ಸಿಂಗಸಂದ್ರದಲ್ಲಿ ಅಗ್ನಿ ಅವಘಡ,ಕಾರು, 40 ಬೈಕ್ ಗಳು, ರೆಡಿಮೆಡ್ ಬಟ್ಟೆಗಳು ಭಸ್ಮ
ಬೆಂಗಳೂರು, 24 ಏಪ್ರಿಲ್ (ಹಿ.ಸ):ಆ್ಯಂಕರ್:ಎಲೆಕ್ಟ್ರಾನಿಕ್ ಸಿಟಿಯ ಸಿಂಗಸಂದ್ರದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮಧ್ಯರ
87


ಬೆಂಗಳೂರು, 24 ಏಪ್ರಿಲ್ (ಹಿ.ಸ):ಆ್ಯಂಕರ್:ಎಲೆಕ್ಟ್ರಾನಿಕ್ ಸಿಟಿಯ ಸಿಂಗಸಂದ್ರದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮಧ್ಯರಾತ್ರಿ ಸುಮಾರಿಗೆ ಮಣಿಪಾಲ್ ಕಂಟ್ರಿ ರೋಡ್ ನಲ್ಲಿರೋ ಟಿಂಬರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿಯ ಕೆನ್ನಾಲಿಗೆಗೆ ಪಕ್ಕದಲ್ಲಿದ್ದ ಕಾರ್ ವಾಶ್ ರೂಂನ ಎರಡು ಕಾರುಗಳು ಭಸ್ಮವಾಗಿದೆ. ಟಿಂಬರ್ ಹಿಂದೆಯಿದ್ದ ಲವೇಬಲ್ ಸ್ಪೋರ್ಟ್ಸ್ ಎಂಬ ಹೆಸರಿನ ಗಾರ್ಮೆಂಟ್ಸ್ ಕಟ್ಟಡದಲ್ಲೂ ಬೆಂಕಿ ಕಾಣಿಸಿಕೊಂಡಿದ್ದು, ಬ್ರ್ಯಾಂಡೆಡ್ ರೆಡಿಮೆಡ್ ಬಟ್ಟೆಗಳು ಪ್ಯಾಕ್ ಆಗಿದ್ದ ಬಾಕ್ಸ್ ಗಳಿದ್ದ ಸ್ಟೋರೇಜ್ ಬೆಂಕಿಗಾಹುತಿಯಾಗಿದೆ.ಮಧ್ಯರಾತ್ರಿ 12.30ರ ಸುಮಾರಿಗೆ ಮೊದಲಿಗೆ ಮರದ ಪೀಸ್ ಗಳನ್ನು ಇಟ್ಟಿದ್ದ ಟಿಂಬರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಎಡ ಭಾಗದಲ್ಲಿದ್ದ ಕಾರ್ ವಾಶ್ ಸರ್ವಿಸ್ ನ ಕಾರುಗಳಿಗೆ ಬೆಂಕಿ ತಗುಲಿದೆ. ಜೊತೆಗೆ ಬಲಭಾಗದಲ್ಲಿದ್ದ ಗ್ಯಾರೇಜ್ ಗೂ ಬೆಂಕಿ ತಗುಲಿದೆ. ಇದರಿಂದ ಕಾರ್ ವಾಶ್ ಸರ್ವಿಸ್ ನಲ್ಲಿದ್ದ 2 ಕಾರುಗಳು, ಗ್ಯಾರೇಜ್ ನಲ್ಲಿದ್ದ 1 ಬಿ ಎಂ ಡಬ್ಲ್ಯೂ ಕಾರು, 1 ಟಾಟಾ ಏಸ್, ಸುಮಾರು 40ಕ್ಕೂ ಹೆಚ್ಚು ಬೈಕ್ ಗಳು ಬೆಂಕಿಗಾಹುತಿಯಾಗಿವೆ.

3 ಗಂಟೆ ಸುಮಾರಿಗೆ ಟಿಂಬರ್ ನಿಂದ 100 ಮೀ ಹಿಂದಿದ್ದ ಗಾರ್ಮೆಂಟ್ಸ್ ಫ್ಯಾಕ್ಟರಿಯ ನಾಲ್ಕನೇ ಫ್ಲೋರ್ ನಲ್ಲಿದ್ದ ಬಟ್ಟೆ ಸ್ಟೋರೇಜ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಟಿಂಬರ್ ಬಳಿ ಉರಿಯುತ್ತಿದ್ದ ಬೆಂಕಿಯಿಂದ ಕಿಡಿ ಹಾರಿ ಗಾರ್ಮೆಂಟ್ಸ್ ಗೆ ತಗುಲಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಗಾರ್ಮೆಂಟ್ಸ್ 4ನೇ ಫ್ಲೋರ್ ನಲ್ಲಿದ್ದ 5 ಕೋಟಿಗೂ ಅಧಿಕ ಮೌಲ್ಯದ ಬಟ್ಟೆಗಳು ಬೆಂಕಿಗೆ ಆಹುತಿಯಾಗಿವೆ. ತಕ್ಷಣವೇ 5 ಅಗ್ನಿಶಾಮಕ ದಳ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಮುಂಜಾನೆಯವರೆಗೂ ಅಗ್ನಿ ನಂದಿಸಿದ್ದಾರೆ. ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಆಗಿಲ್ಲ.

ಹಿಂದೂಸ್ತಾನ್ ಸಮಾಚಾರ್


 rajesh pande