ಭಾರತದ ಆರ್ಥಿಕ ಬೆಳವಣಿಗೆ ವೇಗ ಹೀಗೆ ಮುಂದುವರಿಯಲಿದೆ: ಹಣಕಾಸು ಸಚಿವಾಲಯ
ನವದೆಹಲಿ, 26 ಏಪ್ರಿಲ್ (ಹಿ.ಸ):ಆ್ಯಂಕರ್: ಅಂತಾರಾಷ್ಟ್ರೀಯ ಸಂಸ್ಥೆಗಳು, ಆರ್ಬಿಐ ಮೊದಲಾದವು ಭಾರತದ ಆರ್ಥಿಕ ಬೆಳವಣಿಗೆ
ndia Economic Growth Continues To Be High, Ex


ನವದೆಹಲಿ, 26 ಏಪ್ರಿಲ್ (ಹಿ.ಸ):ಆ್ಯಂಕರ್: ಅಂತಾರಾಷ್ಟ್ರೀಯ ಸಂಸ್ಥೆಗಳು, ಆರ್ಬಿಐ ಮೊದಲಾದವು ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಆಶಾದಾಯಕವಾಗಿವೆ. ಭಾರತ ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಈ ಬೆಳವಣಿಗೆ ಹೀಗೇ ಮುಂದುವರಿಯಲಿದೆ ಎಂದು ಹಣಕಾಸು ಸಚಿವಾಲಯ ಅಭಿಪ್ರಾಯಪಟ್ಟಿದೆ. ಇಂದು ಗುರುವಾರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ಮಾರ್ಚ್ ತಿಂಗಳ ಮಾಸಿಕ ಆರ್ಥಿಕ ಪರಾವರ್ಶೆ ವರದಿಯಲ್ಲಿ ಈ ವಿಚಾರವನ್ನು ಚರ್ಚಿಸಲಾಗಿದೆ.

‘ಜಾಗತಿಕವಾಗಿ ಪ್ರಮುಖ ಆರ್ಥಿಕತೆಗಳ ಚೇತರಿಕೆ ನಡೆಯುತ್ತಿದೆ. ಆರ್ಥಿಕ ಚಟುವಟಿಕೆ ಗರಿಗೆದರಿರುವುದು ಕೆಲ ಪ್ರಮುಖ ಸೂಚಕಗಳಿಂದ ಗೊತ್ತಾಗುತ್ತದೆ. ಜಾಗತಿಕ ರಾಜಕೀಯ ಬಿಕ್ಕಟ್ಟು ಕಡಿಮೆ ಆಗಿದೆ. ಆದರೆ, ಇತ್ತೀಚಿನ ಕೆಲ ಸಂಘರ್ಷಮಯ ವಿದ್ಯಮಾನ ಹಿನ್ನಡೆ ತರಬಹುದು. ಈ ಜಾಗತಿಕ ಕಷ್ಟದ ಸಂದರ್ಭದಲ್ಲಿ ಭಾರತದ ಆರ್ಥಿಕತೆಯ ಸಾಧನೆ ಎದ್ದುಗಾಣುತ್ತದೆ. ವಿವಿಧ ವಲಯಗಳಲ್ಲಿ ವಿಸ್ತೃತ ಬೆಳವಣಿಗೆ ಆಗುತ್ತಿದೆ. ಜಾಗತಿಕ ಬೆಳವಣಿಗೆಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ’ ಎಂದು ಹಣಕಾಸು ಸಚಿವಾಲಯದ ವರದಿಯಲ್ಲಿ ಹೇಳಲಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande