ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ ದರ ಹೆಚ್ಚಳ
ಬೆಂಗಳೂರು, 28 ಮಾರ್ಚ್ (ಹಿ.ಸ): ಆ್ಯಂಕರ್:ಬೆಂಗಳೂರು-ಮೈಸೂರು ಹೆದ್ದಾರಿಯ ಟೋಲ್ ಏಪ್ರಿಲ್ 1ರಿಂದ ಹೆಚ್ಚಳವಾಗಲಿದೆ. ಜೊತೆ
ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ ದರ ಹೆಚ್ಚಳ


ಬೆಂಗಳೂರು, 28 ಮಾರ್ಚ್ (ಹಿ.ಸ):

ಆ್ಯಂಕರ್:ಬೆಂಗಳೂರು-ಮೈಸೂರು ಹೆದ್ದಾರಿಯ ಟೋಲ್ ಏಪ್ರಿಲ್ 1ರಿಂದ ಹೆಚ್ಚಳವಾಗಲಿದೆ. ಜೊತೆಗೆ ಏಪ್ರಿಲ್ 1 ರಿಂದ ವಾಹನ ಸವಾರರು ಬೆಂಗಳೂರು-ಮೈಸೂರು ಹೆದ್ದಾರಿ, ಬೆಂಗಳೂರು-ಹೈದರಾಬಾದ್ ಹೆದ್ದಾರಿ ಮತ್ತು ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ನ ಹೊಸಕೋಟೆ-ದೇವನಹಳ್ಳಿ ವಿಭಾಗವನ್ನು ಬಳಸಲು ಹೆಚ್ಚಿನ ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಸಗಟು ಬೆಲೆ ಸೂಚ್ಯಂಕ ಪ್ರಕಾರ ಟೋಲ್ ಶುಲ್ಕಗಳು ಶೇಕಡಾ 3 ರಿಂದ 14 ರಷ್ಟು ಹೆಚ್ಚಾಗಿದೆ. ಈ ಶುಲ್ಕ 2025ರ ಮಾರ್ಚ್ 31ರವರೆಗೆ ಜಾರಿಯಲ್ಲಿರುತ್ತದೆ. ಆದರೆ ಬೆಂಗಳೂರು-ಮೈಸೂರು ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿ 7 (ಬೆಂಗಳೂರು-ಹೈದರಾಬಾದ್) ಟೋಲ್ ಶುಲ್ಕಗಳು 3% ಹೆಚ್ಚಿಸಲಾಗಿದೆ, ಬಳಸುವ ವಾಹನಗಳು 14% ಹೆಚ್ಚು ಪಾವತಿಸಬೇಕಾಗುತ್ತದೆ.

2023ರ ನವೆಂಬರ್ 17 ರಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 39.6-ಕಿಮೀ ದೊಡ್ಡಬಳ್ಳಾಪುರ-ಹೊಸಕೋಟೆ ವಿಭಾಗಕ್ಕೆ ಟೋಲ್ ಸಂಗ್ರಹಿಸಲು ಪ್ರಾರಂಭಿಸಿದ ಆರು ತಿಂಗಳ ಮುಂಚೆಯೇ ಶುಲ್ಕ ಹೆಚ್ಚಳವಾಗಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿದ ಬೆಂಗಳೂರು ಪ್ರಾದೇಶಿಕ ಅಧಿಕಾರಿ ವಿಲಾಸ್ ಪಿ ಬ್ರಹ್ಮಂಕರ್ ಪ್ರತಿಕ್ರಿಯೆ ನೀಡಿದ್ದು, ಟೋಲ್ ಪರಿಷ್ಕರಣೆಯು “ವಾರ್ಷಿಕ, ರಾಷ್ಟ್ರವ್ಯಾಪಿ” ವ್ಯಾಯಾಮವಾಗಿದೆ ಎಂದು ತಿಳಿಸಿದ್ದಾರೆ.

ಎಸ್ ಟಿ ಆರ್ ಆರ್ ನ ದಾಬಾಸ್ ಪೇಟೆ-ದೊಡ್ಡಬಳ್ಳಾಪುರ ವಿಭಾಗದಲ್ಲಿ (42 ಕಿಮೀ) ಟೋಲ್ ಶುಲ್ಕವನ್ನು ಏಪ್ರಿಲ್ನಲ್ಲಿ ಪರಿಚಯಿಸಲಾಗುವುದು ಎಂದು ಅವರು ಹೇಳಿದರು. ಮಾರ್ಚ್ 11 ರಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 80 ಕಿಮೀ ವ್ಯಾಪ್ತಿಯ ನ ಎರಡು ವಿಸ್ತರಣೆಗಳನ್ನು ಉದ್ಘಾಟಿಸಿದರು. ದಾಬಾಸ್ ಪೇಟೆ-ದೊಡ್ಡಬಳ್ಳಾಪುರ ಮಾರ್ಗವು ಸಾರ್ವಜನಿಕರಿಗೆ ಮುಕ್ತವಾಗಿದೆ. ಜೊತೆ ಟೋಲ್ ಮುಕ್ತ ಕೂಡ. ಟೋಲ್ ಸಂಗ್ರಹಿಸಲು ಗುತ್ತಿಗೆದಾರರನ್ನು ಆಯ್ಕೆ ಮಾಡಲು ಟೆಂಡರ್ ಕರೆಯಲಾಗಿದೆ ಎಂದು ಬ್ರಹ್ಮಂಕರ್ ಹೇಳಿದರು.

ಬೆಂಗಳೂರು-ಮೈಸೂರು ಹೆದ್ದಾರಿ ಶುಲ್ಕ

ಹೆದ್ದಾರಿಯ 55.63-ಕಿಮೀ ಬೆಂಗಳೂರು-ನಿಡಘಟ್ಟ ವಿಭಾಗವನ್ನು ಬಳಸುವ ಕಾರುಗಳು/ವ್ಯಾನ್ಗಳು/ಜೀಪ್ಗಳು ಏಕಮುಖ ಪ್ರಯಾಣಕ್ಕೆ ರೂ 170 ಮತ್ತು 24 ಗಂಟೆಗಳ ಒಳಗೆ ಹಿಂದಿರುಗಲು ರೂ 255 ಪಾವತಿಸಬೇಕಾಗುತ್ತದೆ. ಪ್ರಸ್ತುತ ಈಗ ದರಗಳು ಕ್ರಮವಾಗಿ 165 ಮತ್ತು 250 ರೂ. ಇದೆ.

ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನಗಳು ಮತ್ತು ಮಿನಿ ಬಸ್ಗಳು ಕ್ರಮವಾಗಿ ರೂ 270 ಮತ್ತು ರೂ 405 ಇದೆ. ಏಪ್ರಿಲ್.01ರಿಂದ ಏಕಮುಖ ಪ್ರಯಾಣಕ್ಕೆ ರೂ 275 ಮತ್ತು ದ್ವಿಮುಖ ಪ್ರಯಾಣಕ್ಕೆ ರೂ 415 ಪಾವತಿಸಬೇಕಾಗುತ್ತೆ.

ಹಿಂದೂಸ್ತಾನ್ ಸಮಾಚಾರ್


 rajesh pande