ನವದೆಹಲಿ, 04 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಪ್ರಸ್ತುತ ಭಾರತ ಪ್ರವಾಸದಲ್ಲಿರುವ ಇಸ್ರೇಲ್‌ನ ಕೈಗಾರಿಕೆ ಮತ್ತು ಆರ್ಥಿಕ ಸಚಿವ ನಿರ್ ಬರ್ಕತ್ ಅವರು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿದರು.
ಉಭಯ ಸಚಿವರ ನಡುವಿನ ಸಭೆಯು ನವೋದ್ಯಮಗಳಲ್ಲಿ, ವಿಶೇಷವಾಗಿ ಬಾಹ್ಯಾಕಾಶ ಮತ್ತು ಕ್ವಾಂಟಮ್ ತಂತ್ರಜ್ಞಾನದಲ್ಲಿ ಸಹಯೋಗ, ನವೀನ ಉಪಕ್ರಮಗಳ ಅಳವಡಿಕೆಯೊಂದಿಗೆ ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಸಹಯೋಗದ ವೃದ್ಧಿಗೊಳಿಸುವುದರ ಮೇಲೆ ಕೇಂದ್ರೀಕರಿಸಿತ್ತು.
ಸಭೆಯಲ್ಲಿ, ಡಾ. ಸಿಂಗ್ ಅವರು ಭಾರತದ ರಾಷ್ಟ್ರೀಯ ಕ್ವಾಂಟಮ್ ಮಿಷನ್‌ನ ಪರಿವರ್ತಕ ಸಾಮರ್ಥ್ಯದ ಕುರಿತು ಪ್ರಸ್ತಾಪಿಸಿದರು.
ನಿರ್ಣಾಯಕ ಕ್ವಾಂಟಮ್ ತಂತ್ರಜ್ಞಾನಗಳನ್ನು ಸಹ-ಅಭಿವೃದ್ಧಿಪಡಿಸಲು ಭಾರತೀಯ ಸಂಸ್ಥೆಗಳೊಂದಿಗೆ ಪಾಲುದಾರರಾಗಲು ಕೇಂದ್ರ ಸಚಿವರು ಇಸ್ರೇಲ್‌ನ ನವೋದ್ಯಮಗಳನ್ನು ಆಹ್ವಾನಿಸಿದರು. ಬಾಹ್ಯಾಕಾಶ ಪರಿಸರ ವ್ಯವಸ್ಥೆಯಲ್ಲಿ ಭಾರತದ ಬೆಳವಣಿಗೆಯನ್ನು ಪ್ರಸ್ತಾಪಿಸಿದ ಅವರು, ಇಸ್ರೇಲಿ ಬಾಹ್ಯಾಕಾಶ ನವೋದ್ಯಮಗಳು ತಮ್ಮ ಭಾರತೀಯ ಸಹವರ್ತಿಗಳೊಂದಿಗೆ ಸಹಯೋಗಿಸಲು ಅಪಾರ ಸಾಮರ್ಥ್ಯವನ್ನು ಹೊಂದಿವೆ ಎಂದರು
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್