ಬೆಂಗಳೂರು, 10 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಚಿತ್ರ ರಂಗದ ಹಲವು ನಟರು, ಕಲಾವಿದರು ಎಸ್. ಎಂ. ಕೃಷ್ಣ ಅವರ ಅಂತಿಮ ದರ್ಶನ ಪಡೆದರು. ನಟ ಸಾರಾ ಗೋವಿಂದು, ಶಿವಣ್ಣ,ಅಶ್ವಿನಿ ಪುನೀತ್ ರಾಜ್‌ಕುಮಾರ್ ,ಯುವರಾಜ್‌ಕುಮಾರ್, ಸೇರಿದಂತೆ ಹಲವು ಚಿತ್ರ ತಾರೆಯರು ಎಸ್. ಎಂ. ಕೃಷ್ಣ ಅವರ ಅಂತಿಮ ದರ್ಶನ ಪಡೆದರು.
ಈ ಸಂದರ್ಭದಲ್ಲಿ ನಟ ಶಿವಣ್ಣ ಮಾತನಾಡಿ, ಎಸ್.ಎಂ ಕೃಷ್ಣ ಅವರ ಮೇಲೆ ತುಂಬಾ ಗೌರವಿದೆ. ಎಸ್. ಎಂ. ಕೃಷ್ಣ ಅವರ ನಿಧನ ನಮ್ಮ ರಾಜ್ಯಕ್ಕೆ ತುಂಬಲಾರದ ನಷ್ಟ. ವೀರಪ್ಪನ್ ಅವರು ಅಪ್ಪನ ಅಪಹರಣ ಮಾಡಿದ ಸಂದರ್ಭದಲ್ಲಿ ಎಸ್.ಎಂ ಕೃಷ್ಣ ಅವರು ನಮ್ಮ ಕುಟುಂಬದ ಜೊತೆ ನಿಂತಿದ್ದರು.ಎಸ್. ಎಂ. ಕೃಷ್ಣ ಅವರು ನಮ್ಮ ಕುಟುಂಬದ ಸದಸ್ಯ ಇದ್ದಂತೆ ಇದ್ದವರು. ನಮಗೆ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ಕರ್ನಾಟಕ, ಬೆಂಗಳೂರಿಗೆ ಅವರ ಕೊಡುಗೆ ಅಪಾರವಾಗಿದೆ ಎಂದು ಸ್ಮರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್