ಪುರಿ, 04 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಐದು ದಿನಗಳ ಕಾಲ ಒಡಿಶಾ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಬೆಳಿಗ್ಗೆ ಒಡಿಶಾದ ಪವಿತ್ರ ನಗರ ಪುರಿಯಲ್ಲಿರುವ 12 ನೇ ಶತಮಾನದ ಶ್ರೀ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿದರು.
ದೇವಾಲಯದ ಒಳಗೆ ಭಗವಾನ್ ಜಗನ್ನಾಥ, ಭಗವಾನ್ ಬಲಭದ್ರ ಮತ್ತು ದೇವಿ ಸುಭದ್ರಾಗೆ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲಲ್ಲಿ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಮತ್ತು ಇತರ ಗಣ್ಯರ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಭಾರಿ ಭದ್ರತೆ ಏರ್ಪಡಿಸಲಾಗಿತ್ತು. ದೇವಸ್ಥಾನದ ಇತಿಹಾಸ ಹಾಗೂ ಪೂಜೆಯ ಮಹತ್ವದ ಬಗ್ಗೆ ಶ್ರೀ ಕೃಷ್ಣ ಅನಂದ ಜೀ ಅವರು ವಿವರವಾಗಿ ರಾಷ್ಟ್ರಪತಿ ದ್ರೌಪದಿಗೆ ವಿವರಿಸಿದರು.
ಬಳಿಕ ಪುರಿಯ ಗೋಪಬಂಧು ಆಯುರ್ವೇದ ಮಹಾವಿದ್ಯಾಲಯದ 75 ನೇ ಘಟಿಕೋತ್ಸವದಲ್ಲಿ ರಾಷ್ಟ್ರಪತಿಮುರ್ಮು ಭಾಗವಹಿಸಿದ್ದರು. ಇಂದು ಮಧ್ಯಾಹ್ನ ಬ್ಲೂ ಫ್ಲ್ಯಾಗ್ ಬೀಚ್ ನಲ್ಲಿ ಭಾರತೀಯ ನೌಕಾಪಡೆ ಆಯೋಜಿಸಿರುವ ವಾರ್ಷಿಕ ನೌಕಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ರಾಷ್ಟ್ರಪತಿಗಳು ಪುರಿಯಲ್ಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್