ನವದೆಹಲಿ, 26 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಸಾಂಪ್ರದಾಯಿಕ ಆಯುರ್ವೇದ ಔಷಧಿಗಳನ್ನು ನೀಡುತ್ತಿದ್ದ ಪಾರಂಪರಿಕ ವೈದ್ಯ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗಲು ಕೇಂದ್ರ ಆಯುಷ್ ಸಚಿವಾಲಯ ಒಪ್ಪಿಗೆ ನೀಡಿದೆ.
ಆಯುಷ್ ಫಾರ್ ಆಲ್ ಹೊಲಿಸ್ಟಿಕ್ ಹೆಲ್ತ್ ಕೇರ್ ಥ್ರೂ ನ್ಯಾಷನಲ್ ಆಯುಷ್ ಮಿಷನ್ ಶೀರ್ಷಿಕೆಯ ವೀಡಿಯೊ ಚಿತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಆಯುಷ್ ರಾಜ್ಯ ಖಾತೆ ಸಚಿವ ಪ್ರತಾಪ್ ರಾವ್ ಜಾಧವ್, ಭಾರತೀಯ ಆಯುರ್ವೇದ ಪದ್ಧತಿ ಜನರ ಆರೋಗ್ಯದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದ್ದು, ಆಯುರ್ವೇದ ಕುರಿತು ವೀಡಿಯೊ ಚಿತ್ರಗಳು ಜನರಿಗೆ ಹೆಚ್ಚಿನ ಮಾಹಿತಿ ನೀಡಲಿವೆ.ಸಾಮಾನ್ಯ ಜನರಿಗೆ ಮಾಹಿತಿಯನ್ನು ಸುಲಭವಾಗಿ ಲಭಿಸುವಂತಾಗಬೇಕೆಂದು ವೀಡಿಯೊ ಚಿತ್ರಗಳನ್ನು ಸಿದ್ಧಪಡಿಸಲಾಗಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಆರೋಗ್ಯ ಸೇವೆಯನ್ನು ಸುಧಾರಿಸಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ಭಾಗದ ಜನರಿಗೆ ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೇವೆ ನೀಡಲು ಆಯುಷ್ ಇಲಾಖೆ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್