ಉತ್ತರ ಪತ್ರಿಕೆಗಳ ಮೌಲ್ಯಮಾಪನ : ಉಪನ್ಯಾಸಕ ಹೃದಯಾಘಾತದಿಂದ ಮೃತ
ಬಳ್ಳಾರಿ, 27 ಮಾರ್ಚ್ (ಹಿ.ಸ): ಆ್ಯಂಕರ್: ದ್ವಿತೀಯ ಪಿಯುಸಿ ಉತ್ತರ ಪರೀಕ್ಷೆಗಳ ಮೌಲ್ಯಮಾಪನಕ್ಕೆ ರಾಯಚೂರು ಜಿಲ್ಲೆಯ ಲ
  ದ್ವಿತೀಯ ಪಿಯು ಉತ್ತರ ಪತ್ರಿಕೆಗಳ ಮೌಲ್ಯಮಾಪನ : ಉಪನ್ಯಾಸಕ ಹೃದಯಾಘಾತದಿಂದ ಮೃತ


ಬಳ್ಳಾರಿ, 27 ಮಾರ್ಚ್ (ಹಿ.ಸ):

ಆ್ಯಂಕರ್: ದ್ವಿತೀಯ ಪಿಯುಸಿ ಉತ್ತರ ಪರೀಕ್ಷೆಗಳ ಮೌಲ್ಯಮಾಪನಕ್ಕೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಕರಡಕಲ್ ಗ್ರಾಮದಿಂದ ಬಳ್ಳಾರಿಗೆ ಬುಧವಾರ (ಮೌಲ್ಯಮಾಪನದ ಮೊದಲ ದಿನ) ಬಂದಿದ್ದ ಉಪನ್ಯಾಸಕ ಶಂಕರಗೌಡ (42) ಅವರು ಮೌಲ್ಯಮಾಪನ ಕೇಂದ್ರದಲ್ಲಿ ಬುಧವಾರ ಉಂಟಾದ ತೀವ್ರ ಹೃದಯಾಘಾದಿಂದ ಮೃತಪಟ್ಟಿದ್ದಾರೆ.

ಶಂಕರಗೌಡ ಅವರು, ಮಸ್ಕಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸಮಾಜ ಶಾಸ್ತ್ರ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಳ್ಳಾರಿಯ ಸಂತಜಾನ್ ಪಿಯು ಕಾಲೇಜಿನಲ್ಲಿ ಬುಧವಾರದಿಂದ ಆರಂಭವಾಗಿದ್ದ ದ್ವಿತೀಯ ಪಿಯು ಸಮಾಜಶಾಸ್ತç ಉತ್ತರ ಪತ್ರಿಕೆಯ ಮೌಲ್ಯಮಾಪನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಕೋಟೆ ಪ್ರದೇಶದಲ್ಲಿ ಇರುವ ಸಂತಜಾನ್ ಕಾಲೇಜಿನಲ್ಲಿ ಮೇಲಧಿಕಾರಿಗಳಲ್ಲಿ ರಿಪೋರ್ಟ್ ಮಾಡಿಕೊಂಡಿದ್ದ ಶಂಕರಗೌಡ ಅವರಿಗೆ ಮಧ್ಯಾಹ್ನ 12.05ರ ಸುಮಾರಿಗೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಸಂದರ್ಭದಲ್ಲಿಯೇ ಮೌಲ್ಯಮಾಪನ ಕೇಂದ್ರದಲ್ಲಿ

ಹೃದಯಾಘಾತವಾಗಿ ಏಕಾಏಕಿ ಪ್ರಜ್ಞೆ ತಪ್ಪಿ ಕೆಳಕ್ಕೆ ಬಿದ್ದಿದ್ದಾರೆ.

ಸಹದ್ಯೋಗಿಗಳು ತಕ್ಷಣವೇ, ಅವರನ್ನು ಬಳ್ಳಾರಿ ಹೆಲ್ತ್ ಸೆಂಟರ್ ಆಸ್ಪತ್ರೆಗೆ ಕರೆದೊಯ್ದರು. ಆದರೆ, ವೈದ್ಯರು ಶಂಕರಗೌಡ ಅವರನ್ನು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಬಿಸಿಲತಾಪ, ಆತಂಕ

ಮೌಲ್ಯಮಾಪನಾ ಕೇಂದ್ರದಲ್ಲಿ ಈ ಘಟನೆ ನಡೆದ ನಂತರ ಉಪನ್ಯಾಸಕರು ತೀವ್ರ ಆತಂಕ್ಕೆ - ಒತ್ತಡಕ್ಕೆ ಒಳಗಾಗಿದ್ದು ಬಿಸಿಲತಾಪಕ್ಕೆ ಅನೇಕರು ತತ್ತರಿಸುತ್ತಿದ್ದಾರೆ. ಜಿಲ್ಲಾಡಳಿತ ಸ್ಥಳದಲ್ಲಿ ತುರ್ತು ಪ್ರಾಥಮಿಕ ವೈದ್ಯಕೀಯ ಸೌಲಭ್ಯವನ್ನು ಒದಗಿಸಬೇಕು ಎಂದು ಉಪನ್ಯಾಸಕರು ಮನವಿ ಮಾಡಿದ್ದಾರೆ.


 rajesh pande