‘ಪುಷ್ಪ 2’ ಭರ್ಜರಿ ಗಳಿಕೆ- 829 ಕೋಟಿ ಬಾಚಿದ ಚಲನಚಿತ್ರ
ಮುಂಬೈ, 09 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2 ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದೆ. ದಿನ, ದಿನಕ್ಕೂ ಪುಷ್ಪ 2 ಅಬ್ಬರ ಜೋರಾಗುತ್ತಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯ ಹಾಗೂ ಸುಕುಮಾರ್ ನಿರ್ದೇಶನಕ್ಕೆ ಪ್ರೇಕ
‘ಪುಷ್ಪ 2’ ಭರ್ಜರಿ ಕಲೆಕ್ಷನ್- ಬಾಕ್ಸಾಫೀಸ್‌ನಲ್ಲಿ 829 ಕೋಟಿ ಬಾಚಿದ ಸಿನಿಮಾ


ಮುಂಬೈ, 09 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2 ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದೆ. ದಿನ, ದಿನಕ್ಕೂ ಪುಷ್ಪ 2 ಅಬ್ಬರ ಜೋರಾಗುತ್ತಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯ ಹಾಗೂ ಸುಕುಮಾರ್ ನಿರ್ದೇಶನಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಬ್ಲಾಕ್ ಬಸ್ಟರ್ ಪುಷ್ಪ 2 ಚಲನಚಿತ್ರವು 3ನೇ ದಿನವೂ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದೆ.

ಬಹುಭಾಷೆಗಳಲ್ಲಿ 'ಪುಷ್ಪ 2' ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದೆ. ಇದೀಗ ಈ ಚಿತ್ರ ವಿಶ್ವಾದ್ಯಂತ 829 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನಿರ್ಮಾಣ ಸಂಸ್ಥೆ ತಿಳಿಸಿ.

ಇದೀಗ 1000 ಕೋಟಿ ರೂ. ಗಳಇಕೆಯತ್ತ ಮುನ್ನುಗ್ಗತ್ತಿದೆ ಈಗಾಗಲೇ 829 ಕೋಟಿ ರೂ. ಗಳಿಕೆ ಮಾಡಿದ ‘ಪುಷ್ಪ 2’ ಮುನ್ನಗ್ಗುತ್ತಿದೆ. ಈ ಕುರಿತು ನಿರ್ಮಾಣ ಸಂಸ್ಥೆಯೇ ಅಧಿಕೃತವಾಗಿ ತಿಳಿಸಿದೆ.ಈ ಮೂಲಕ ಚಿತ್ರತಂಡ ಯಶಸ್ವಿ ಎಂದು ಸಂಭ್ರಮಿಸುತ್ತಿದೆ. ಭಾರತದ ಚಲನಚಿತ್ರ ಇತಿಹಾಸದಲ್ಲೇ ಯಾವ ಚಿತ್ರ ಮಾಡದಷ್ಟು ಗಳಿಕೆಯನ್ನು ಪುಷ್ಪ 2 ಚಲನಚಿತ್ರ ಮಾಡಿದೆ.

ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿರುವ ಪುಷ್ಪಾ 2 ಚಲನಚಿತ್ರ ಕೆಲ ದಿನಗಳಲ್ಲೇ 305 ಕೋಟಿ ರೂಪಾಯಿ ಗಳಿಸಿದೆ ಅನ್ನೋ ವರದಿಯಾಗಿದೆ. ಅಲ್ಲು ಅರ್ಜುನ್ ಚಲನಚಿತ್ರ ಇಡೀ ಭಾರತದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಾ ಇದ್ದು, ಈಗಾಗಲೇ 829 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇನ್ನು ಆದಷ್ಟು ಬೇಗ 1,000 ಕೋಟಿ ರೂಪಾಯಿ ಕ್ಲಬ್ ಸೇರಿ ಪುಷ್ಪಾ 2 ಮತ್ತೊಂದು ದಾಖಲೆ ಬರೆಯುವತ್ತ ಮುನ್ನುಗ್ಗುತ್ತ ಇದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande