ಇಂದು ದೇಶದಾದ್ಯಂತ ರಾಷ್ಟ್ರೀಯ ಗ್ರಾಹಕರ ದಿನಾಚರಣೆ 
ಇಂದು ದೇಶಾದ್ಯಂತ ರಾಷ್ಟ್ರೀಯ ಗ್ರಾಹಕರ ದಿನಾಚರಣೆ; ಗ್ರಾಹಕರ್ ಹಕ್ಕು ಮತ್ತು ಜವಾಬ್ದಾರಿಗಳ ಕುರಿತು ಜಾಗೃತಿ
Today is National Consumer Day across the country


ನವದೆಹಲಿ, 24 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ನಾವೆಲ್ಲರೂ ನಮ್ಮ ಹಣಕ್ಕಾಗಿ ಉತ್ತಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪಡೆಯಲು ಬಯಸುತ್ತೇವೆ. ದುರದೃಷ್ಟವಶಾತ್, ಕೆಲವೊಮ್ಮೆ ಕಂಪನಿಗಳು ಹೆಚ್ಚಿನ ಲಾಭ ಗಳಿಸುವ ನಿಟ್ಟಿನಲ್ಲಿ ವಸ್ತುಗಳ ಮೇಲೆ ಹೆಚ್ಚಿನ ಶುಲ್ಕ ವಿಧಿಸಿ ವಂಚಿಸುತ್ತಾರೆ. ಇಂತಹ ವಂಚನೆಯಿಂದ ತಪ್ಪಿಸಿಕೊಳ್ಳಲು ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿ.24ರಂದು ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ.

ಇದನ್ನು ಮೊದಲ ಬಾರಿಗೆ 1986ರಲ್ಲಿ ಭಾರತದ ರಾಷ್ಟ್ರಪತಿಯಾಗಿದ್ದ ಗಿಯಾನಿ ಜೈಲ್ ಸಿಂಗ್ ಅವರು ಆಚರಿಸಿದರು. ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವರ ಜವಾಬ್ದಾರಿಗಳ ಬಗ್ಗೆ ಜಾಗೃತಿ ಮೂಡಿಸಲು ದೇಶದಾದ್ಯಂತ ಗ್ರಾಹಕ ಸಂಘಟನೆಗಳು ದಿನವನ್ನು ಆಚರಿಸುತ್ತವೆ.

ದೇಶದಾದ್ಯಂತ ಇಂದು ರಾಷ್ಟ್ರೀಯ ಗ್ರಾಹಕರ ದಿನವನ್ನು ಆಚರಿಸಲಾಗುತ್ತಿದೆ. ಗ್ರಾಹಕರ ಆಂದೋಲನದ ಮಹತ್ವವನ್ನು ಸಾರಲು ಮತ್ತು ಪ್ರತಿಯೊಬ್ಬ ಗ್ರಾಹಕನ ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ ೨೪ ಅನ್ನು ರಾಷ್ಟ್ರೀಯ ಗ್ರಾಹಕರ ದಿನವಾಗಿ ಆಚರಿಸಲಾಗುತ್ತದೆ.

ಇದೇ ದಿನದಂದು ಗ್ರಾಹಕ ಸಂರಕ್ಷಣಾ ಕಾಯಿದೆ-೧೯೮೬ ಅನ್ನು ಜಾರಿಗೊಳಿಸಲಾಗಿತ್ತು. ಈ ಕಾಯಿದೆ, ದೋಷಪೂರಿತ ಸರಕುಗಳು, ಸೇವೆಗಳಲ್ಲಿನ ಕೊರತೆ ಮತ್ತು ಮೋಸದ ವ್ಯಾಪಾರ ಸೇರಿದಂತೆ ನಾನಾ ರೀತಿಯ ಶೋಷಣೆಗಳ ವಿರುದ್ಧ ಪರಿಣಾಮಕಾರಿ ಸುರಕ್ಷತಾ ಕ್ರಮಗಳನ್ನು ಗ್ರಾಹಕರಿಗೆ ಒದಗಿಸುವ ಉದ್ದೇಶವನ್ನು ಹೊಂದಿದೆ.

ರಾಷ್ಟ್ರೀಯ ಗ್ರಾಹಕರ ದಿನದ ಅಂಗವಾಗಿ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ನವದೆಹಲಿಯಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ವೇಳೆ ಅವರು, ಗ್ರಾಹಕರ ಹಕ್ಕುಗಳ ರಕ್ಷಿಸುವ ಧ್ಯೇಯದೊಂದಿಗೆ ರೂಪಿಸಲಾಗಿರುವ ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಇದರಲ್ಲಿ ಇ-ಮ್ಯಾಪ್ ಪೋರ್ಟಲ್, ಎಐ-ಆಧಾರಿತ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ೨.೦, ಜಾಗೋ ಗ್ರಹಕ್ ಜಾಗೋ ಅಪ್ಲಿಕೇಶನ್, ಜಾಗೃತಿ ಅಪ್ಲಿಕೇಶನ್ ಮತ್ತು ಜಾಗೃತಿ ಡ್ಯಾಶ್‌ಬೋರ್ಡ್ ಗಳು ಸೇರಿವೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಕಾರ್ಯಕ್ರಮದಲ್ಲಿ, ಹದಿಮೂರು ಪ್ರಮುಖ ಇ-ಕಾಮರ್ಸ್ ಕಂಪನಿಗಳು ಗ್ರಾಹಕರ ಸುರಕ್ಷತೆಯನ್ನು ಖಾತರಿಪಡಿಸುವ ಸುರಕ್ಷತಾ ಪ್ರತಿಜ್ಞೆಗೆ ಸಹಿ ಹಾಕಲಿವೆ. ವರ್ಚುವಲ್ ಹಿಯರಿಂಗ್ಸ್ ಮತ್ತು ಗ್ರಾಹಕರ ನ್ಯಾಯಕ್ಕೆ ಡಿಜಿಟಲ್ ಪ್ರವೇಶ ಎಂಬುದು ಈ ವರ್ಷ ರಾಷ್ಟ್ರೀಯ ಗ್ರಾಹಕರ ದಿನದ ಧ್ಯೇಯವಾಕ್ಯವಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande