ಹಿಂದೂ ದಂಪತಿ ಆರು ಮಕ್ಕಳನ್ನು ಹೆರಬೇಕು: ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ
ಬಳ್ಳಾರಿ, 04 ಡಿಸೆಂಬರ್ (ಹಿ.ಸ.) : ಆ್ಯಂಕರ್ : ನಾವೇನು ಅಹಿಂಸೆ ಎನ್ನುವುದಕ್ಕೆ ಮಹಾತ್ಮಾಗಾಂಧೀಜಿ ಅಲ್ಲ. ದೇಶ ಮತ್ತು ವಿದೇಶಗಳಲ್ಲಿ ಹಿಂದೂಗಳ ರಕ್ಷಣೆ ಆಗಬೇಕಿದ್ದಲ್ಲಿ ನಾಥೂರಾಂ ಗೋಡ್ಸೆ ಮತ್ತೊಮ್ಮೆ ಹುಟ್ಟಿ ಬರಬೇಕು. ಹಾಗಾದಲ್ಲಿ ಮಾತ್ರ ಹಿಂದೂಗಳ ರಕ್ಷಣೆ ಸಾಧ್ಯ ಎಂದು ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ
ಹಿಂದೂ ದಂಪತಿ ಆರು ಮಕ್ಕಳನ್ನು ಹೆರಬೇಕು: ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ


ಬಳ್ಳಾರಿ, 04 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ನಾವೇನು ಅಹಿಂಸೆ ಎನ್ನುವುದಕ್ಕೆ ಮಹಾತ್ಮಾಗಾಂಧೀಜಿ ಅಲ್ಲ. ದೇಶ ಮತ್ತು ವಿದೇಶಗಳಲ್ಲಿ ಹಿಂದೂಗಳ ರಕ್ಷಣೆ ಆಗಬೇಕಿದ್ದಲ್ಲಿ ನಾಥೂರಾಂ ಗೋಡ್ಸೆ ಮತ್ತೊಮ್ಮೆ ಹುಟ್ಟಿ ಬರಬೇಕು. ಹಾಗಾದಲ್ಲಿ ಮಾತ್ರ ಹಿಂದೂಗಳ ರಕ್ಷಣೆ ಸಾಧ್ಯ ಎಂದು ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ನಗರದಲ್ಲಿ ಬುಧವಾರ ನಡೆದ ಬಾಂಗ್ಲಾ ಹಿಂದೂಗಳ ರಕ್ಷಣೆಗೆ ಆಗ್ರಹಿಸಿ ಗಡಿಗೆ ಚೆನ್ನಪ್ಪ ವೃತ್ತದಲ್ಲಿ ನಡೆದ `ಬಳ್ಳಾರಿ ಬಂದ್'ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದೂ ಯುವಶಕ್ತಿಯ ರಕ್ತ ಕುದಿಯುತ್ತಿದೆ. ಹಿಂದೂ ಯುವಕರ ಈ ಕುದಿತ ಯಾವಾಗ ಸ್ಫೋಟಗೊಳ್ಳುತ್ತದೆಯೋ, ಆಗ, ಬಾಂಗ್ಲಾ ದೇಶವು ರಕ್ತದಲ್ಲಿ ಕೊಚ್ಚಿ ಹೋಗಲಿದೆ ಎಂದರು.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ - ಆಕ್ರೋಶವನ್ನು ಮೂಡಿಸುತ್ತಿದೆ. ನನ್ನಿಂದ ಸುಮ್ಮನೆ ಕುಳಿತುಕೊಳ್ಳಲು ಆಗುತ್ತಿಲ್ಲ. ನಾವು (ಭಾರತೀಯರು) ಬಳೆ ತೊಟ್ಟಿಲ್ಲ. ಕೇಂದ್ರ ಸರ್ಕಾರ ಸುಮ್ಮನೆ ಕೂತರೂ ಹಿಂದುಗಳೆಲ್ಲ ಬಾಂಗ್ಲಾದಲ್ಲಿಯ ಹಿಂದೂ ವಿರೋಧಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ಹಿಂದೂಗಳು ಜನಸಂಖ್ಯೆ ನಿಯಂತ್ರಣಕ್ಕೆ ಒಳಗಾಗಬಾರದು. ಪ್ರತಿ ದಂಪತಿಯು ಆರು ಮಕ್ಕಳನ್ನು ಹೆರಬೇಕು. ನಕಲಿ ನೋಟು ಮುದ್ರಣ ಜಾಲವನ್ನು ನಿಯಂತ್ರಿಸಲು ಪ್ರಧಾನಿ ಮೋದಿ ಅವರು ಹೊಸ ನೋಟುಗಳನ್ನು ಮುದ್ರಿಸಿದರು. ನಂತರ, ಪಾಕಿಸ್ತಾನ ದಿವಾಳಿಯಾಯಿತು. ಈಗ, ಬಾಂಗ್ಲಾ ದೇಶವು ಹಿಂದೂಗಳ ಮೇಲೆ ದಾಳಿ ಮಾಡುತ್ತಿದ್ದು ದೇಶ ಶಾಂತಿ-ನೆಮ್ಮದಿ ಕಳೆದುಕೊಳ್ಳಲಿದೆ ಎಂದರು.

ಬಂಧನದಲ್ಲಿದರುವ ಇಸ್ಕಾನ್ ಸ್ವಾಮೀಜಿ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಲೂ ಅಲ್ಲಿಯ ಹಿಂದೂ ವಿರೋಧಿಗಳು ಅವಕಾಶ ನೀಡುತ್ತಿಲ್ಲ. ವಕೀಲರ ಮೇಲೆ ಹಲ್ಲೆ ನಡೆಸಿದೆ. ಬಾಂಗ್ಲಾ ಸರ್ಕಾರ ಹಿಂದೂಗಳಿಗೆ ಸೂಕ್ತ ರಕ್ಷಣೆ ನೀಡದೇ ಹೋದಲ್ಲಿ, ನಾವೆಲ್ಲ (ಹಿಂದೂಗಳು) ಬಾಂಗ್ಲಾ ದೇಶದ ಮೇಲೆ ದಂಡೆತ್ತಿ ಹೋಗಲು ಸಿದ್ದರಿರಬೇಕು ಎಂದು ಕರೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande