ಕೋಟಕ್ ಮಹೀಂದ್ರ ಬ್ಯಾಂಕ್ ಮೇಲೆ ಆರ್ ಬಿ ಐ ನಿರ್ಬಂಧ
ನವದಹೆಲಿ, 25 ಏಪ್ರಿಲ್ (ಹಿ.ಸ):ಆ್ಯಂಕರ್:ಕೋಟಕ್ ಮಹೀಂದ್ರ ಬ್ಯಾಂಕ್ನ ಆನ್ಲೈನ್ ಸೆಕ್ಯೂರಿಟಿ ವ್ಯವಸ್ಥೆ ಅಸಮರ್ಪಕವಾಗಿರ
 Kotak Mahindra Bank From Issuing New Credit


ನವದಹೆಲಿ, 25 ಏಪ್ರಿಲ್ (ಹಿ.ಸ):ಆ್ಯಂಕರ್:ಕೋಟಕ್ ಮಹೀಂದ್ರ ಬ್ಯಾಂಕ್ನ ಆನ್ಲೈನ್ ಸೆಕ್ಯೂರಿಟಿ ವ್ಯವಸ್ಥೆ ಅಸಮರ್ಪಕವಾಗಿರುವ ಹಿನ್ನೆಲೆಯಲ್ಲಿ ಅದರ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಬಂಧ ಹಾಕಿದೆ. ಅದರ ಆನ್ಲೈನ್ ಪ್ಲಾಟ್ಫಾರ್ಮ್ ಮತ್ತು ಮೊಬೈಲ್ ಬ್ಯಾಂಕಿಂಗ್ ಪ್ಲಾಟ್ ಫಾರ್ಮ್ನಿಂದ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವಂತಿಲ್ಲ. ಹೊಸ ಕ್ರೆಡಿಟ್ ಕಾರ್ಡ್ಗಳನ್ನು ನೀಡುವಂತಿಲ್ಲ ಎಂದು ಕೋಟಕ್ ಮಹೀಂದ್ರ ಬ್ಯಾಂಕ್ ಗೆ ಆರ್ ಬಿ ಐ ಆದೇಶಿಸಿದೆ. ಈಗಿರುವ ಬ್ಯಾಂಕ್ ಗ್ರಾಹಕರಿಗೆ ಯಥಾ ಪ್ರಕಾರ ಸೇವೆ ಲಭ್ಯ ಇರುತ್ತದೆ. ಈ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಹೊಂದಿರುವವರೂ ಕೂಡ ಕಾರ್ಡ್ ಬಳಕೆ ಮುಂದುವರಿಸಲು ಯಾವ ಅಡ್ಡಿಯೂ ಇಲ್ಲ. ಏನಿದ್ದರೂ ಹೊಸ ಕ್ರೆಡಿಟ್ ಕಾರ್ಡ್ ನೀಡುವುದು ಸದ್ಯಕ್ಕೆ ಬಂದ್ ಆಗುತ್ತದೆ.

ಕಳೆದ ಎರಡು ವರ್ಷದಲ್ಲಿ, ಅಂದರೆ 2022 ಮತ್ತು 2023ರಲ್ಲಿ ಬ್ಯಾಂಕ್ನ ಐಟಿ ಪರಿಶೀಲನೆ ನಡೆಸಲಾಗಿತ್ತು. ಈ ವೇಳೆ ಸಮಸ್ಯೆಗಳನ್ನು ಸರಿಪಡಿಸಲಾಗಿಲ್ಲದಿರುವುದು ಆರ್ಬಿಐ ಗಮನಕ್ಕೆ ಬಂದಿದೆ. ಹೀಗಾಗಿ, ಭಾರತದ ಸೆಂಟ್ರಲ್ ಬ್ಯಾಂಕ್ ಈ ಕಠಿಣ ನಿರ್ಧಾರ ತೆಗೆದುಕೊಂಡಿದೆ.

‘ಸತತ ಎರಡು ವರ್ಷ ಕಾಲ ನಿಯಮಾನುಸಾರ ಕೋಟಕ್ ಮಹೀಂದ್ರ ಬ್ಯಾಂಕ್ನ ಐಟಿ ಅಪಾಯ ಮತ್ತು ಮಾಹಿತಿ ಭದ್ರತಾ ಆಡಳಿತದಲ್ಲಿ ದೋಷ ಕಂಡು ಬಂದಿದೆ’ ಎಂದು ಆರ್ ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande