ಶ್ರೀಹರಿಕೋಟಾ, 4 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ ಇಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ-ಸಿ59 ಉಡಾವಣಾ ವಾಹಕದೊಂದಿಗೆ ಪ್ರೋಬಾ 3 ಉಪಗ್ರಹಗಳ ಉಡಾವಣೆ ಮುಂದೂಡಿದೆ.
ಇಂದು ಸಂಜೆ 04.08 ಕ್ಕೆ ನಿಗದಿತ ಉಡಾವಣೆಗೆ ಕೆಲವೇ ನಿಮಿಷಗಳ ಮೊದಲು, ಇಸ್ರೋ ಮುಂದೂಡಿಕೆಯನ್ನು ಘೋಷಿಸಿತು ಮತ್ತು ಮಿಷನ್ ಉಡಾವಣೆ ನಾಳೆ ಸಂಜೆ 04:12 ಕ್ಕೆ ನಡೆಯಲಿದೆ ಎಂದು ಹೇಳಿದೆ.
ಪ್ರೊಬಾ -3 ಬಾಹ್ಯಾಕಾಶ ನೌಕೆಯಲ್ಲಿ ಪತ್ತೆಯಾದ ಅಸಂಗತತೆಯಿಂದಾಗಿ ಪಿಎಸ್ಎಲ್ವಿ-ಸಿ 59 / ಪ್ರೊಬಾ -3 ಉಡಾವಣೆಯನ್ನು ನಾಳೆ 04:12 ಗಂಟೆಗೆ ಮರು ನಿಗದಿಪಡಿಸಲಾಗಿದೆ.
ಈ ಕಾರ್ಯಾಚರಣೆಯ ಉದ್ದೇಶ ನಿಖರವಾದ ಹಾರಾಟ ನಿರ್ವಹಣೆ ಮಾಡುವುದಾಗಿದೆ . ಈ ಕಾರ್ಯಾಚರಣೆಯು 2 ಬಾಹ್ಯಾಕಾಶ ನೌಕೆಗಳನ್ನು ಒಳಗೊಂಡಿದೆ. ಅವುಗಳನ್ನು ಕರೋನಾಗ್ರಾಫ್ ಬಾಹ್ಯಾಕಾಶ ನೌಕೆ (ಸಿಎಸ್‌ಸಿ) ಮತ್ತು ಆಕಲ್ಟರ್ ಸ್ಪೇಸ್‌ಕ್ರಾಫ್ಟ್ (ಒಎಸ್‌ಸಿ) ಎಂದು ಹೆಸರಿಸಲಾಗಿದೆ. ಇವುಗಳನ್ನು 'ಸ್ಟ್ಯಾಕ್ಡ್ ಕಾನ್ಫಿಗರೇಶನ್' (ಒಂದರ ಮೇಲೊಂದು) ಮೂಲಕ ಒಟ್ಟಿಗೆ ಉಡಾವಣೆ ಮಾಡಲಾಗತ್ತಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್