ಇಂದು ಸಾಹಸಿ ಬಲಿದಾನಿ ಅಶ್ಫಾಕುಲ್ಲಾ ಖಾನ್ ಖಾನ್‌ ಜನ್ಮದಿನ
ಇಂದು ಸಾಹಸಿ ಬಲಿದಾನಿ ಅಶ್ಫಾಕುಲ್ಲಾ ಖಾನ್ ಜನ್ಮದಿನ; ಸ್ವಾತಂತ್ರ್ಯ ವೀರನ ನೆನೆಯೋಣ
ಮುಖ್ಯಮಂತ್ರಿ


ನವದೆಹಲಿ, 22 ಅಕ್ಟೋಬರ್(ಹಿ.ಸ.) :

ಆ್ಯಂಕರ್ : ಬ್ರಿಟಿಷರಿಗೆ ಹಲವು ಕ್ರಾಂತಿಕಾರಿಗಳು ಸಿಂಹಸ್ವಪ್ನರಾಗಿದ್ದರು. ಅಂತಹ ಸಿಂಹಸ್ವಪ್ನಗಳಲ್ಲಿ ಅಶ್ಫಾಕುಲ್ಲಾ ಖಾನ್ ಕೂಡ ಒಬ್ಬರು. ಇಂದು ಅವರ ಜನ್ಮದಿನ. ಸ್ವಾತಂತ್ರ್ಯ ಹೋರಾಟಗಾರ ಮತ್ತು ’ಕಾಕೋರಿ ಟ್ರೈನ್ ಆಕ್ಷನ್’ ನ ಕೆಚ್ಚೆದೆಯ ಯೋಧ ಅಶ್ಫಾಕುಲ್ಲಾ ಖಾನ್ ಅವರ ಜನ್ಮದಿನವಾದ ಇಂದು ರಾಷ್ಟ್ರವು ಅವರಿಗೆ ಗೌರವ ಸಲ್ಲಿಸುತ್ತಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ವಾತಂತ್ರ್ಯ ಹೋರಾಟಗಾರ ಅಶ್ಫಾಕುಲ್ಲಾ ಖಾನ್ ಅವರ ಜನ್ಮದಿನದಂದು ಗೌರವ ಸಲ್ಲಿಸಿದರು. ಕಾಕೋರಿ ಟ್ರೈನ್ ಆಕ್ಷನ್ ಮೂಲಕ ಬ್ರಿಟಿಷರಲ್ಲಿ ಭೀತಿ ಉಂಟು ಮಾಡಿದ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್‌ನ ಸಂಸ್ಥಾಪಕರಲ್ಲಿ ಅಶ್ಫಾಕುಲ್ಲಾ ಖಾನ್ ಒಬ್ಬರು ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಅವರು ಹೇಳಿದ್ದಾರೆ.

ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ವಸತಿ ಹಾಗೂ ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಅವರು ಸ್ವಾತಂತ್ರ್ಯ ಹೋರಾಟಗಾರ ಅಶ್ಫಾಕುಲ್ಲಾ ಖಾನ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande