ಮುಂಬೈ, 21 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ರಿಯಲ್ ಸ್ಟಾರ್ ಉಪೇಂದ್ರ ಅವರ ಬಹು ನಿರೀಕ್ಷಿತ ಚಿತ್ರ 'ಯುಐ' ಶುಕ್ರವಾರ ಅದ್ದೂರಿಯಾಗಿ ಬಿಡುಗಡೆ ಆಗಿದೆ. ಮೊದಲ ದಿನ ವಿಶ್ವದಾದ್ಯಂತ 4,000 ಪ್ರದರ್ಶನಗಳನ್ನು ಕಂಡಿದೆ. ಕನ್ನಡದಲ್ಲಿ ಮಾತ್ರವೇ ಅಲ್ಲದೆ ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿಯೂ ಸಹ ‘ಯುಐ’ ಚಲನಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು. ಚಲನಚಿತ್ರಕ್ಕೆ ಮೊದಲ ದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೂ ಸಹ ಮೊದಲ ದಿನ ‘ಯುಐ’ ಉತ್ತಮ ಗಳಿಕೆ ಮಾಡಿದೆ. ಯುಐ' ಮೊದಲ ದಿನ 6.75 ಕೋಟಿ ರೂಪಾಯಿ ಗಳಿಕೆ ಆಗಿದೆ.
ಬೇರೆ ಭಾಷೆಗಳಲ್ಲಿ ಈ ಚಲನಚಿತ್ರಕ್ಕೆ ಸಾಧಾರಣ ಗಳಿಕೆ ಸಿಕ್ಕಿದೆ. ತೆಲುಗಿನಲ್ಲಿ 70ಲಕ್ಷ ರೂಪಾಯಿ, ತಮಿಳಿನಲ್ಲಿ 4 ಲಕ್ಷ ರೂ. ಹಾಗೂ ಹಿಂದಿಯಲ್ಲಿ 1 ಲಕ್ಷ ರೂ. ಎಂದು ಹೇಳಲಾಗಿದೆ.
ನಟ ಉಪೇಂದ್ರ ಅವರ ಕಲ್ಪನೆಯಲ್ಲಿ ಮೂಡಿಬಂದ ಈ ಚಲನಚಿತ್ರವನ್ನು ಜನರನ್ನು ಚಿತ್ರಮಂದಿರಗಳ ನತ್ತ ಸೆಳೆಯುತ್ತಿದೆ. ಯುಐ ಚಿತ್ರವು ಮೊದಲ ದಿನದಂದು ಉತ್ತಮ ಗಳಿಕೆ ಮಾಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಗಳಿಕೆ ಕಂಡಿದೆ.
'ಯುಐ' ಮೇಲೆ ಕನ್ನಡ ಚಿತ್ರರಂಗ ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿತ್ತು. ಆದರೆ, ಮೊದಲ ದಿನವೇ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರಿಗೆ ಈ ಚಲನಚಿತ್ರವು ಸಿಕ್ಕಾಪಟ್ಟೆ ಇಷ್ಟ ಆಗಿದೆ. ಮತ್ತೆ ಕೆಲವರಿಗೆ ಉಪ್ಪಿ ಬರೀ ಹುಳ ಬಿಟ್ಟಿದ್ದಾರೆ ಅನ್ನೋ ಅಭಿಪ್ರಾಯ ಕೂಡ ಕೇಳಿ ಬರುತ್ತಿದೆ. ಈ ವಾರ ಮುಗಿಯುವುದರೊಳಗೆ ಚತ್ರದ ಬಗ್ಗೆ ಅಸಲಿ ವರದಿ ಸಿಗಬಹುದು.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್