ಗಳಿಕೆಯಲ್ಲಿ ದಾಖಲೆ  ಸೃಷ್ಟಿಸುತ್ತಿರುವ ಪುಷ್ಪ 2. ಚಲನಚಿತ್ರ 
ಮುಂಬೈ, 31 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಪುಷ್ಪ 2 ಬಾಕ್ಸ್ ಆಫೀಸ್ ನಲ್ಲಿ ತನ್ನ ಛಾಪು ಮೂಡಿಸುತ್ತಿದೆ. 'ಪುಷ್ಪ 2' ಕಳೆದ 25 ದಿನಗಳಲ್ಲಿ ವಿಶ್ವದಾದ್ಯಂತ 1750 ಕೋಟಿ ರೂಪಾಯಿ ಗಳಿಕೆ ದಾಟಿದೆ. ಗಳಿಕೆ ಬಗ್ಗೆ ಮೈತ್ರಿ ಮೂವಿ ಮೇಕರ್ಸ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಈ ಲೆಕ್ಕಾಚಾರದ
ಗಳಿಕೆಯಲ್ಲಿ ದಾಖಲೆ  ಸೃಷ್ಟಿಸುತ್ತಿರುವ ಪುಷ್ಪ 2. ಚಲನಚಿತ್ರ


ಮುಂಬೈ, 31 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಪುಷ್ಪ 2 ಬಾಕ್ಸ್ ಆಫೀಸ್ ನಲ್ಲಿ ತನ್ನ ಛಾಪು ಮೂಡಿಸುತ್ತಿದೆ. 'ಪುಷ್ಪ 2' ಕಳೆದ 25 ದಿನಗಳಲ್ಲಿ ವಿಶ್ವದಾದ್ಯಂತ 1750 ಕೋಟಿ ರೂಪಾಯಿ ಗಳಿಕೆ ದಾಟಿದೆ.

ಗಳಿಕೆ ಬಗ್ಗೆ ಮೈತ್ರಿ ಮೂವಿ ಮೇಕರ್ಸ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.

ಈ ಲೆಕ್ಕಾಚಾರದ ಪ್ರಕಾರ ಈ ಚಲನಚಿತ್ರ ಅತೀ ಶೀಘ್ರದಲ್ಲಿ ವಿಶ್ವದಾದ್ಯಂತ ರು.2000 ಕೋಟಿ ಗಳಿಸಬಹುದು ಎಂದು ಹೇಳಲಾಗಿದೆ.

ಸುಕುಮಾರ್ ನಿರ್ದೇಶನದ 'ಪುಷ್ಪ 2' ಮೊದಲ ವಾರದಲ್ಲಿ 725.8 ಕೋಟಿ, ಎರಡನೇ ವಾರದಲ್ಲಿ 264.8 ಕೋಟಿ ಮತ್ತು ಮೂರನೇ ವಾರದಲ್ಲಿ 129.5 ಕೋಟಿ ಗಳಿಕೆ ಮಾಡಿದೆ. ನಾಲ್ಕನೇ ಶುಕ್ರವಾರ ರೂ.8.75 ಕೋಟಿ, ನಾಲ್ಕನೇ ಶನಿವಾರ ರೂ.12.5 ಕೋಟಿ ಮತ್ತು ನಾಲ್ಕನೇ ಭಾನುವಾರ ರೂ.15.65 ಕೋಟಿ ಗಳಿಕೆ ಮಾಡಿದೆ. ನಾಲ್ಕನೇ ವಾರಾಂತ್ಯ ಮುಗಿದ 26ನೇ ದಿನದಲ್ಲಿ ಚಿತ್ರವು ಎಲ್ಲಾ ಭಾಷೆಗಳಲ್ಲಿ ಸೇರಿ ಸುಮಾರು 6.65 ಕೋಟಿ ರೂಪಾಯಿ ವ್ಯವಹಾರ ಮಾಡಿದೆ. ನಟ ಅಲ್ಲು ಅರ್ಜುನ್ ಅವರ ಚಿತ್ರವು ಭಾರತೀಯ ಬಾಕ್ಸ್ ಆಫೀಸ್ ನಲ್ಲಿ 26 ನೇ ದಿನದವರೆಗೆ ಒಟ್ಟು ರೂ.1163.65 ಕೋಟಿಗಳನ್ನು ಗಳಿಕೆ ಸಂಗ್ರಹಿಸಿದೆ ಎಂದು ಹೇಳಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ


 rajesh pande