ಹಾಕಿ ಚಾಂಪಿಯನ್ಸ್ ಟ್ರೋಫಿ; ಅಂತಿಮ ಪಂದ್ಯನಲ್ಲಿ ಭಾರತ -ಚೀನಾ ಪೈಪೋಟಿ
 
In Hockey, India stormed into the final after defeating J


ಪಾಟ್ನಾ, 20 ನವೆಂಬರ್(ಹಿ.ಸ.) :

ಆ್ಯಂಕರ್ : ಬಿಹಾರದ ರಾಜ್‌ಗೀರ್ ಹಾಕಿ ಕ್ರೀಡಾಂಗಣದಲ್ಲಿ ಇಂದು ಸಂಜೆ ೪.೪೫ಕ್ಕೆ ಭಾರತ ಮತ್ತು ಚೀನಾ ನಡುವೆ ಅಂತಿಮ ಪಂದ್ಯ ನಡೆಯಲಿದೆ. ನಿನ್ನೆ ನಡೆದ ಮಹಿಳೆಯರ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ-೨೦೨೪ ರ ಸೆಮಿಫೈನಲ್‌ನಲ್ಲಿ ಭಾರತ ೨-೦ ಗೋಲುಗಳಿಂದ ಜಪಾನ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದೆ. ಭಾರತ, ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದು, ಸೆಮಿಫೈನಲ್ ಪ್ರವೇಶಿಸಿತ್ತು.

ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಭಾರತ ಮತ್ತು ಜಪಾನ್ ಮುಖಾಮುಖಿಯಾಗಿದ್ದು, ಆ ಪಂದ್ಯದಲ್ಲಿ ಅತಿಥೇಯರು ೩-೦ ಅಂತರದಲ್ಲಿ ಜಯ ಸಾಧಿಸಿದ್ದರು. ಮತ್ತೊಂದು ಸೆಮಿಫೈನಲ್ ಹಣಾಹಣಿಯಲ್ಲಿ ಚೀನಾ, ಮಲೇಷ್ಯಾವನ್ನು ೩-೧ ಗೋಲುಗಳಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದೆ. ಮತ್ತೊಂದೆಡೆ ಕಂಚಿನ ಪದಕಕ್ಕಾಗಿ ಮಲೇಷ್ಯಾ ಜಪಾನ್ ವಿರುದ್ಧ ಸೆಣಸಲಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande