ನವದೆಹಲಿ, 19 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಮತ್ತು ನೆದರ್ ಲ್ಯಾಂಡ್‌ನ ಪ್ರಧಾನಿ ಡಿಕ್ ಸ್ಕೂಫ್ ಅವರೊಂದಿಗೆ ಕಳೆದ ರಾತ್ರಿ ನೀರು, ಕೃಷಿ, ಆರೋಗ್ಯ ಕ್ಷೇತ್ರಗಳಲ್ಲಿ ಅಸ್ತಿತ್ವದಲ್ಲಿರುವ ಸಹಕಾರವನ್ನು ಇನ್ನಷ್ಟು ವಿಸ್ತರಿಸುವ ಮಾರ್ಗಗಳ ಕುರಿತು ಚರ್ಚಿಸಿದರು ಎಂದ ುಪ್ರಧಾನಿ ಕಾರ್ಯಾಲಯ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.
ನೆದರ್ ಲ್ಯಾಂಡ್ ಪ್ರಧಾನಿಯಿಂದ ನರೇಂದ್ರ ಮೋದಿ ಅವರು ದೂರವಾಣಿ ಕರೆಯನ್ನು ಸ್ವೀಕರಿಸಿದ ಮಾತನಾಡಿದರು.
ಇಬ್ಬರೂ ನಾಯಕರು ಭಾರತ ಮತ್ತು ನೆದರ್ ಲ್ಯಾಂಡ್ಸ್ ನಡುವಿನ ವಿಶ್ವಾಸಾರ್ಹ ಮತ್ತು ಮೌಲ್ಯಯುತ ಪಾಲುದಾರಿಕೆಯನ್ನು ಒತ್ತಿ ಹೇಳಿದರು. ಅದು ಹಂಚಿಕೆಯ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವ ಮತ್ತು ಕಾನೂನಿನ ನಿಯಮದ ಮೇಲಿನ ನಂಬಿಕೆಯನ್ನು ಆಧರಿಸಿದೆ. ದ್ವಿಪಕ್ಷೀಯ ಪಾಲುದಾರಿಕೆಯನ್ನು ಉನ್ನತೀಕರಿಸಲು ಮತ್ತು ವ್ಯಾಪಾರ, ರಕ್ಷಣೆ, ಭದ್ರತೆ, ನಾವೀನ್ಯತೆ, ಹಸಿರು ಹೈಡ್ರೋಜನ್ ಮತ್ತು ಸೆಮಿಕಂಡಕ್ಟರ್‌ಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯತಂತ್ರದ ಆಯಾಮವನ್ನು ಒದಗಿಸಲು ಅವರು ಒಪ್ಪಿಕೊಂಡರು.
ಶಿಕ್ಷಣ ಮತ್ತು ಸಂಸ್ಕೃತಿಯ ಕ್ಷೇತ್ರದಲ್ಲಿ ಜನರ ಸಂಬಂಧಗಳುಮತ್ತಷ್ಟು ವಿಸ್ತರಿಸಲು ಇಬ್ಬರೂ ನಾಯಕರು ಒಪ್ಪಿದರು. ಉಭಯ ನಾಯಕರು ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಶಾಂತಿ, ಭದ್ರತಾ ಸಹಕಾರ ಮತ್ತು ಸ್ಥಿರತೆ ಉತ್ತೇಜಿಸುವ ಕೆಲಸ ಮುಂದುವರಿಸುವ ಬದ್ಧತೆಯನ್ನು ಪುನರುಚ್ಚರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್