ಮನೆಯ ಚಪ್ಪರಕ್ಕೆ ಹೊತ್ತಿದ ಬೆಂಕಿ,ನವ ದಂಪತಿ ಸೇರಿ 6 ಮಂದಿ ಸಾವು
ಪಾಟ್ನಾ, 26 ಏಪ್ರಿಲ್ (ಹಿ.ಸ):ಆ್ಯಂಕರ್:ಹೊಡೆಯುತ್ತಿದ್ದ ಪಟಾಕಿಯಿಂದ ಮದುವೆ ಮನೆಯ ಚಪ್ಪರಕ್ಕೆ ಬೆಂಕಿ ಹೊತ್ತಿಕೊಂಡು ಆ
Tent Catches Fire In Bihar's Darbhang


ಪಾಟ್ನಾ, 26 ಏಪ್ರಿಲ್ (ಹಿ.ಸ):ಆ್ಯಂಕರ್:ಹೊಡೆಯುತ್ತಿದ್ದ ಪಟಾಕಿಯಿಂದ ಮದುವೆ ಮನೆಯ ಚಪ್ಪರಕ್ಕೆ ಬೆಂಕಿ ಹೊತ್ತಿಕೊಂಡು ಆರು ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ನರೇಶ್ ಪಾಸ್ವಾನ್ ಅವರ ಮಗಳ ಮದುವೆ ಇತ್ತು ಹಾಗಾಗಿ ಬೇರೆ ಊರಿನಿಂದ ಮದುವೆಗೆ ಬಂದವರನ್ನು ಸ್ವಾಗತಿಸಲು ಸಿದ್ಧತೆ ನಡೆಸಲಾಗಿತ್ತು. ಮೃತರಲ್ಲಿ ದಂಪತಿ, ಓರ್ವ ಮಹಿಳೆ ಹಾಗೂ ಮೂವರು ಮಕ್ಕಳು ಸೇರಿದ್ದಾರೆ. ಮೃತರನ್ನು ರಾಮಚಂದ್ರ ಪಾಸ್ವಾನ್ ಪುತ್ರ ಸುನಿಲ್ ಪಾಸ್ವಾನ್, ಪತ್ನಿ ಲಾಲಿ ದೇವಿ, ಉಮೇಶ್ ಪಾಸ್ವಾನ್ ಪತ್ನಿ ಕಾಂಚನ್ದೇವಿ.

ದಂಪತಿ ಬಂದ ತಕ್ಷಣ ಪಟಾಕಿ ಸಿಡಿಸಿದ್ದಾರೆ, ಆಗ ಟೆಂಟ್ಗೆ ಬೆಂಕಿ ಹೊತ್ತಿಕೊಂಡಿತ್ತು. ಜನರು ಬಂದು ಬೆಂಕಿ ನಂದಿಸಲು ಶುರುಮಾಡಿದಾಗ ಅಲ್ಲಿದ್ದ ಸಿಲಿಂಡರ್ಗೂ ಬೆಂಕಿ ಹೊತ್ತಿಕೊಂಡಿತ್ತು. ಅಲ್ಲಿಂದ ಡೀಸೆಲ್ ಸ್ಟಾಕ್ ಗೂ ಬೆಂಕಿ ತಗುಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರೆಲ್ಲಾ ಒಂದೇ ಕುಟುಂಬದವರು ಎನ್ನಲಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande