ಕೆಜಿಎಫ್ ಪೊಲೀಸರಿಂದ ಇಬ್ಬರು ಕಳ್ಳರ ಬಂಧನ ; ಚಿನ್ನ ಆಭರಣಗಳ ವಶ
ಕೋಲಾರ, ೧೫ ಮಾರ್ಚ್ (ಹಿ.ಸ) : ಆ್ಯಂಕರ್ : ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆ ಸರಹದ್ದು ಪಾರಾಂಡಹಳ್ಳಿ ೩ನೇ ಬ್ಲಾಕ್ ಎಂ
ಕೆಜಿಎಫ ಪೋಲೀಸ್ ಜಿಲ್ಲೆಯ ರಾಬರ್ಟ್ಸನ್ ಪೋಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡರು.


ಕೋಲಾರ, ೧೫ ಮಾರ್ಚ್ (ಹಿ.ಸ) :

ಆ್ಯಂಕರ್ : ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆ ಸರಹದ್ದು ಪಾರಾಂಡಹಳ್ಳಿ ೩ನೇ ಬ್ಲಾಕ್ ಎಂಬಲ್ಲಿ ಹಾಡುಹಗಲೇ ಕಳುವಾಗಿದ್ದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕಳೆದ ನವೆಂಬರ್. ೧೬ ರಂದು ಮದ್ಯಾಹ್ನ ಪಾರಾಂಡಹಳ್ಳಿ ವಾಸಿ ದೇವ ಪ್ರಿಯಾನ್ ಪುಷ್ಪರಾಜ್ ಅವರು ತನ್ನ ಮೊಮ್ಮಗನಿಗೆ ಊಟ ನೀಡಿ ಬರಲು ಶಾಲೆಯ ಬಳಿ ಹೋಗಿದ್ದಾಗ, ಹಾಡುಹಗಲೇ ಮನೆಯ ಬೀಗಗಳನ್ನು ಒಡೆದು ಒಳನುಗ್ಗಿರುವ ಕಳ್ಳರು ಸುಮಾರು ೬೪ ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದರ ಬಗ್ಗೆ ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ನಡೆಸಲಾಗುತ್ತಿತ್ತು.

ರಾಬರ್ಟ್ಸನ್ಪೇಟೆ ಸಿಪಿಐ ಸಿ.ಹೆಚ್. ರಾಮಕೃಷ್ಣಯ್ಯ ಮತ್ತು ಪಿಎಸ್ಐ ಜೆ.ಯತೀಶ ರವರ ನೇತೃತ್ವ ತಂಡವು ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಜೆ. ಬೆನ್ನೀ ೩೨ ವರ್ಷ ಮತ್ತು ಈತನ ಜೊತೆಗೆ ಅಪ್ರಾಪ್ತ ಬಾಲಕ ಸೇರಿದಂತೆ ಇಬ್ಬರು ಆರೋಪಿತರನ್ನು ಕಾನೂನಿಗೆ ಒಳಪಡಿಸಿ, ಆರೋಪಿತರಿಂದ ಸುಮಾರು ರೂ: ೩,೦೦,೦೦೦/- ಮೌಲ್ಯದ ೫೦ ಗ್ರಾಂ ಚಿನ್ನಾಭರಣಗಳು ಮತ್ತು ಕೃತ್ಯಕ್ಕೆ ಬಳಸಿದ್ದ ಸುಮಾರು ರೂ: ೫೦,೦೦೦/- ಬೆಲೆ ಬಾಳುವ ಹೋಂಡಾ ಅಕ್ಟಿವಾ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಆರೋಪಿ ಬೆನ್ನೀಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ ಮತ್ತು ಕಾನೂನಿನ ಜೊತೆಗೆ ಸಂಘರ್ಷಕ್ಕೊಳಗಾದ ಬಾಲಕನನ್ನು ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಲಾಗಿರುತ್ತದೆ.

ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ರಾಬರ್ಟ್ಸನ್ಪೇಟೆ ಸಿಪಿಐ ಸಿ.ಹೆಚ್. ರಾಮಕೃಷ್ಣಯ್ಯ, ಪಿಎಸ್ಐ ಜೆ.ಯತೀಶ ಮತ್ತು ಅಪರಾಧ ಪತ್ತೆ ತಂಡದ ಸಿಬ್ಬಂದಿಗಳಾದ ಎಂ.ಎನ್.ಗೋಪಿನಾಥ, ವೆಂಕಟಾಚಲಪತಿ, ಮಂಜುನಾಥರೆಡ್ಡಿ, ಮುರಳಿ, ರಘು, ಬಸವರಾಜ ಕಾಂಬ್ಳೇ, ವಿನೋದ್ಕುಮಾರ್, ಚಾಲಕ ಮನೋಹರ್ ರವರ ಉತ್ತಮ ಕೆಲಸವನ್ನು ಪ್ರಶಂಶಿಸಲಾಗಿದೆ.

ಚಿತ್ರ : ಕೆಜಿಎಫ ಪೋಲೀಸ್ ಜಿಲ್ಲೆಯ ರಾಬರ್ಟ್ಸನ್ ಪೋಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡರು.


 rajesh pande