ಅಮೇಜಾನ್ ನಲ್ಲಿ ಮಾರಾಟ ವಂಚನೆ ತಡೆಯಲು ಪರಿಣಿತರ ನೇಮಕ
ನವದೆಹಲಿ, 27 ಮಾರ್ಚ್ (ಹಿ.ಸ): ಆ್ಯಂಕರ್ :ಆನ್ಲೈನ್ ಮಾರಾಟದ ವೇಳೆ ನಕಲಿ ಉತ್ಪನ್ನಗಳನ್ನು ಸರಬರಾಜು ಮಾಡುವುದು ಸೇರಿದಂ
್ಮ್


ನವದೆಹಲಿ, 27 ಮಾರ್ಚ್ (ಹಿ.ಸ):

ಆ್ಯಂಕರ್ :ಆನ್ಲೈನ್ ಮಾರಾಟದ ವೇಳೆ ನಕಲಿ ಉತ್ಪನ್ನಗಳನ್ನು ಸರಬರಾಜು ಮಾಡುವುದು ಸೇರಿದಂತೆ ವಿವಿಧ ರೀತಿಯ ವಂಚನೆ ಪ್ರಕರಣಗಳು ಭಾರತದಲ್ಲಿ ಸಾಕಷ್ಟು ಬೆಳಕಿಗೆ ಬರುತ್ತಲೇ ಇವೆ.

ಇಕಾಮರ್ಸ್ ಕಂಪನಿಗಳ ವಿಶ್ವಾಸಾರ್ಹತೆ ಬಗ್ಗೆ ಅನುಮಾನ ಮೂಡಿಸುತ್ತವೆ ಇಂಥ ಪ್ರಕರಣಗಳು. ಸಾವಿರಾರು ಕೋಟಿ ರೂ ಆದಾಯ ಮಾಡುವ ಇಕಾಮರ್ಸ್ ಕಂಪನಿಗಳು ಇಂಥ ವಂಚನೆಯ ಪ್ರಕರಣಗಳನ್ನು ಕಂಡೂ ಕಾಣದಂತೆ ಸುಮ್ಮನಿರಲು ಸಾಧ್ಯವಿಲ್ಲ. ಇದರ ಅಪಾಯದ ಅರಿವಿರುವ ಅಮೇಜಾನ್ ಸಂಸ್ಥೆ ತನ್ನ ಪ್ಲಾಟ್ ಫಾರ್ಮ್ ನಲ್ಲಿ ಮಾರಾಟ ವಂಚನೆಗಳನ್ನು ತಡೆದು ಗ್ರಾಹಕರ ಹಿತ ಕಾಯಲು ಬಿಗಿ ಕ್ರಮಗಳನ್ನು ಕೈಗೊಂಡಿದೆ.

ಅದಕ್ಕಾಗಿ 1.2 ಬಿಲಿಯನ್ ಡಾಲರ್ (ಸುಮಾರು 10,000 ಕೋಟಿ ರೂ) ಹಣವನ್ನು ವಿನಿಯೋಗಿಸಿದೆ. ಮಾರಾಟ ವಂಚನೆಯನ್ನು ಪತ್ತೆ ಮಾಡಲೆಂದೇ ಅಮೇಜಾನ್ ಕಳೆದ ವರ್ಷ (2023) ಸುಮಾರು 15,000 ತಜ್ಞರನ್ನು ನೇಮಿಸಿದೆ. ಹಾಗೆಂದು ಅಮೇಜಾನ್ 2023 ಬ್ರ್ಯಾಂಡ್ ಪ್ರೊಟೆಕ್ಷನ್ ವರದಿ ಹೇಳುತ್ತಿದೆ.

ಒಬ್ಬ ಗ್ರಾಹಕರು ನಮ್ಮ ಆನ್ಲೈನ್ ಸ್ಟೋರ್ ನಲ್ಲಿ ಖರೀದಿಸಲು ಬರುತ್ತಾರೆ ಎಂದರೆ ಅವರಿಗೆ ಅಸಲಿ ಉತ್ಪನ್ನ ಸಿಗುತ್ತದೆ ಎನ್ನುವ ವಿಶ್ವಾಸ ಇರುತ್ತದೆ. ಮಾರಾಟಗಾರರು ನಮ್ಮ ಸ್ಟೋರ್ನಲ್ಲಿ ಮಾರಲು ಬರುತ್ತಾರೆ ಎಂದರೆ ಅವರು ಒಳ್ಳೆಯ ಮಾರಾಟ ವಾತಾವರಣ ನಿರೀಕ್ಷಿಸುತ್ತಾರೆ. ಸ್ಪರ್ಧೆಯಲ್ಲಿ ವಂಚಕ ಮಾರಾಟಗಾರರು ಇರುವುದಿಲ್ಲ ಎನ್ನುವ ವಿಶ್ವಾಸ ಅವರಿಗೆ ಇರುತ್ತದೆ,’ ಎಂದು ಈ ಅಮೇಜಾನ್ ರಿಪೋರ್ಟ್ನಲ್ಲಿ ತಿಳಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande