ನವದೆಹಲಿ, 10 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬಡತನ ನಿರ್ಮೂಲನೆ, ಹಸಿವು ನಿರ್ಮೂಲನೆ ಮತ್ತು ಯುವಕರಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವ ನೀತಿಗಳನ್ನು ಜಾರಿಗೊಳಿಸುವುದರೊಂದಿಗೆ ಭಾರತ ವಿಶ್ವದ ಮುಂದೆ ಪ್ರಕಾಶಮಾನವಾದ ಉದಾಹರಣೆಯಾಗಿ ನಿಂತಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
ನವ ದೆಹಲಿಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಆಯೋಜಿಸಿದ್ದ ಮಾನವ ಹಕ್ಕುಗಳ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ, ೫ ಸಾವಿರ ವರ್ಷಗಳಿಗಿಂತಲೂ ಹೆಚ್ಚಿನ ನಾಗರಿಕ ಪರಂಪರೆಯನ್ನು ಹೊಂದಿರುವ ಭಾರತವು ಸಹಾನುಭೂತಿ ಮತ್ತು ಸಾಮರಸ್ಯದ ಸಮುದಾಯದೊಳಗಿನ ವ್ಯಕ್ತಿಗಳ ಪರಸ್ಪರ ಸಂಪರ್ಕದ ಮೌಲ್ಯಗಳನ್ನು ದೀರ್ಘಕಾಲದಿಂದ ಎತ್ತಿಹಿಡಿದಿದೆ ಎಂದು ಒತ್ತಿ ಹೇಳಿದರು.
ಧ್ವನಿಯಿಲ್ಲದವರ ಧ್ವನಿಯಾಗಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ನ್ಯಾಯಾಂಗ ಮತ್ತು ಪ್ರಮುಖ ಮಧ್ಯಸ್ಥಗಾರರು ಸೇರಿದಂತೆ ಇತರ ಆಯೋಗಗಳ ದಣಿವರಿಯದ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. ಎಲ್ಲರಿಗೂ ಮಾನವ ಹಕ್ಕುಗಳನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಅವರ ದೃಢ ಬದ್ಧತೆ ಮತ್ತು ಅವಿರತ ಪ್ರಯತ್ನಗಳಿಗಾಗಿ ಅವರನ್ನು ರಾಷ್ಟ್ರಪತಿ ಅಭಿನಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್