ಉತ್ತರ ಕರ್ನಾಟಕದ ಸ್ಪೆಷಲ್ ಸಾಂಪ್ರಾದಾಯಿಕ ರೆಸಿಪಿ ಹುರಕ್ಕಿ ಹೋಳಿಗೆ
ಬೆಂಗಳೂರು, 22 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ದೀಪಾವಳಿಯೂ ಹಿಂದೂಗಳ ಪಾಲಿನ ದೊಡ್ಡ ಹಬ್ಬಗಳಲ್ಲಿ ಒಂದು. ವರ್ಷವಿಡೀ ಕಾಯುವ ದೀಪಾವಳಿಗೆ ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ದೂರವಿದೆ. ಹಬ್ಬ ಎಂದ ಮೇಲೆ ಮನೆ ಮಂದಿಯೆಲ್ಲಾ ಸೇರಿ ಮನೆ ಸ್ವಚ್ಛತೆ ಸೇರಿದಂತೆ ಬಗೆ ಬಗೆಯ ತಿನಿಸುಗಳ ತಯಾರಿಯಲ್ಲಿ ಕಾರ್ಯನಿರತರಾ
How to prepare tasty and health north karnataka


ಬೆಂಗಳೂರು, 22 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ದೀಪಾವಳಿಯೂ ಹಿಂದೂಗಳ ಪಾಲಿನ ದೊಡ್ಡ ಹಬ್ಬಗಳಲ್ಲಿ ಒಂದು. ವರ್ಷವಿಡೀ ಕಾಯುವ ದೀಪಾವಳಿಗೆ ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ದೂರವಿದೆ. ಹಬ್ಬ ಎಂದ ಮೇಲೆ ಮನೆ ಮಂದಿಯೆಲ್ಲಾ ಸೇರಿ ಮನೆ ಸ್ವಚ್ಛತೆ ಸೇರಿದಂತೆ ಬಗೆ ಬಗೆಯ ತಿನಿಸುಗಳ ತಯಾರಿಯಲ್ಲಿ ಕಾರ್ಯನಿರತರಾಗಿರುತ್ತಾರೆ. ಒಬ್ಬೊಬ್ಬರು ಒಂದೊಂದು ಬಗೆಯ ಸಿಹಿ ತಿಂಡಿಗಳನ್ನು ಮಾಡಿ ಸವಿಯುತ್ತಾರೆ. ಆದರೆ ಉತ್ತರ ಕರ್ನಾಟಕದಲ್ಲಿ ಸಾಂಪ್ರದಾಯಿಕ ತಿನಿಸುಗಳಲ್ಲಿ ಹುರಕ್ಕಿ ಹೋಳಿಗೆ ಪ್ರಸಿದ್ಧ ಪಡೆದುಕೊಂಡಿದೆ. ಹೆಚ್ಚೇನು ಸಮಯ ತೆಗೆದುಕೊಳ್ಳದ ಈ ಪಾಕವಿಧಾನ ಮಾಹಿತಿ ಇಲ್ಲಿದೆ.

ಹುರಕ್ಕಿ ಹೋಳಿಗೆ ಮಾಡಲು ಬೇಕಾಗುವ ಸಾಮಗ್ರಿಗಳು

* ಒಂದು ಕಪ್ ನವಣೆ

* ಕಾಲು ಕಪ್‌ ಕಡ್ಲೆ ಬೇಳೆ

* ಕಾಲು ಕಪ್ ಅಕ್ಕಿ

* ಒಂದು ಕಪ್ ಬೆಲ್ಲ

* ಏಲಕ್ಕಿ ಪುಡಿ

* ಉಪ್ಪು

* ಎಣ್ಣೆ

* ಗೋಧಿ ಹಿಟ್ಟು

* ಮೈದಾ ಹಿಟ್ಟು

* ಸಣ್ಣ ರವೆ

ಹುರಕ್ಕಿ ಹೋಳಿಗೆ ಮಾಡುವ ವಿಧಾನ

* ಮೊದಲಿಗೆ ನವಣೆಯನ್ನು ತೊಳೆದು ನೀರು ಬಸಿದು ನೆರಳಲ್ಲಿ ಒಣಗಿಸಿಕೊಳ್ಳಬೇಕು.

* ತದನಂತರದಲ್ಲಿ ನವಣೆ ಕಡ್ಲೆ ಬೇಳೆ ಮತ್ತು ಅಕ್ಕಿಯನ್ನೂ ಹುರಿದುಕೊಳ್ಳಿ.

* ಈ ಮೂರನ್ನು ಮಿಕ್ಸಿ ಜಾರ್‌ನಲ್ಲಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ.

* ಆ ಬಳಿಕ ಗೋಧಿ ಹಿಟ್ಟಿಗೆ ಸ್ವಲ್ಪ ಮೈದಾ, ರವೆ, ಉಪ್ಪು ಹಾಗೂ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹದಿನೈದು ನಿಮಿಷ ಹಾಗೆಯೇ ಬಿಡಿ.

* ನಂತರದಲ್ಲಿ ಬಾಣಲೆಯಲ್ಲಿ ಬೆಲ್ಲ ಮುಳುಗುವಷ್ಟು ಮಾತ್ರ ನೀರು ಹಾಕಿ ಪಾಕ ಮಾಡಿ ಒಲೆಯಿಂದ ಕೆಳಗಿಳಿಸಿಕೊಳ್ಳಿ.

* ಇದಕ್ಕೆ ಏಲಕ್ಕಿ ಪುಡಿ ಮತ್ತು ನವಣೆ ಮಿಶ್ರಣದ ಹಿಟ್ಟು ಹಾಕಿ ಚೆನ್ನಾಗಿ ಬೆರೆಸಿಕೊಂಡು ಹೂರಣ ಸಿದ್ದ ಮಾಡಿಕೊಳ್ಳಿ

* ನೆನೆದ ಹಿಟ್ಟಿನಿಂದ ಉಂಡೆ ಮಾಡಿ ಅದರಲ್ಲಿ ಹೂರಣ ತುಂಬಿ ಲಟ್ಟಿಸಿ ಎಣ್ಣೆಯಲ್ಲಿ ಕರಿದರೆ ಹುರಕ್ಕಿ ಹೋಳಿಗೆ ಸವಿಯಲು ಸಿದ್ಧ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande