ವೇಮಗಲ್ ಗ್ರಾಮದಲ್ಲಿ ಗ್ರಾಮದೇವತೆಗಳ ಉತ್ಸವ
ವೇಮಗಲ್ ಗ್ರಾಮದಲ್ಲಿ ಗ್ರಾಮದೇವತೆಗಳ ಉತ್ಸವ
ಚಿತ್ರ - ಕೋಲಾರ ತಾಲ್ಲೂಕಿನ ವೇಮಗಲ್ ಗ್ರಾಮದಲ್ಲಿ ಗ್ರಾಮ ದೇವತೆಗಳ ಉತ್ಸವ ನಡೆಯಿತು.


ಕೋಲಾರ, ೨೨ ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಗ್ರಾಮೀಣ ಭಾಗದಲ್ಲಿ ಊರಿನ ಗ್ರಾಮ ದೇವತೆಗಳ ಪೂಜಾ ಮಹೋತ್ಸವವೆಂದರೇ ಒಂದು ರೀತಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ.

ಕೋಲಾರ ತಾಲ್ಲೂಕಿನ ವೇಮಗಲ್ ಪಟ್ಟಣದಲ್ಲಿಯೂ ಸಹ ಸುಮಾರು ೮ ವರ್ಷಗಳಿಂದ ದಸರಾ ಹಬ್ಬದ ಪ್ರಯುಕ್ತ ಗ್ರಾಮ ದೇವತೆಗಳ ಸಪ್ತ ಮಾತೇಯರ ಪೂಜಾ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಈ ಬಾರಿಯು ಸಹ ಹಬ್ಬದ ರೀತಿಯಲ್ಲಿ ಬಹಳ ವಿಜೃಂಭಣೆಯಿಂದ ಪೂಜಾ ಮಹೋತ್ಸವ ನೆರವೇರಿತು.

ಪಟ್ಟಣದ ದ್ರೌಪತಾಂಬ ಧರ್ಮರಾಯಸ್ವಾಮಿ ದೇವಾಲಯ ಬಳಿ ತಳಿರು ತೋರಣಗಳಿಂದ ಸಿಂಗಾರ ಮಾಡಲಾಗಿತ್ತಲ್ಲದೆ ಸಪ್ತ ಮಾತೇಯರಿಗೆ ವಿವಿಧ ಪುಷ್ಪದಿಂದ ಸಿಂಗರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.

ನಾಡು ಮತ್ತು ಪಟ್ಟಣದಲ್ಲಿ ಉತ್ತಮ ಮಳೆ, ಸುಖ-ಶಾಂತಿ ಹಾಗೂ ಸಮೃದ್ಧಿ ನೆಲೆಸುವ ಮೂಲಕ ಈ ವರ್ಷದ ಫಸಲು ಉತ್ತಮವಾಗಿ ಬರಲಿ ಎಂಬ ಉದ್ದೇಶದಿಂದ ಪಟ್ಟಣದ ಗ್ರಾಮ ದೇವತೆಗಳ ಸಪ್ತ ಮಾತೇಯರ ೮ ನೇ ವರ್ಷದ ಪೂಜಾ ಮಹೋತ್ಸವವು ಮಂಗಳವಾರ ಭಕ್ತರ ಮಧ್ಯೆ ಸಡಗರ-ಸಂಭ್ರಮದಿಂದ ಜರುಗಿತು. ಮಹಿಳೆಯರು ತಂಬಿಟ್ಟು, ದೀಪಗಳಿಂದ ಶಕ್ತಿ ದೇವತೆಗಳಿಗೆ ದೀಪ ಬೆಳಗಿದರು. ಭಕ್ತರು ದೇವತೆಗೆ ವಿವಿಧ ರೀತಿಯ ಹರಕೆ ತೀರಿಸಿದರು.

ಪೂಜಾ ಮಹೋತ್ಸವ ಪ್ರಯುಕ್ತ ತುಮಕೂರಿನ ಹೆಸರಾಂತ ಕಲಾವಿದರಾದ ಸಾಗರ್ ಮತ್ತು ತಂಡದಿಂದ ಭರತನಾಟ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ದಿ ೨೩ ರಂದು ಬುಧವಾರ ದಂದು ಮಧ್ಯಾಹ್ನ ೨ ಗಂಟೆಯಿಂದ ಹೂವಿನ ಪಲ್ಲಕ್ಕಿಯೊಂದಿಗೆ, ಪಟ್ಟಣದ ರಾಜ ಬೀದಿಗಳಲ್ಲಿ ಶಕ್ತಿ ದೇವತೆಗಳ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಕುಲದ ಹಿರಿಯರು, ಯುವಕರು, ಭಕ್ತಾದಿಗಳು ಮಹಿಳೆಯರು ದೇವತೆಗಳ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾದರು.

ಚಿತ್ರ - ಕೋಲಾರ ತಾಲ್ಲೂಕಿನ ವೇಮಗಲ್ ಗ್ರಾಮದಲ್ಲಿ ಗ್ರಾಮ ದೇವತೆಗಳ ಉತ್ಸವ ನಡೆಯಿತು.

---------------

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande