ಪಹಣಿಯಲ್ಲಿ ವಕ್ಫ್‌ ಹೆಸರು,ಹೋರಾಟಕ್ಕೆ ಸಿದ್ದತೆ
ವಕ್ಫ್ ಬೋರ್ಡ್ ನಿಂದ ಹಿಂದೂಗಳ ಜಮೀನು ಕಬಳಿಕೆ ವಿರೋಧಿಸಿ ಹೋರಾಟಕ್ಕೆ ಸಿದ್ದತೆ 
ಬಿಜೆಪಿ ಮುಖಂಡ ಓಂಶಕ್ತಿ ಚಲಪತಿ


ಕೋಲಾರ, 30 ಅಕ್ಟೋಬರ್ (ಹಿ.ಸ.):

ಆ್ಯಂಕರ್ :ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರವು ಅಧಿಕಾರಕ್ಕೆ ಬಂದ ನಂತರದಿAದ ವಿವಿಧ ಭಾಗಗಳಲ್ಲಿ ರೈತರ ಜಮೀನನ್ನು ತನ್ನದು ಎಂದು ಹೇಳಿಕೊಂಡು ಅನ್ನದಾತರನ್ನು ಒಕ್ಕಲೆಬ್ಬಿಸಲು ವಕ್ಫ್ ಬೋರ್ಡ್ ಹೊರಟಿದ್ದು ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಯಾವುದೇ ಕಾರಣಕ್ಕೂ ರೈತರ ಜಾಗವನ್ನು ಬಿಟ್ಟು ಹೋಗದಂತೆ ನೋಡಿಕೊಳ್ಳುತ್ತೇವೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಕುಡಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ಹೇಳಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ರಾಜ್ಯ ಸರ್ಕಾರವು ಕೇವಲ ಒಂದು ಸಮುದಾಯವನ್ನು ಮಾತ್ರ ಓಲೈಕೆ ಮಾಡುತ್ತಿದೆ. ಈಗ ವಕ್ಫ್ ಹೆಸರಿನಲ್ಲಿ ರೈತರ ಜಮೀನು ಕಬಳಿಕೆಯ ಹುನ್ನಾರಗಳು ನಡೆಯುತ್ತಿದೆ ನಾವು ಕೂಡ ಹಿಂದೂಗಳಾಗಿ ರೈತರ ಒಂದಿಚ್ಚು ಜಾಗವನ್ನು ಬಿಟ್ಟು ಹೋಗದಂತೆ ನೋಡಿಕೊಳ್ಳುತ್ತೇವೆ ಈಗಾಗಲೇ ಬಿಜೆಪಿ ಪಕ್ಷದ ರಾಜ್ಯ ಮುಖಂಡರು ಸಹ ಇದರ ವಿರುದ್ದ ನಿಂತಿದ್ದಾರೆ ಕೋಲಾರ ಜಿಲ್ಲೆಯಲ್ಲಿ ಕೂಡ ಪ್ರಭಾವಿ ಜನಪ್ರತಿನಿಧಿಗಳ ಮುಂದಾಳತ್ವದಲ್ಲಿ ಜಾಗವನ್ನು ಕಬಳಿಸುವ ಪ್ರಯತ್ನಗಳಾಗಿದೆ ಇದರ ವಿರುದ್ದ ಹಿಂದುಗಳಾಗಿ ಪಕ್ಷಾತೀತವಾಗಿ ಹೋರಾಟ ಮಾಡಬೇಕಾಗಿದೆ ಎಂದು ಎಚ್ಚರಿಸಿದರು.

ವಕ್ಫ್ ಬೋರ್ಡ್ ರೈತರಿಂದ ಅಕ್ರಮವಾಗಿ ಮತ್ತು ಬಲವಂತವಾಗಿ ಭೂಮಿ ವಶಪಡಿಸಿಕೊಳ್ಳುತ್ತಿದೆ. ಇದನ್ನು ತಡೆಯಲು ರಾಜ್ಯಾದ್ಯಂತ ಹಿಂದೂಗಳ ಧ್ವನಿಯಾಗಿದ್ದೇವೆ ಹಿಂದೂಗಳಿಗೆ ಆಗುತ್ತಿರುವ ಅನ್ಯಾಯ ಕುರಿತು ಜನರನ್ನು ಎಚ್ಚರಿಸುತ್ತೇವೆ. ರಾಜ್ಯ ಸರ್ಕಾರದ ವಿರುದ್ಧ ಭಾರಿ ಹೋರಾಟ ಮಾಡಲಾಗುತ್ತದೆ ಮದರಸಾಗಳಿಗೆ ಸಿಮೀತವಾಗಿದ್ದ ಕಾಂಗ್ರೆಸ್ ಸರ್ಕಾರವು ಈಗ ಬಡವರು, ದಲಿತರ ಆಸ್ತಿಯನ್ನು ಕಬಳಿಸುತ್ತಿದೆ ಯಾವುದೇ ಕಾರಣಕ್ಕೂ ರೈತರ ಜಮೀನನ್ನು ಕಬಳಿಕೆ ಮಾಡಲು ಬಿಡುವುದಿಲ್ಲ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಮೇಲೆ ಮುಸ್ಲಿಂ ಬೆಂಬಲಕ್ಕೆ ನಿಂತಿದ್ದು ಇದಕ್ಕೆ ಉತ್ತರವನ್ನು ಜನ ನೀಡಲಿದ್ದಾರೆ ಎಂದು ಓಂಶಕ್ತಿ ಚಲಪತಿ ತಿಳಿಸಿದರು.

ಚಿತ್ರ : ಬಿಜೆಪಿ ಮುಖಂಡ ಓಂಶಕ್ತಿ ಚಲಪತಿ

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande