ನವದೆಹಲಿ, 10 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಭಾರತದ ಪ್ರಮುಖ ಉದ್ಯಮ ಅದಾನಿ ಸಮೂಹದ ವಿರುದ್ಧ ಲಂಚದ ಆರೋಪ ಹೊರಿಸಲಾಗಿದೆ ಎಂದು ಆರೋಪಿಸಿ ಪ್ರತಿಪಕ್ಷ ಇಂಡಿಯಾ ಬಣದ ಸಂಸದರು ಸಂಸತ್ ಭವನದ ಸಂಕೀರ್ಣದಲ್ಲಿ ಇಂದು ಸಹ ವಿನೂತನ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್, ಡಿಎಂಕೆ, ಜೆಎಂಎಂ ಮತ್ತು ಎಡಪಕ್ಷಗಳ ಸಂಸದರು ಮಕರ ದ್ವಾರದ ಮೆಟ್ಟಿಲುಗಳ ಮುಂದೆ ಸೇರಿ ಮೋದಿ- ಅದಾನಿ ಭಾಯಿ ಭಾಯಿ ಎಂದು ಬರೆದಿದ್ದ ಕಪ್ಪು ಜೋಳಿಗೆ ಹಿಡಿದು ಪ್ರತಿಭಟನೆ ನಡೆಸಿದರು.
ಲೋಕ ಸಭೆಯ ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಜೆಎಂಎಂ ನಾಯಕಿ ಮಹುವಾ ಮಾಜಿ, ಡಿಎಂಕೆ ನಾಯಕಿ ಕನಿಮೋಳಿ ಕರುಣಾನಿಧಿ ಮತ್ತು ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಒಂದು ಬದಿಯಲ್ಲಿ ಮೋದಿ ಮತ್ತು ಅದಾನಿ ಅವರ ವ್ಯಂಗ್ಯ ಚಿತ್ರಗಳು ಮತ್ತು ಬ್ಯಾಗ್‌ನ ಹಿಂಭಾಗದಲ್ಲಿ 'ಮೋದಿ ಅದಾನಿ ಭಾಯಿ ಭಾಯ್' ಎಂದು ಬರೆದ ಕಪ್ಪು 'ಜೋಳಿಗೆಗಳನ್ನು ಹಿಡಿದಿದ್ದ ಸಂಸದರು, ಮೋದಿ ಮತ್ತು ಅದಾನಿ ನಡುವಿನ ಆರೋಪದ ವಿರುದ್ಧ ಘೋಷಣೆಗಳನ್ನು ಹಾಕಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್