ಇರುವ ರಜೆಗಳು

ಏಪ್ರಿಲ್ 1: ವಾರ್ಷಿಕ ಲೆಕ್ಕಗಳನ್ನು ಮುಗಿಸಲು ಬ್ಯಾಂಕುಗಳು ಮುಚ್ಚಿರುತ್ತವೆ.

ಏಪ್ರಿಲ್ 5, ಶುಕ್ರವಾರ: ಬಾಬು ಜಗಜೀವನರಾಮ್ ಜಯಂತಿ, ಜುಮಾತ್ ಉಲ್ ವಿದಾ (ತೆಲಂಗಾಣ, ಕಾಶ್ಮೀರದಲ್ಲಿ ರಜೆ)

ಏಪ್ರಿಲ್ 7: ಭಾನುವಾರ

ಏಪ್ರಿಲ್ 9, ಮಂಗಳವಾರ: ಯುಗಾದಿ, ಗುದಿ ಪಡ್ವಾ, ಸಜಿಬು ನೊಂಗ್ಮಪನ್ಬ, ಮೊದಲ ನವರಾತ್ರಿ (ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರ, ಮಹಾರಾಷ್ಟ್ರ, ಮಣಿಪುರ್, ಗೋವಾ, ಕಾಶ್ಮೀರದಲ್ಲಿ ರಜೆ).

ಏಪ್ರಿಲ್ 10, ಬುಧವಾರ: ಈದ್ ಉಲ್ ಫಿತರ್ (ಕೇರಳದಲ್ಲಿ ರಜೆ)

ಏಪ್ರಿಲ್ 11, ಗುರುವಾರ: ಈದ್ ಉಲ್ ಫಿತರ್ (ಚಂಡೀಗಡ್, ಸಿಕ್ಕಿಂ, ಹಿಮಾಚಲಪ್ರದೇಶ, ಕೇರಳ ಹೊರತುಪಡಿಸಿ ಉಳಿದೆಡೆ ರಜೆ)

ಏಪ್ರಿಲ್ 13, ಎರಡನೇ ಶನಿವಾರ

ಏಪ್ರಿಲ್ 14: ಭಾನುವಾರ

ಏಪ್ರಿಲ್ 15, ಸೋಮವಾರ: ಬೋಹಾಗ್ ಬಿಹು, ಹಿಮಾಚಲ ದಿನ (ಅಸ್ಸಾಂ ಮತ್ತು ಹಿಮಾಚಲಪ್ರದೇಶದಲ್ಲಿ ರಜೆ)

ಏಪ್ರಿಲ್ 16, ಮಂಗಳವಾರ: ಶ್ರೀರಾಮನವಮಿ (ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಒಡಿಶಾ, ಚಂಡೀಗಡ, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಉತ್ತರಪ್ರದೇಶ, ಬಿಹಾರ, ಝಾರ್ಖಂಡ್, ಹಿಮಾಚಲಪ್ರದೇಶದಲ್ಲಿ ರಜೆ)

ಏಪ್ರಿಲ್ 20, ಶನಿವಾರ: ಗರಿಯ ಪೂಜೆ (ತ್ರಿಪುರಾದಲ್ಲಿ ರಜೆ)

ಏಪ್ರಿಲ್ 21: ಭಾನುವಾರ

ಏಪ್ರಿಲ್ 27: ನಾಲ್ಕನೇ ಶನಿವಾರ

ಏಪ್ರಿಲ್ 28: ಭಾನುವಾರ

ಎಪ್ರಿಲ್ 1ರಂದು ವಾರ್ಷಿಕ ಲೆಕ್ಕ ಸಮಾಪ್ತಿಗೆಂದು ಬ್ಯಾಂಕ್ ಬಾಗಿಲು ಮುಚ್ಚಿದ್ದರೂ, ಸಿಬ್ಬಂದಿ ಕೆಲಸ ಮಾಡುತ್ತಿರುತ್ತಾರೆ. ಸಾರ್ವಜನಿಕರಿಗೆ ಸೇವೆ ಇರುವುದಿಲ್ಲ. ಏಪ್ರಿಲ್ 5ರಿಂದ 16ರವರೆಗೆ 9 ರಜೆಗಳಿವೆ.

ಹಿಂದೂಸ್ತಾನ್ ಸಮಾಚಾರ್


 rajesh pande