ಶೆಂಜೆನ್,19 ನವೆಂಬರ್(ಹಿ.ಸ.) :
ಆ್ಯಂಕರ್ : ಶೆಂಜೆನ್‌ನಲ್ಲಿ ಇಂದಿನಿಂದ ನಡೆಯಲಿರುವ ಚೀನಾ ಓಪನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಶಟ್ಲರ್‌ಗಳು ತಮ್ಮ ಅಭಿಯಾನ ಆರಂಭಿಸಲಿದ್ದಾರೆ.
ಮಿಕ್ಸೆಡ್ ಡಬಲ್ಸ್ ವಿಭಾಗದ ೩೨ನೇ ಸುತ್ತಿನಲ್ಲಿ ಭಾರತದ ಬಿ. ಸುಮೀತ್ ರೆಡ್ಡಿ ಮತ್ತು ಎನ್.ಸಿಕ್ಕಿ ರೆಡ್ಡಿ ಜೋಡಿಯು, ಅಮೆರಿಕದ ಪ್ರೀಸ್ಲಿ ಸ್ಮಿತ್ ಮತ್ತು ಜೆನ್ನಿ ಗೈ ಅವರನ್ನು ಎದುರಿಸಲಿದ್ದಾರೆ.
ಪುರುಷರ ಡಬಲ್ಸ್ ವಿಭಾಗದ ಆರಂಭಿಕ ಸುತ್ತಿನಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯು, ಚೈನೀಸ್ ತೈಪೆಯ ಯಾಂಗ್ ಪೊ-ಹ್ಸುವಾನ್ ಮತ್ತು ಲೀ ಜೆ-ಹುಯೆ ವಿರುದ್ಧ ತಮ್ಮ ಅಭಿಯಾನ ಪ್ರಾರಂಭಿಸಲಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಲಕ್ಷಯ್ ಸೇನ್ ಏಳನೇ ಶ್ರೇಯಾಂಕದ ಮಲೇಷ್ಯಾದ ಲೀ ಝಿ ಜಿಯಾ ವಿರುದ್ಧ ಸೆಣಸಲಿದ್ದಾರೆ.
ಮತ್ತೊಂದೆಡೆ, ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪಿ.ವಿ.ಸಿಂಧು, ಥಾಯ್ಲೆಂಡ್‌ನ ಸುಪಾನಿಡಾ ಕಟೆಥಾಂಗ್ ಅವರನ್ನು ಎದುರಿಸಲಿದ್ದಾರೆ. ಆಕರ್ಷಿ ಕಶ್ಯಪ್ ತಮ್ಮ ಆರಂಭಿಕ ಪಂದ್ಯದಲ್ಲಿ ಜಪಾನ್‌ನ ಟೊಮೊಕಾ ಮಿಯಾಜಾಕಿ ಮತ್ತು ಮಾಳವಿಕಾ ಬನ್ಸೋಡ್ ಮೊದಲ ಸುತ್ತಿನಲ್ಲಿ ಡ್ಯಾನಿಶ್ ಆಟಗಾರ್ತಿ ಲೈನ್ ಹಾಜ್‌ಮಾರ್ಕ್ ಕ್ಜೆರ್ಸ್‌ಫೆಲ್ಡ್ಟ್ ಅವರನ್ನು ಎದುರಿಸಲಿದ್ದಾರೆ.
ಮಹಿಳೆಯರ ಡಬಲ್ಸ್‌ನ ಆರಂಭಿಕ ಸುತ್ತಿನಲ್ಲಿ ಭಾರತದ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿಯು, ಚೀನಾದ ಲಿಯು ಶೆಂಗ್ ಶು ಮತ್ತು ಟಾನ್ ನಿಂಗ್ ವಿರುದ್ಧ ಸೆಣಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್