ಕಾಡು ಬಸಳೆ ಸೊಪ್ಪು ಸೇವನೆ ಪ್ರಯೋಜನಗಳು
ಹುಬ್ಬಳ್ಳಿ, 09 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಮಾನವ ಆರೋಗ್ಯವಾಗಿರಲು ತರಕಾರಿ, ಹಣ್ಣು, ಧಾನ್ಯಗಳು ಎಷ್ಟು ಮುಖ್ಯವೋ ಅಂತೆಯೇ ಸೊಪ್ಪುಗಳು ಸಹ ಅಷ್ಟೇ ಮುಖ್ಯ. ಸೊಪ್ಪನ್ನು ಸೇವಿಸಿದರೆ ಅನಾರೋಗ್ಯ ಭಾದಿಸುವುದಿಲ್ಲ. 150ಕ್ಕೂ ಹೆಚ್ಚು ಕಾಯಿಲೆಗಳನ್ನು ಕಾಡು ಬಸಳೆ ಸೊಪ್ಪಿನಿಂದ ಗುಣಪಡಿಸಬಹುದು ಎಂದು ತಜ
Basale sopu


ಹುಬ್ಬಳ್ಳಿ, 09 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಮಾನವ ಆರೋಗ್ಯವಾಗಿರಲು ತರಕಾರಿ, ಹಣ್ಣು, ಧಾನ್ಯಗಳು ಎಷ್ಟು ಮುಖ್ಯವೋ ಅಂತೆಯೇ ಸೊಪ್ಪುಗಳು ಸಹ ಅಷ್ಟೇ ಮುಖ್ಯ. ಸೊಪ್ಪನ್ನು ಸೇವಿಸಿದರೆ ಅನಾರೋಗ್ಯ ಭಾದಿಸುವುದಿಲ್ಲ.

150ಕ್ಕೂ ಹೆಚ್ಚು ಕಾಯಿಲೆಗಳನ್ನು ಕಾಡು ಬಸಳೆ ಸೊಪ್ಪಿನಿಂದ ಗುಣಪಡಿಸಬಹುದು ಎಂದು ತಜ್ಞರ ಅಭಿಪ್ರಾಯ. ಎಲ್ಲೆಡೆ ಸಿಗುವ ಬಸಳೆ ಸೊಪ್ಪಿಗಿಂತ ಕಾಡು ಬಸಳೆ ಭಿನ್ನವಾಗಿದೆ. ಬಸಳೆ ಸೊಪ್ಪಿನಂತೆ ತೀರಾ ನಾರಿನ‌ ಗುಣವನ್ನು ಈ ಸೊಪ್ಪು ಹೊಂದಿರುವುದಿಲ್ಲ.

ಕಾಡು ಬಸಳೆ ಎಲೆ ದಪ್ಪವಾಗಿದ್ದು ರುಚಿ ಹುಳಿಯಾಗಿರುತ್ತೆ. ಈ ಸಸ್ಯವು ಆಂಟಿಬ್ಯಾಕ್ಟೀರಿಯಲ್, ಆಂಟಿವೈರಲ್, ಆಂಟಿಮೈಕ್ರೊಬಿಯಲ್, ಆಂಟಿಫಂಗಲ್, ಆಂಟಿಹಿಸ್ಟಮೈನ್ ಮತ್ತು ಅನಾಫಿಲ್ಯಾಕ್ಟಿಕ್ ಗುಣಲಕ್ಷಣಗಳನ್ನ ಹೊಂದಿದೆ.

ಕಾಡು ಬಸಳೆ ಗಿಡದ ಒಂದೇ ಒಂದು ಎಲೆಯನ್ನು ಹಿಂಡಿದರೆ ನಾಲ್ಕು ಚಮಚ ನೀರು ಒಸರುತ್ತದೆ. ಇನ್ನೂ ಇದನ್ನು ಇಂಗ್ಲೀಷಿನಲ್ಲಿ ಬ್ರಿಯೋಫಿಲ್ಲಂ ಅಂತ ಕರೆಯುತ್ತಾರೆ.

ಸ್ವಲ್ಪ ನೀರಿದ್ದರೂ ಸಾಕು ಚೆನ್ನಾಗಿ ಹರಡಿಕೊಂಡು ಬೆಳೆಯುತ್ತದೆ. ಇದರ ಚಟ್ನಿ, ಪಲ್ಯಗಳೂ ಸಹ ಬಹಳ ಆರೋಗ್ಯಕರ. ಅದರ ಎಲೆಗಳಿಗಿರುವ ಶಕ್ತಿಯೂ ಸಹ ಅಪಾರ. ಮರಣವಿಲ್ಲದ ಸಸ್ಯ ಎಂದರೆ ಅದು ಬಸಳೆ ಸೊಪ್ಪು.

ನೆನಪಿರಲಿ, ಈ ಸೊಪ್ಪನ್ನು ಬಳಸುವಾಗ ಹಾಲು ಅಥವಾ ಹಾಲಿನ ಯಾವುದೇ ಉತ್ಪನ್ನಗಳನ್ನೂ ಅಂದರೆ ಮೊಸರು, ಮಜ್ಜಿಗೆ, ಬೆಣ್ಣೆ ತುಪ್ಪದಂತಹ ಯಾವುದೇ ಉತ್ಪನ್ನಗಳನ್ನೂ ಬಳಸುವಂತಿಲ್ಲ.

ವೈದ್ಯಕೀಯ ತಜ್ಞರು ಪ್ರಕಾರ ಕಾಡು ಬಸಳೆ ಎಲೆಗಳನ್ನು ತಿಂದರೆ 150ಕ್ಕೂ ಹೆಚ್ಚು ಕಾಯಿಲೆಗಳು ಗುಣವಾಗುತ್ತವೆ ಎಂದು ಹೇಳುತ್ತಾರೆ. ನಾಟೀ ವೈದ್ಯ ಪದ್ಧತಿಯು ಎಳನೀರಿನ ಜೊತೆ ಈ ಸೊಪ್ಪನ್ನು ಸೇವಿಸಿದರೆ ಒಂದೇ ದಿನದಲ್ಲಿ ಕಿಡ್ನಿಯಲ್ಲಿರುವ ನೋವು ಮಾಯವಾಗುತ್ತದೆ ಎನ್ನುತ್ತದೆ.

ಅಲ್ಲದೇ ಕಾಡು ಬಸಳೆ ಸೊಪ್ಪು ಎಲೆಗಳು ಕಿಡ್ನಿ ಸಮಸ್ಯೆಗಳನ್ನು ತಡೆಯುತ್ತದೆ. ಮೂತ್ರಕೋಶದಲ್ಲಿನ ಕಲ್ಲುಗಳು ಕರಗುತ್ತವೆ. ಡಯಾಲಿಸಿಸ್ ರೋಗಿಗಳಿಗೆ ಒಳ್ಳೆಯದು. ಮೂತ್ರಪಿಂಡದ ಕಾರ್ಯವನ್ನ ಸುಧಾರಿಸುತ್ತದೆ.

ಎರಡು ದಿನಕ್ಕೊಮ್ಮೆ 15 ದಿನಗಳ ಕಾಲ ಸೇವಿಸಿದರೆ ಎಷ್ಟು ದೊಡ್ಡ ಕಿಡ್ನಿ ಸ್ಟೋನ್ ಆದರೂ ಹೇಳ ಹೆಸರಿಲ್ಲದಂತೆ ಮಾಯವಾಗುತ್ತದೆ. ಅಲ್ಲದೇ ಇನ್ನೊಮ್ಮೆ ಕಿಡ್ನಿ ಸ್ಟೋನ್ ಬರದಂತೆ ಶಾಶ್ವತ ಪರಿಹಾರ ದೊರಕಿಸುವ ಶಕ್ತಿಯೂ ಈ ಕಾಡು ಬಸಳೆ ಸೊಪ್ಪಿನ ಎಲೆಗಳಿಗಿವೆ.

ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಕಾಡು ಬಸಳೆ ಎಲೆಗಳನ್ನು ತಿನ್ನುವುದು ಉತ್ತಮ.ಕಾಡು ಬಸಳೆ ಎಲೆಗಳನ್ನು ಬಿಸಿ ಮಾಡಿ ಗಾಯಗಳ ಮೇಲೆ ಇಡಬೇಕು. ಇದರಿಂದ ಗಾಯಗಳು ಬೇಗ ಮಾಯುತ್ತವೆ. ಇನ್ನೂ ಈ ಸೊಪ್ಪಿನಿಂದ ಜೀರ್ಣಾಂಗದಲ್ಲಿ ಹುಣ್ಣುಗಳು ಕಡಿಮೆಯಾಗುತ್ತವೆ. ಮೂತ್ರದಲ್ಲಿ ರಕ್ತ ಮತ್ತು ಕೀವು ಮುಂತಾದ ಸಮಸ್ಯೆಗಳನ್ನು ತಡೆಯುತ್ತದೆ.

ಕಾಮಾಲೆ ಪೀಡಿತರು ಬೆಳಿಗ್ಗೆ ಮತ್ತು ಸಂಜೆ ಈ ಎಲೆಗಳ ರಸವನ್ನ 30 ಮಿಲಿ ಸೇವಿಸಿದರೆ ಗುಣವಾಗುತ್ತದೆ. ಅಜೀರ್ಣ ಮತ್ತು ಮಲಬದ್ಧತೆ ಸಮಸ್ಯೆಗಳನ್ನ ತಡೆಯುತ್ತದೆ. ಶೀತ, ಕೆಮ್ಮು ಮತ್ತು ಭೇದಿಗಳನ್ನ ಗುಣಪಡಿಸಬಹುದು.

ಬಸಳೆ ಸೊಪ್ಪಿನ ಎಲೆಗಳನ್ನು ಪುಡಿ ಮಾಡಿ ತಲೆಯ ಮೇಲೆ ಇಟ್ಟುಕೊಂಡರೆ ತಲೆನೋವು ಕಡಿಮೆಯಾಗುತ್ತದೆ. ಕೂದಲು ಉದುರುವುದನ್ನ ಕಡಿಮೆ ಮಾಡುವುದಲ್ಲದೇ ಬಿಳಿ ಕೂದಲು ಉಂಟಾಗದಂತೆ ತಡೆಯುತ್ತದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande