ಕಬ್ಬಿನ ಹಾಲು ಸೇವಿಸುವುದರಿಂದಾಗುವ ಪ್ರಯೋಜನಗಳು
ಬೆಂಗಳೂರು, 25 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕಬ್ಬಿನ ರಸವೂ ಕೂಡಾ ದೇಹವನ್ನು ಸದೃಢವಾಗಿರಿಸುವ ಗುಣಗಳನ್ನು ಹೊಂದಿದೆ. ಅದೆಷ್ಟೋ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯಲು ಸಹಾಯ ಮಾಡುತ್ತದೆ. ಕಬ್ಬಿನ ರಸ ನಾಲಗೆಗೆ ರುಚಿಕರ ಮಾತ್ರವಲ್ಲ, ದೇಹಕ್ಕೆ ತಂಪೆರೆಯುವುದರ ಜೊತೆಗೆ ಅನೇಕ ಪ್ರಯೋಜನಗಳನ್ನು
Sugarcane milk is considered very healthy in Indian traditional medicine.


ಬೆಂಗಳೂರು, 25 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕಬ್ಬಿನ ರಸವೂ ಕೂಡಾ ದೇಹವನ್ನು ಸದೃಢವಾಗಿರಿಸುವ ಗುಣಗಳನ್ನು ಹೊಂದಿದೆ. ಅದೆಷ್ಟೋ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯಲು ಸಹಾಯ ಮಾಡುತ್ತದೆ.

ಕಬ್ಬಿನ ರಸ ನಾಲಗೆಗೆ ರುಚಿಕರ ಮಾತ್ರವಲ್ಲ, ದೇಹಕ್ಕೆ ತಂಪೆರೆಯುವುದರ ಜೊತೆಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಭಾರತೀಯ ಸಾಂಪ್ರದಾಯಿಕ ವೈದ್ಯ ಪದ್ಧತಿಯಲ್ಲಿ ಕಬ್ಬಿನ ಹಾಲನ್ನು ಅತ್ಯಂತ ಆರೋಗ್ಯಕರ ಎಂದು ಪರಿಗಣಿಸಲಾಗಿದೆ.

ಕಬ್ಬಿನ ಹಾಲು ಉಷ್ಣ ಸ್ವಭಾವದ್ದಾದರೂ ಬೇಸಿಗೆ ಕಾಲದಲ್ಲಷ್ಟೇ ಅಲ್ಲದೇ ಉಳಿದ ದಿನಗಳಲ್ಲಿ ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನಗಳಿವೆ

ಕಬ್ಬಿನ ಹಾಲಿನಲ್ಲಿ ನಮ್ಮ ದೇಹಕ್ಕೆ ಅಗತ್ಯ ಇರುವ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಮೆಗ್ನೀಶಿಯಂ, ಕಬ್ಬಿಣಾಂಶ, ಜಿಂಕ್, ಥೈಮಿನ್, ರಿಬೋಫ್ಲೆವಿನ್ ಮತ್ತು ಅನೇಕ ಅಮಿನೋ ಆಮ್ಲಗಳು ಸೇರಿದಂತೆ ಹಲವಾರು ಪೌಷ್ಟಿಕಾಂಶಗಳಿವೆ.

ಮಲಬದ್ಧತೆಯಲ್ಲಿ ಕಬ್ಬಿನ ರಸವು ವಿರೇಚಕ ಗುಣಗಳನ್ನು ಹೊಂದಿದೆ. ಇದು ಕರುಳಿನ ಚಲನೆಯನ್ನು ಸರಾಗಗೊಳಿಸುತ್ತದೆ, ಮಲಬದ್ಧತೆಯನ್ನು ನಿವಾರಿಸುತ್ತದೆ.

ಕಬ್ಬಿನ ಹಾಲಿನಲ್ಲಿ ನಾರಿನಂಶ ಮತ್ತು ನೈಸರ್ಗಿಕ ಸಕ್ಕರೆ ಇದ್ದು ಇದು ಕೃತಕ ಸಿಹಿಕಾರಕಗಳು ಮತ್ತು ಕೊಬ್ಬಿನ ಆಹಾರ ಪದಾರ್ಥಗಳಿಂದ ದೂರವಿರಲು ಸಹಾಯ ಮಾಡುತ್ತದೆ.

ಇದಲ್ಲದೆ ಕಬ್ಬಿನ ಹಾಲಿನ ಸೇವನೆಯು ಯಕೃತ್ತಿನ ಆರೋಗ್ಯವನ್ನು ವೃದ್ಧಿಸಿ ಡಿಟೊಕ್ಸಿಫಿಕೇಷನ್ ಪ್ರೋಸೆಸ್ ಅನ್ನು ಹೆಚ್ಚು ಮಾಡು ಅದಲ್ಲದೆ ಕ್ಯಾನ್ಸರ್, ಹೃದ್ರೋಗ, ಮಧುಮೇಹದಂತಹ ಹತ್ತು ಹಲವು ಖಾಯಿಲೆಗಳು ಬಾರದಂತೆ ತಡೆಗಟ್ಟುತ್ತದೆ.

ಪಿತ್ತಜನಕಾಂಗದ ಆರೋಗ್ಯಕ್ಕೆ ಕಬ್ಬಿನ ಹಾಲು ಉತ್ತಮವಾಗಿದೆ. ನಿಮ್ಮ ಯಕೃತ್ತು ಆರೋಗ್ಯ ವಾಗಿರಲು, ಒಂದು ಲೋಟ ಕಬ್ಬಿನ ರಸ ನಿಂಬೆ ಬೆರೆಸಿ ದಿನಕ್ಕೆ ಎರಡು ಬಾರಿ ಸೇವಿಸಿ. ಕಬ್ಬಿನ ರಸವು ದೇಹದಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಇದು ಯಕೃತ್ತು ಹಾಳಾಗದಂತೆ ತಡೆಯುತ್ತದೆ.

ಸಾಮಾನ್ಯವಾಗಿ ಮಧುಮೇಹಿಗಳು ಸಕ್ಕರೆ ತಿನ್ನುವುದಿಲ್ಲ, ಆದರೆ, ಕಬ್ಬಿನ ಹಾಲು ಇದಕ್ಕೆ ಅಪವಾದ. ಕಬ್ಬಿನ ಹಾಲಿನಲ್ಲಿ ಸಕ್ಕರೆ ಇದ್ದರೂ ಇದು ನೈಸರ್ಗಿಕವಾಗಿದೆ ಹಾಗೂ ಮಿತ ಪ್ರಮಾಣದಲ್ಲಿದ್ದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಧಿಡೀರನೇ ಏರಿಸುವುದಿಲ್ಲ. ಆದ್ದರಿಂದ ಮಿತ ಪ್ರಮಾಣದಲ್ಲಿ ಮಧುಮೇಹಿಗಳೂ ಸೇವಿಸಬಹುದು.

ಕಬ್ಬಿನ ರಸವು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಕ್ಯಾಲ್ಸಿಯಂ, ಮೆಗ್ನೀಷಿಯಂ, ಪೊಟ್ಯಾಷಿಯಂ, ಕಬ್ಬಿಣ ಮತ್ತು ಮ್ಯಾಂಗನೀಸ್​ನಿಂದ ಸಮೃದ್ಧವಾಗಿದೆ. ದೇಹವು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಸ್ತನ ಕ್ಯಾನ್ಸರ್ ಕಾಯಿಲೆಯ ವಿರದ್ಧವೂ ಹೋರಾಡುವ ಗುಣಗಳಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande