ಪ್ರೀ-ಕ್ವಾರ್ಟರ್ ಅಂತಿಮ ಪಂದ್ಯ : ಭಾರತದ ಬ್ಯಾಡ್ಮಿಂಟನ್ ಪಟುಗಳ ಸೆಣಸು
ಚೀನಾ ಮಾಸ್ಟರ್‍ಸ್-೨೦೨೪ ಟೂರ್ನಿ ; ಪ್ರೀ-ಕ್ವಾರ್ಟರ್ ಫೈನಲ್‌ನಲ್ಲಿಂದು ಭಾರತದ ಬ್ಯಾಡ್ಮಿಂಟನ್ ಪಟುಗಳ ಸೆಣಸು
ಪ್ರೀ-ಕ್ವಾರ್ಟರ್ ಅಂತಿಮ ಪಂದ್ಯ : ಭಾರತದ ಬ್ಯಾಡ್ಮಿಂಟನ್ ಪಟುಗಳ ಸೆಣಸು


ಶೆನ್‌ಜೆನ್‌, 21 ನವೆಂಬರ್ (ಹಿ.ಸ.) :

ಆ್ಯಂಕರ್ : ಚೀನಾದ ಶೆನ್‌ಜೆನ್‌ನಲ್ಲಿ ನಡೆಯುತ್ತಿರುವ ಚೀನಾ ಮಾಸ್ಟರ್‍ಸ್-೨೦೨೪ ಟೂರ್ನಿಯ ಪ್ರೀ-ಕ್ವಾರ್ಟರ್ ಫೈನಲ್‌ನಲ್ಲಿ ಇಂದು ಭಾರತದ ಬ್ಯಾಡ್ಮಿಂಟನ್ ಪಟುಗಳು ಸೆಣಸಲಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಪ್ರತಿಭಾನ್ವಿತ ಆಟಗಾರ ಲಕ್ಷ್ಯಸೇನ್, ಡೆನ್ಮಾರ್ಕ್‌ನ ರಾಸ್ಮಸ್ ಗೆಮ್ಕೆ ವಿರುದ್ಧ ಸೆಣಸಲಿದ್ದಾರೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ ಸಿಂಧು, ಸಿಂಗಾಪುರದ ಯೆಯೊ ಜಿಯಾ ಮಿನ್ ಜತೆ ಸೆಣಸಿದರೆ, ಮಾಳವಿಕಾ ಬನ್ಸೋಡ್, ಥಾಯ್ಲೆಂಡ್‌ನ ಸುಪಾನಿದಾ ಕಟೆಥಾಂಗ್ ಅವರನ್ನು ಎದುರಿಸಲಿದ್ದಾರೆ.

ಭಾರತದ ಮತ್ತೋರ್ವ ಆಟಗಾರ್ತಿ ಅನುಪಮಾ ಉಪಾಧ್ಯಾಯ, ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಿ-ಕ್ವಾರ್ಟರ್‌ನಲ್ಲಿ ಜಪಾನ್ ಆಟಗಾರ್ತಿ ನಟ್ಸುಕಿ ನಿದೈರಾ ಅವರನ್ನು ಎದುರಿಸಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಭಾರತದ ದಿಗ್ಗಜ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಇಂದು ಡೆನ್ಮಾರ್ಕ್‌ನ ರಾಸ್ಮಸ್ ಕ್ಜಾರ್ ಮತ್ತು ಫ್ರೆಡೆರಿಕ್ ಸೊಗಾರ್ಡ್ ಅವರನ್ನು ಎದುರಿಸಲಿದ್ದಾರೆ.

ಮಹಿಳೆಯರ ಡಬಲ್ಸ್‌ನ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿ ಚೀನಾದ ಲಿಯು ಶೆಂಗ್ ಶು ಮತ್ತು ಟಾನ್ ನಿಂಗ್ ಜೊತೆ ಕಣಕ್ಕಿಳಿಯಲಿದೆ. ಮಿಶ್ರ ಡಬಲ್ಸ್‌ನಲ್ಲಿ ಬಿ. ಸುಮೀತ್ ರೆಡ್ಡಿ ಮತ್ತು ಎನ್. ಸಿಕ್ಕಿ ರೆಡ್ಡಿ ಜೋಡಿ ಚೀನಾದ ಮತ್ತೊಂದು ಜೋಡಿ ಫೆಂಗ್ ಯಾನ್ ಝೆ ಮತ್ತು ಹುವಾಂಗ್ ಡಾಂಗ್ ಪಿಂಗ್ ವಿರುದ್ಧ ಸೆಣಸಲಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande