ಬೆಂಗಳೂರು, 10 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಅಮೃತ ಬಳ್ಳಿ, ಹೆಸರು ಹೇಳುವಂತೆ ಇದು ಭೂಮಿಯ ಮೇಲೆ ದೊರಕುವ ಅಮೃತ ಎಂದರೆ ತಪ್ಪಾಗಲಾರದು.ವ್ಯಾಧಿ ಕ್ಷಮತೆ ಹೆಚ್ಚಿಸಲು, ಹಲವಾರು ಕಾಯಿಲೆಗಳಿಗೆ ಮನೆಮದ್ದಾಗಿ ಬಳಸಬಹುದಾದ ಆಯುರ್ವೇದ, ವನಸ್ಪತಿ ಔಷಧಗಳಲ್ಲಿ ಅಮೃತ ಬಳ್ಳಿಯ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ.
ಇಷ್ಟು ದಿನಗಳ ಕಾಲ ಅಷ್ಟೊಂದು ಪರಿಚಯವಿರದ ಈ ಬಳ್ಳಿ ಈ ಕರೊನಾ ಸಾಂಕ್ರಾಮಿಕ ರೋಗ ವಕ್ಕರಿಸಿದ ನಂತರ ಸರ್ವರಿಗು ಪರಿಚಯವಾಯಿತು. ಕೊರೊನಾದಿಂದಾಗಿ ಗಿಡಮೂಲಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಬಂದಿದ್ದು, ಅಮೃತಬಳ್ಳಿ ಸೇರಿದಂತೆ ಹಲವು ಗಿಡಮೂಲಿಕೆಗಳನ್ನು ಕೊರೊನಾ ವೈರಸ್ ವಿರುದ್ಧದ ಚಿಕಿತ್ಸೆಗಳಲ್ಲಿರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಬಳಸಲಾಗುತ್ತಿದೆ.
ಇದು ಹೆಸರಿಗೆ ತಕ್ಕಂತೆ ನಮ್ಮ ಆರೋಗ್ಯಕ್ಕೆ ನಿಜಕ್ಕೂ ಅಮೃತ ಎಂದೇ ಹೇಳಬಹುದು. ಏಕೆಂದರೆ ಇದರಲ್ಲಿ ಆರೋಗ್ಯವನ್ನು ವೃದ್ಧಿಸುವ ಗುಣಗಳಿವೆ.
ಅಮೃತ ಬಳ್ಳಿಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸುಧಾರಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಮೃತ ಬಳ್ಳಿ ಹಲವಾರು ರೋಗಗಳು ಬಾರದಂತೆ ನಿಯಂತ್ರಿಸುತ್ತದೆ. ಇದು ರೋಗ ನಿರೋಧಕ ಶಕ್ತಿ ಹೊಂದಿದೆ.
ಯಕೃತ್ತಿಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಅಮೃತ ಬಳ್ಳಿ ಗುಣಪಡಿಸುವುದು. ಹೊಟ್ಟೆ ಉಬ್ಬರ, ಹೊಟ್ಟೆ ಕಿವುಚಿದಂತಾಗುವುದು, ಹೊಟ್ಟೆ ಉರಿಯಂತಹ ಸಮಸ್ಯೆಗಳನ್ನು ಬಹುಬೇಗ ನಿವಾರಣೆ ಮಾಡುವುದು.
ಅಮೃತಬಳ್ಳಿಯ ಎಲೆಗಳಿಗಿಂತ ಕಾಂಡ ಹೆಚ್ಚಿನ ಶಕ್ತಿ ಹೊಂದಿದೆ. ಔಷಧ ತಯಾರಿಕೆಗೆ ಅಥವಾ ಅಮೃತಬಳ್ಳಿಯ ಪುಡಿ ತಯಾರಿಸಲು ಇದರ ಕಾಂಡವನ್ನು ಒಣಗಿಸಿ ಪುಡಿ ಮಾಡಲಾಗುತ್ತದೆ. ಇದು ಕಷಾಯ ತಯಾರಿಕೆಗೆ ಸೂಕ್ತ ಚೂರ್ಣ.
ಅಮೃತ ಬಳ್ಳಿಯ ಎಲೆಗಳನ್ನು ಬೆಲ್ಲದೊಂದಿಗೆ ಸೇವಿಸಿದರೆ ಮಲಬದ್ಧತೆಯ ಸಮಸ್ಯೆ ನಿವಾರಣೆಯಾಗುತ್ತದೆ.
ಅಮೃತ ಬಳ್ಳಿಯ ರಸವು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸುಧಾರಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಒಂದು ಚಮಚ ಅಮೃತಬಳ್ಳಿಯ ಕಾಂಡದ ಪುಡಿಯನ್ನು ಒಂದು ಲೋಟ ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ ಅರ್ಧ ಲೋಟಕ್ಕೆ ಇಳಿದ ನಂತರ ಕಷಾಯದ ರೀತಿಯಲ್ಲಿದಿನಕ್ಕೆ ಒಂದು ಬಾರಿ ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೆ ಜ್ವರವೂ ಶಮನವಾಗುತ್ತದೆ.
ಸಂಶೋಧನೆ ಪ್ರಕಾರ ಅಮೃತ ಬಳ್ಳಿಯು ಕೊಲೆಸ್ಟ್ರಾಲ್ ಮಟ್ಟವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಅಲ್ಲದೆ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮತ್ತೊಂದು ಅಧ್ಯಯನವು ಪರೋಕ್ಷವಾಗಿ ನಿಮ್ಮ ಹೃದಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್