ಭಾರತದ ಜೊತೆ ವ್ಯಾಪಾರ ಸಂಬಂಧ ಮರಳಿ ಸ್ಥಾಪಿಸಲು ಪಾಕಿಸ್ತಾನ ಒಲವು
ಇಸ್ಲಾಮಾಬಾದ್, 25 ಮಾರ್ಚ್ (ಹಿ.ಸ): ಆ್ಯಂಕರ್:ಕಳೆದ ಐದು ವರ್ಷದಿಂದ ಸ್ಥಗಿತಗೊಂಡಿರುವ ಭಾರತದೊಂದಿಗಿನ ವ್ಯಾಪಾರ ಸಂಬಂಧವನ
ಭಾರತದ ಜೊತೆ ವ್ಯಾಪಾರ ಸಂಬಂಧ ಮರಳಿ ಸ್ಥಾಪಿಸಲು ಪಾಕಿಸ್ತಾನ ಒಲವು


ಇಸ್ಲಾಮಾಬಾದ್, 25 ಮಾರ್ಚ್ (ಹಿ.ಸ):

ಆ್ಯಂಕರ್:ಕಳೆದ ಐದು ವರ್ಷದಿಂದ ಸ್ಥಗಿತಗೊಂಡಿರುವ ಭಾರತದೊಂದಿಗಿನ ವ್ಯಾಪಾರ ಸಂಬಂಧವನ್ನು ಪುನಃಸ್ಥಾಪಿಸಲು ಪಾಕಿಸ್ತಾನ ಆಸಕ್ತಿ ತೋರುತ್ತಿರುವಂತಿದೆ. ಪಾಕಿಸ್ತಾನದಲ್ಲಿ ಚುನಾವಣೆ ಬಳಿಕ ಅಸ್ತಿತ್ವಕ್ಕೆ ಬಂದಿರುವ ಹೊಸ ಸರ್ಕಾರ ಭಾರತದ ಜೊತೆಗಿನ ರಾಜತಾಂತ್ರಿಕ ನಿಲುವನ್ನು ಬದಲಿಸುವ ಇರಾದೆಯಲ್ಲಿದೆ. ಈ ವಿಚಾರವನ್ನು ವಿದೇಶಾಂಗ ಸಚಿವ ಇಶಾಕ್ ದರ್ ತಿಳಿಸಿದ್ದಾರೆ. ಲಂಡನ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಪಾಕ್ ಸಚಿವರು ಭಾರತದೊಂದಿಗೆ ತಮ್ಮ ದೇಶ ವ್ಯಾಪಾರ ಸಂಬಂಧ ಪುನಾರಂಭಿಸುವ ನಿರ್ಧಾರವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.

‘ಪಾಕಿಸ್ತಾನದ ಉದ್ಯಮಿಗಳು ಭಾರತದೊಂದಿಗೆ ವ್ಯಾಪಾರ ಸಂಬಂಧ ಪುನಾರಂಭವಾಗಬೇಕೆಂದು ಬಯಸುತ್ತಿದ್ದಾರೆ. ಇದನ್ನು ಪಾಕಿಸ್ತಾನವೂ ಪರಿಗಣಿಸಲು ಸಿದ್ಧ ಇದೆ. ಭಾರತದೊಂದಿಗೆ ವ್ಯಾಪಾರ ನಡೆಸುವ ವಿಚಾರವನ್ನು ನಾವು ಗಂಭೀರವಾಗಿ ಅವಲೋಕಿಸುತ್ತೇವೆ’ ಎಂದು ಇಶಾಕ್ ದರ್ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande