ಕುವೈತ್‌ ತಲುಪಿದ ಪ್ರಧಾನಿ ನರೇಂದ್ರ ಮೋದಿ 
ಕುವೈತ್‌, 21 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಎರಡು ದಿನಗಳ ಪ್ರವಾಸದ ಹಿನ್ನೆಲೆ ಕುವೈತ್‌ಗೆ ಇಂದು ಮಧ್ಯಾಹ್ನ ತಲುಪಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆತ್ಮೀಯ ಸ್ವಾಗತ ದೊರೆಯಿತು. ನಂತರ ಪ್ರಧಾನಿ ಅವರು, ಗಲ್ಫ್ ಸ್ಪಿಕ್ ಕಾರ್ಮಿಕರ ಶಿಬಿರಕ್ಕೆ ಭೇಟಿ ನೀಡಿ ಕುವೈತ್‌ನಲ್ಲಿರುವ ಭಾರತದ ಕಾರ್ಮಿಕರನ್ನು


ಕುವೈತ್‌ಕುವೈತ್‌, 21 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಎರಡು ದಿನಗಳ ಪ್ರವಾಸದ ಹಿನ್ನೆಲೆ ಕುವೈತ್‌ಗೆ ಇಂದು ಮಧ್ಯಾಹ್ನ ತಲುಪಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆತ್ಮೀಯ ಸ್ವಾಗತ ದೊರೆಯಿತು.

ನಂತರ ಪ್ರಧಾನಿ ಅವರು, ಗಲ್ಫ್ ಸ್ಪಿಕ್ ಕಾರ್ಮಿಕರ ಶಿಬಿರಕ್ಕೆ ಭೇಟಿ ನೀಡಿ ಕುವೈತ್‌ನಲ್ಲಿರುವ ಭಾರತದ ಕಾರ್ಮಿಕರನ್ನು ಭೇಟಿ ಮಾಡಿ ಸಂವಾದ ನಡೆಸಿದರು.

ಕುವೈತ್‌ನ ಅಧ್ಯಕ್ಷ ಶೇಖ್ ಮೆಶಾಲ್ ಅಲ್-ಅಹಮ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆಹ್ವಾನದ ಮೇರೆಗೆ ತೆರೆಳಿರುವ ಪ್ರಧಾನಿ ಅವರು, ಮುಂದಿನ ಎರಡು ದಿನಗಳ ಕಾಲ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

೪೩ ವರ್ಷಗಳಲ್ಲಿ ಕುವೈತ್‌ಗೆ ಭಾರತದ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿರುವುದು ಇದೇ ಮೊದಲು. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಭೇಟಿಯು ಉಭಯ ದೇಶಗಳ ಬಾಂಧವ್ಯವನ್ನು ಬಲಪಡಿಸಲಿದೆ ಎಂದು ತಿಳಿಸಿದ್ದಾರೆ.

ತಮ್ಮ ನಿರ್ಗಮನ ಹೇಳಿಕೆಯಲ್ಲಿ, ಭಾರತವು ಕುವೈತ್‌ನೊಂದಿಗೆ ಹಲವಾರು ತಲೆಮಾರುಗಳಿಂದ ಪೋಷಿಸಲ್ಪಟ್ಟ ಐತಿಹಾಸಿಕ ಸಂಬಂಧವನ್ನು ಗೌರವಿಸುತ್ತದೆ ಎಂದು ಹೇಳಿದರು. ಉಭಯ ರಾಷ್ಟ್ರಗಳು ಕೇವಲ ವ್ಯಾಪಾರ ಮತ್ತು ಇಂಧನ ಕ್ಷೇತ್ರಗಳ ಪಾಲುದಾರರಾಗಿ ಉಳಿಯದೆ, ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಶಾಂತಿ, ಭದ್ರತೆ, ಸ್ಥಿರತೆ ಹಾಗೂ ಸಮೃದ್ಧಿಯೆಡೆಗೆ ಬದ್ಧತೆ ಹೊಂದಿವೆ ಎಂದರು.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande