ಕರಾಟೆ ವಿಶ್ವಕಪ್ ಸ್ಪರ್ದೆಯಲ್ಲಿ ಬಂಗಾರಪೇಟೆಯ ಸಾಯಿ ತನುಷ್ಗೆ ಕಂಚಿನ ಪದಕ 
ಕರಾಟೆ ವಿಶ್ವಕಪ್ ಸ್ಪರ್ದೆಯಲ್ಲಿ ಬಂಗಾರಪೇಟೆಯ ಸಾಯಿ ತನುಷ್ಗೆ ಕಂಚಿನ ಪದಕ 
ಚಿತ್ರ: ಗೋವಾದಲ್ಲಿ ನಡೆದ ಕರಾಟೆ ವಿಶ್ವಕಪ್ ಸ್ಪರ್ದೆಯಲ್ಲಿ ಬಂಗಾರಪೇಟೆಯ ಸಾಯಿ ತನುಷ್ಗೆ ಕಂಚಿನ ಪದಕ ಪಡೆದಿದ್ದಾರೆ.


ಕೋಲಾರ, ೧೪ ನವೆಂಬರ್(ಹಿ.ಸ) :

ಆ್ಯಂಕರ್ : ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆಯಂತೆ ೩ನೇ ತರಗತಿ ಓದುತ್ತಿರುವ ಬಂಗಾರಪೇಟೆ ಪಟ್ಟಣದ ಸಾಯಿ ತನುಷ್ ಎಂಬ ಪುಟ್ಟ ಪೋರ ಗೋವಾದಲ್ಲಿ ನಡೆದ ಎಫ್, ಎಸ್, ಕೆ, ಎ ವಿಶ್ವಕಪ್ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ದೇಶಕ್ಕೆ ಕಂಚು ಪದಕ ಗೆಲ್ಲುವ ಮೂಲಕ ಅಸಮಾನ್ಯ ಸಾಧನೆ ಮಾಡಿದ್ದಾನೆ. ಸದರಿ ಕ್ರೀಡಾಕೂಟದಲ್ಲಿ ವಿಶ್ವದ ೩೦ ರಾಷ್ಟ್ರಗಳಿಂದ ಸ್ಪರ್ಧೆಗಳು ಭಾಗವಹಿಸಿದರು.

ಬಂಗಾರಪೇಟೆ ಪಟ್ಟಣದ ಮಾನ್ಯತಾ ಇಂಟರ್ ನ್ಯಾಷನಲ್ ಶಾಲೆಯಲ್ಲಿ ೩ ನೇ ತರಗತಿ ವ್ಯಾಸಂಗ ಮಾಡುತ್ತಿರುವ ಸಾಯಿ ತನುಷ್ ಮೂಲತಃ ಕೆ ಜಿ ಎಫ್ ತಾಲೂಕಿನವರಾಗಿದ್ದು ಚಂದ್ರಶೇಕರ್ ಮತ್ತು ಶ್ಯಾಮಲಾ ರವರ ಮಗನಾಗಿದ್ದು ಸೌಮ್ಯ ಶ್ರೀನಿವಾಸನ್ ಬಳಿ ಕರಾಟೆ ತರಭೇತಿ ಪಡೆದು ರಾಜ್ಯಾ ಮತ್ತು ರಾಷ್ಟ್ರ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ, ಕಳೆದ ವರ್ಷ ಬೆಂಗಳೂರಿನಲ್ಲಿ ಅಯೋಜಿಸಲಾಗಿದ್ದ ರಾಷ್ಟ್ರೀಯ ಮಟ್ಟ ಕರಾಟೆ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದು ರಾಜ್ಯಾದ ಕೀರ್ತಿಯನ್ನು ಬೆಳಗಿಸುವುದರ ಮೂಲಕ ತಾಲೂಕಿಗೆ ಹೆಸರು ತಂದುಕೊಟ್ಟರು.

ಚಿತ್ರ: ಗೋವಾದಲ್ಲಿ ನಡೆದ ಕರಾಟೆ ವಿಶ್ವಕಪ್ ಸ್ಪರ್ದೆಯಲ್ಲಿ ಬಂಗಾರಪೇಟೆಯ ಸಾಯಿ ತನುಷ್ಗೆ ಕಂಚಿನ ಪದಕ ಪಡೆದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande