ಕಿಚ್ಚ ಸುದೀಪ್ ನಟನೆಯ  ‘ಮ್ಯಾಕ್ಸ್‌’  ಚಲನಚಿತ್ರ  ಬಿಡುಗಡೆ
ಬೆಂಗಳೂರು, 25 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕಿಚ್ಚ ಸುದೀಪ್ ನಟನೆಯ, ವಿಜಯ್‌ ಕಾರ್ತಿಕೇಯ ನಿರ್ದೇಶನದ ‘ಮ್ಯಾಕ್ಸ್‌’ ಚಲನಚಿತ್ರವು ಇಂದು ಬಿಡುಗಡೆ ಆಗಿದೆ. 2 ವರ್ಷಗಳ ನಂತರ ವಿಕ್ರಾಂತ್ ರೋಣ ಚಲನಚಿತ್ರದ ನಂತರ ಕಿಚ್ಚ ಸುದೀಪ್ಅಭಿಮಾನಿಗಳು ಅವರನ್ನು ಬೆಳ್ಳಿ ತೆರೆಯಲ್ಲಿ ನೋಡುವುದಕ್ಕೆ ಭಾರಿ ಕ
ಕಿಚ್ಚ ಸುದೀಪ್ ನಟನೆಯ, ವಿಜಯ್‌ ಕಾರ್ತಿಕೇಯ ನಿರ್ದೇಶನದ ‘ಮ್ಯಾಕ್ಸ್‌’  ಚಲನಚಿತ್ರವು ಇಂದು ಬಿಡುಗಡ


ಬೆಂಗಳೂರು, 25 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕಿಚ್ಚ ಸುದೀಪ್ ನಟನೆಯ, ವಿಜಯ್‌ ಕಾರ್ತಿಕೇಯ ನಿರ್ದೇಶನದ ‘ಮ್ಯಾಕ್ಸ್‌’ ಚಲನಚಿತ್ರವು ಇಂದು ಬಿಡುಗಡೆ ಆಗಿದೆ. 2 ವರ್ಷಗಳ ನಂತರ ವಿಕ್ರಾಂತ್ ರೋಣ ಚಲನಚಿತ್ರದ ನಂತರ ಕಿಚ್ಚ ಸುದೀಪ್ಅಭಿಮಾನಿಗಳು ಅವರನ್ನು ಬೆಳ್ಳಿ ತೆರೆಯಲ್ಲಿ ನೋಡುವುದಕ್ಕೆ ಭಾರಿ ಕುತೂಹಲದಿಂದ ಕಾಯುತ್ತಿದ್ದರು. ಟ್ರೇಲರ್ ನೋಡಿ ರೋಮಾಂಚನ ಆಗಿದ್ದ ಅಭಿಮಾನಿಗಳು ಬೆಳಗ್ಗೆಯೇ ದೊಡ್ಡ ಪರದೆಯಲ್ಲಿ ‘ಮ್ಯಾಕ್ಸ್’ ಚತ್ರವನ್ನು ವೀಕ್ಷಿಸಿದ್ದಾರೆ.

ಸಾಹಸ ಜೊತೆಗೆ ಇದೊಂಥರಾ ಆತಂಕ

ಚಲನಚಿತ್ರವು ಹೌದು, ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಆಗಿ ಕಾಣಿಸಿಕೊಂಡಿರುವ ನಟ ಕಿಚ್ಚ ಸುದೀಪ್ ಅವರು ಕರ್ತವ್ಯಕ್ಕೆ ಸೇರಿಕೊಳ್ಳುವ ಆಗುವ ಮೊದಲೇ ಆಗುವ ಎಲ್ಲಾ ಬೆಳವಣಿಗೆಯನ್ನು ಒಂದೇ ಒಂದು ರಾತ್ರಿಯಲ್ಲಿ ತೋರಿಸುತ್ತಾರೆ.

ಈ ಚಲನಚಿತ್ರದ ಕುರಿತು ಕಿಚ್ಚ ಸುದೀಪ್, ‘ಎರಡೂವರೆ ವರ್ಷ ಕಾಯಿಸಿದ್ದಕ್ಕಾಗಿ ಕ್ಷಮೆ ಇರಲಿ. ಮುಂದೆ ಹೀಗಾಗುವುದಿಲ್ಲ. ಈ ಚಲನಚಿತ್ರ ತುಂಬಾ ಚೆನ್ನಾಗಿದೆ. ಮೂರು ತಿಂಗಳು ಪ್ರತೀ ರಾತ್ರಿ ಶೂಟಿಂಗ್ ಮಾಡಿ ಚಲನಚಿತ್ರವು ಸಿದ್ಧಗೊಳಿಸಿದ್ದೇವೆ.

ಕನ್ನಡ ಚಿತ್ರರಂಗ ಒಗ್ಗಟ್ಟಾಗಿ ಇರಬೇಕು ಅಂತ ಬಯಸೋನು ನಾನು. ಬೇರೆ ರಾಜ್ಯದ ಚಲನಚಿತ್ರಗಳಿಗೆ ಬೆಂಬಲ ಮಾಡಿದ ಹಾಗೆ ನಮ್ಮ ಚಲನಚತ್ರಗಳಿಗೂ ಬೆಂಬಲ ’ ಎಂದು ಹೇಳಿದ್ದಾರೆ.

ಕಲೈಪುಲಿ ಧನು ನಿರ್ಮಾಣದ ಚಿತ್ರದಲ್ಲಿ ಸುದೀಪ್ ಜೊತೆ ಸುನಿಲ್, ಉಗ್ರಂ ಮಂಜು, ಶರತ್ ಲೋಹಿತಾಶ್ವ, ಸುಕೃತಾ ವಾಗ್ಳೆ, ವರಲಕ್ಷ್ಮಿ ಶರತ್ ಕುಮಾರ್​, ಸಂಯುಕ್ತಾ ಹೊರನಾಡು, ಪ್ರಮೋದ್ ಶೆಟ್ಟಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande