ಬೆಂಗಳೂರು, 24 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್, ಹಿರಿಯ ನಟ ಶಿವರಾಜ್ ಕುಮಾರ್ ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಇಂದು ಅಮೆರಿಕದ ಮಿಯಾಮಿಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ.
ಮೂತ್ರಕೋಶ ಸಮಸ್ಯೆಯಿಂದ ಬಳಲುತ್ತಿರುವ ನಟ ಶಿವರಾಜ್ ಕುಮಾರ್ ಅವರು 35 ದಿನಗಳ ಕಾಲ ಅಮೆರಿಕದಲ್ಲೇ ಇಲಿದ್ದಾರೆ. ಮಿಯಾಮಿ ಕ್ಯಾನ್ಸರ್ ಇನ್ಸುಟ್ಯುಟ್‌ನಲ್ಲಿ ನಟ ಶಿವರಾಜ್ ಕುಮಾರ್ ಗೆ ಚಿಕಿತ್ಸೆ ನಡೆಯುತ್ತಿದೆ. ಇಂದು ಶಸ್ತ್ರ ಚಿಕಿತ್ಸೆ ಬಳಿಕ 10 ದಿನಗಳ ಕಾಲ ಆಸ್ಪತ್ರೆಯಲ್ಲೇ ಇರಲಿದ್ದಾರೆ. ವೈದ್ಯ ಡಾ ಮುರುಗೇಶನ್ ಮನೋಹರ್ ಅವರಿಂದ ಶಸ್ತ್ರಚಿಕಿತ್ಸೆ ನಡೆಯಲಿದೆ. ಮೂತ್ರ ಕೋಶದ ಕೆಳಭಾಗದಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದ್ದು ಇನ್ನೂ ಮೊದಲ ಹಂತದಲ್ಲೇ ಇದೆ.
ಶಸ್ತ್ರಚಿಕಿತ್ಸೆ ಯಶಸ್ವಿ ಕಾಣಲಿ ಎಂದು ಅಭಿಮಾನಿಗಳು ಕೋರಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ರಾಜ್ಯದ ಹಲವು ಕಡೆಗಳಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.
ಚಾಮರಾಜನಗರದ ಶಿವರಾಜ್ ಕುಮಾರ್ ಅಭಿಮಾನಿಗಳಿಂದ ಇಂದು ಈಶ್ವರನಿಗೆ ವಿಶೇಷ ಪೂಜೆ ನಡೆದಿದೆ. ಮೈಸೂರಿನ ವಿದ್ಯಾರ್ಥಿಗಳು ಕೂಡ ಶಿವರಾಜ್ ಕುಮಾರ್ ಅರೋಗ್ಯ ಗುಣ ಮುಖ ಆಗಲಿ ಎಂದು ವಿಶೇಷ ಪ್ರಾರ್ಥನೆ ಮಾಡಿದ್ದಾರೆ. 32 ವರ್ಷಗಳಿಂದ ಶಿವರಾಜ್ ಕುಮಾರ್ ಕಾರ್ ಚಾಲಕ ಆಗಿರುವ ಗೋವಿಂದಣ್ಣ ಅವರು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕಾಡು ಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸುತ್ತಿದ್ದಾರೆ. ಇನ್ನು ಶಿವರಾಜ್ ಕುಮಾರ್ ಮನೆಯಲ್ಲೂ ಗಂಗಾಧರ ಸ್ವಾಮಿಗಳಿಂದ ಹೋಮ ನಡೆಯುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್