ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರದಾನ
ನವದೆಹಲಿ, 26 ಡಿಸೆಂಬರ್ (ಹಿ.ಸ.) : ಆ್ಯಂಕರ್ :ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ನವದೆಹಲಿಯಲ್ಲಿಂದು ಅಸಾಧಾರಣ ಸಾಧನೆ ಮಾಡಿದ ೧೭ ಮಕ್ಕಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ ಪ್ರದಾನ ಮಾಡಿ ಗೌರವಿಸಿದರು. ೧೪ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮಕ್ಕಳಿಗೆ ೭ ವಿಭಾಗಗಳಲ್ಲಿ ಕಲೆ ಹಾಗ
ರಾಷ್ಟ್ರಪತಿಗಳಿಂದ 17 ಮಕ್ಕಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರದಾನ


ನವದೆಹಲಿ, 26 ಡಿಸೆಂಬರ್ (ಹಿ.ಸ.) :

ಆ್ಯಂಕರ್ :ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ನವದೆಹಲಿಯಲ್ಲಿಂದು ಅಸಾಧಾರಣ ಸಾಧನೆ ಮಾಡಿದ ೧೭ ಮಕ್ಕಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ ಪ್ರದಾನ ಮಾಡಿ ಗೌರವಿಸಿದರು.

೧೪ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮಕ್ಕಳಿಗೆ ೭ ವಿಭಾಗಗಳಲ್ಲಿ ಕಲೆ ಹಾಗೂ ಸಂಸ್ಕೃತಿ, ಶೌರ್ಯ, ನಾವಿನ್ಯತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜಸೇವೆ, ಕ್ರೀಡೆ ಮತ್ತು ಪರಿಸರ ವಲಯದಲ್ಲಿ ಅವರ ಸಾಧನೆಗಳಿಗಾಗಿ ಪುರಸ್ಕಾರಗಳನ್ನು ನೀಡಿದರು.

ಪದಕ, ಪ್ರಮಾಣಪತ್ರ ಹಾಗೂ ಪ್ರಶಂಸನಾ ಪತ್ರಗಳನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಭೆ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಮುರ್ಮು, ವೀರ ಬಾಲ ದಿನದಂದು ತ್ಯಾಗ ಬಲಿದಾನಗೈದವರಿಗೆ ಗೌರವ ಸಲ್ಲಿಸಿದರು. ಸಿಖ್‌ರ ೧೦ನೇ ಧರ್ಮಗುರು ಗೋವಿಂದ್ ಸಿಂಗ್ ಅವರ ಕಿರಿಯ ಪುತ್ರರ ತ್ಯಾಗ ಮತ್ತು ಅಪ್ರತಿಮ ಧೈರ್ಯವನ್ನು ಗೌರವಿಸಲು ಪ್ರತಿವರ್ಷ ಈ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿದ ಮಕ್ಕಳನ್ನು ಅಭಿನಂದಿಸಿದ ರಾಷ್ಟ್ರಪತಿಯವರು, ಅವರ ಕಾರ್ಯ ಅಸಾಧಾರಣವಾಗಿದ್ದು, ಬೆರಗು ಮೂಡಿಸವಂತದ್ದು, ಎಂದು ಶ್ಲಾಘಿಸಿ, ಪ್ರಶಸ್ತಿ ಪುರಸ್ಕೃತ ಪ್ರತಿಯೊಬ್ಬ ಮಕ್ಕಳು ಅಪ್ರತಿಮ ಗುಣಗಳನ್ನು ಹೊಂದಿದ್ದು, ಅವರ ಸಾಧನೆಗಳು ರಾಷ್ಟ್ರದ ಎಲ್ಲ ಜನರಿಗೆ ಸ್ಫೂರ್ತಿ ನೀಡುತ್ತದೆ ಎಂದು ಒತ್ತಿ ಹೇಳಿದರು. ರಾಷ್ಟ್ರಪತಿ ಮುರ್ಮು ಅವರು, ಈ ಸಾಧನೆಗಳನ್ನು ವಿವಿಧ ಮಾಧ್ಯಮಗಳನ್ನು ಬಳಸಿ ಜನರಿಗೆ ತಿಳಿಸುವ ಮೂಲಕ ಜಾಗೃತಿ ಮೂಡಿಸಬೇಕೆಂದು ಮನವಿ ಮಾಡಿದರು.

---------------

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande