ಇಂದು ಅಯೋಡಿನ್ ಕೊರತೆ ದಿನ
ನವದೆಹಲಿ, 21 ಅಕ್ಟೋಬರ್(ಹಿ.ಸ.) : ಆ್ಯಂಕರ್ : ಇಂದು ಅಯೋಡಿನ್ ಕೊರತೆ ದಿನ. ಅಯೋಡಿನ್ ಕೊರತೆಯಿಂದ ಉಂಟಾಗುವ ಆರೋಗ್ಯದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಜಾಗತಿಕ ಮಟ್ಟದಲ್ಲಿ ಅಕ್ಟೋಬರ್ ೨೧ ರಂದು ಜಾಗತಿಕ ಅಯೋಡಿನ್ ಕೊರತೆಯ ಅಸ್ವಸ್ಥತೆಗಳ ತಡೆಗಟ್ಟುವಿಕೆ ದಿನ ಎಂದು ಆಚರಿಸಲಾಗುತ್ತದೆ. ಉತ್ತಮ ಆರೋಗ್ಯ
World Iodine Deficiency Day 2024 : Know the history, significance


ನವದೆಹಲಿ, 21 ಅಕ್ಟೋಬರ್(ಹಿ.ಸ.) :

ಆ್ಯಂಕರ್ : ಇಂದು ಅಯೋಡಿನ್ ಕೊರತೆ ದಿನ. ಅಯೋಡಿನ್ ಕೊರತೆಯಿಂದ ಉಂಟಾಗುವ ಆರೋಗ್ಯದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಜಾಗತಿಕ ಮಟ್ಟದಲ್ಲಿ ಅಕ್ಟೋಬರ್ ೨೧ ರಂದು ಜಾಗತಿಕ ಅಯೋಡಿನ್ ಕೊರತೆಯ ಅಸ್ವಸ್ಥತೆಗಳ ತಡೆಗಟ್ಟುವಿಕೆ ದಿನ ಎಂದು ಆಚರಿಸಲಾಗುತ್ತದೆ.

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಅಯೋಡಿನ್‌ನ ಅಗತ್ಯ ಪಾತ್ರದ ಬಗ್ಗೆ ಮತ್ತು ಅದರ ಕೊರತೆಯ ಪರಿಣಾಮಗಳನ್ನು ಈ ದಿನ ಒತ್ತಿಹೇಳುತ್ತದೆ. ಅಯೋಡಿನ್, ಥೈರಾಯ್ಡ್ ಹಾರ್ಮೋನುಗಳ ನಿರ್ಣಾಯಕ ಅಂಶವಾಗಿದೆ.

ದೇಹದಲ್ಲಿ ಅಯೋಡಿನ್ ಕೊರತೆ ಇರುವುದರ ಲಕ್ಷಣಗಳು

ನಿಮ್ಮ ದೇಹದಲ್ಲಿ ಅಯೋಡಿನ್ ಕೊರತೆಯಿದ್ದರೆ, ನಿಮ್ಮ ತೂಕ ಹೆಚ್ಚಾಗಬಹುದು. ಅತಿಯಾದ ಶೀತ, ಒಣ ಚರ್ಮ, ಅತಿಯಾದ ಕೂದಲು ಉದುರುವಿಕೆ, ಹೃದಯ ಬಡಿತ ನಿಧಾನವಾಗುವುದು, ಮರೆವು, ಗಂಟಲು ನೋವು, ಊತ, ಅತಿಯಾದ ನಿದ್ರೆ, ಚಡಪಡಿಕೆ ಮುಂತಾದ ಲಕ್ಷಣಗಳು ಕಂಡುಬರುತ್ತವೆ. ನಿಮ್ಮ ಆಹಾರದಲ್ಲಿ ಕೆಲವು ಅಯೋಡಿನ್ ಭರಿತ ಆಹಾರಗಳನ್ನು ಸೇರಿಸುವ ಮೂಲಕ ದೇಹದಲ್ಲಿ ಅಯೋಡಿನ್ ಕೊರತೆಯನ್ನು ತಡೆಯಬಹುದು.

ದೇಹಕ್ಕೆ ಎಷ್ಟು ಅಯೋಡಿನ್ ಬೇಕು?

ದೇಹಕ್ಕೆ ಬೇಕಾಗಿರುವ ಅಯೋಡಿನ್ ಪ್ರಮಾಣ ಅತ್ಯಲ್ಪ. ಪ್ರತಿದಿನ 150 ಮೈಕ್ರೊಗ್ರಾಂ ನಷ್ಟು ಮಾತ್ರ. ಮಕ್ಕಳಿಗೆ ಕೇವಲ 50 ಮೈಕ್ರೊಗ್ರಾಂ, ಗರ್ಭಿಣಿಯರಿಗೆ 200 ಮೈಕ್ರೊಗ್ರಾಂ ಅಯೋಡಿನ್ ಪ್ರಮಾಣವು ಆಹಾರದಲ್ಲಿ ದೊರೆತರೆ ಸಾಕು. ಒಟ್ಟಾರೆ ಒಬ್ಬ ವ್ಯಕ್ತಿಗೆ ಜೀವಮಾನವಿಡೀ ಬೇಕಾಗಿರುವುದು ಕೇವಲ ಅರ್ಧ ಚಮಚ ಅಯೋಡಿನ್ ಮಾತ್ರ. ನಮ್ಮ ದೇಹದಲ್ಲಿಯೇ 25 ಮಿಲಿಗ್ರಾಂ ಅಯೋಡಿನ್ ಇರುತ್ತದೆ. ಹೀಗಾಗಿ ದೇಹಕ್ಕೆ ಅಗತ್ಯವಿರುವಷ್ಟು ಮಾತ್ರ ಅಯೋಡಿನ್ ಭರಿತ ಆಹಾರವನ್ನು ಸೇವಿಸಿದರೆ ಸಾಕು, ಅತಿಯಾದರೆ ಇನ್ನಿತ್ತರ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.

ಅಯೋಡಿನ್ ಭರಿತವಾದ ಆಹಾರಗಳಿವು

ಆಲೂಗಡ್ಡೆಯನ್ನು ಸಿಪ್ಪೆಯೊಂದಿಗೆ ತಿನ್ನುವುದರಿಂದ ದೇಹಕ್ಕೆ ಬೇಕಾಗುವ ಅಯೋಡಿನ್ ದೊರೆಯುತ್ತದೆ. ಈ ಸಿಪ್ಪೆಯು ಹೆಚ್ಚು ಅಯೋಡಿನ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಗಳಿಂದ ಸಮೃದ್ಧವಾಗಿದೆ. ಹಾಲು, ಒಣದ್ರಾಕ್ಷಿ, ಮೊಸರು, ಕಂದು ಅಕ್ಕಿ, ಸಮುದ್ರದ ಮೀನು, ಉಪ್ಪು, ಕಾಡ್‌ಲಿವರ್ ಆಯಿಲ್, ಮಾಂಸ, ಮೊಟ್ಟೆ, ಧಾನ್ಯ-ಬೇಳೆಕಾಳು, ಸೊಪ್ಪು-ಪಾಲಾಕ್‌, ರಾಗಿ, ಸಾಸಿವೆ, ಜೋಳ, ಶೇಂಗ ಹಾಗೂ ಉದ್ದು ಈ ಆಹಾರಗಳನ್ನು ಸೇವಿಸುವ ಮೂಲಕ ದೇಹದಲ್ಲಿನ ಅಯೋಡಿನ್ ಕೊರತೆಯನ್ನು ನೀಗಿಸಿಕೊಳ್ಳಬಹುದು.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande