ದೇಶೀಯ ಕಚ್ಚಾ ಅನಿಲ ಉತ್ಪಾದನೆಯಲ್ಲಿ ಇಳಿಕೆ; ಸಿಎನ್​ಜಿ ದರ ಹೆಚ್ಚಳ ಸಾಧ್ಯತೆ
ನವದೆಹಲಿ, 21 ಅಕ್ಟೋಬರ್(ಹಿ.ಸ.) : ಆ್ಯಂಕರ್ : ಸಿಎನ್​​ಜಿ ಅನಿಲ ಬೆಲೆ ಒಂದು ಕಿಲೋಗೆ 4ರಿಂದ 6 ರೂನಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ದೇಶೀಯವಾಗಿ ಉತ್ಪಾದನೆಯಾಗುವ ಅಗ್ಗದ ನೈಸರ್ಗಿಕ ಅನಿಲದ ಸರಬರಾಜು ಕಡಿಮೆಗೊಳಿಸಲಾಗಿದೆ. ನಗರದ ರೀಟೇಲ್ ಮಾರಾಟಗಾರರಿಗೆ ಸಿಎನ್​ಜಿ ಸರಬರಾಜನ್ನು ಶೇ. 20ರವರೆಗೂ ಕಡಿಮೆಗೊ
ಹಿ.ಸ.) :ಆ್ಯಂಕರ್ :


ನವದೆಹಲಿ, 21 ಅಕ್ಟೋಬರ್(ಹಿ.ಸ.) :

ಆ್ಯಂಕರ್ : ಸಿಎನ್​​ಜಿ ಅನಿಲ ಬೆಲೆ ಒಂದು ಕಿಲೋಗೆ 4ರಿಂದ 6 ರೂನಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ದೇಶೀಯವಾಗಿ ಉತ್ಪಾದನೆಯಾಗುವ ಅಗ್ಗದ ನೈಸರ್ಗಿಕ ಅನಿಲದ ಸರಬರಾಜು ಕಡಿಮೆಗೊಳಿಸಲಾಗಿದೆ. ನಗರದ ರೀಟೇಲ್ ಮಾರಾಟಗಾರರಿಗೆ ಸಿಎನ್​ಜಿ ಸರಬರಾಜನ್ನು ಶೇ. 20ರವರೆಗೂ ಕಡಿಮೆಗೊಳಿಸಿದೆ. ಒಂದು ವೇಳೆ ಸರ್ಕಾರ ಅಬಕಾರಿ ಸುಂಕವನ್ನು ಕಡಿಮೆಗೊಳಿಸದೇ ಹೋದಲ್ಲಿ, ಸಿಎನ್​ಜಿ ಬೆಲೆ ಶೇ. 4ರಿಂದ 6ರಷ್ಟು ಹೆಚ್ಚುವ ನಿರೀಕ್ಷೆ ಇದೆ.

ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ವಿವಿಧ ಭಾಗಗಳಿಂದ ನೆಲದ ಕೆಳಗಿಂದ ನೈಸರ್ಗಿಕ ಅನಿಲ ಸಂಪನ್ಮೂಲ ಸಿಗುತ್ತದೆ. ಇದನ್ನು ಸಿಎನ್​ಜಿಯಾಗಿ ಪರಿವರ್ತಿಸಿ, ಅದನ್ನು ವಾಹನಗಳು ಹಾಗೂ ಗೃಹ ಅಡುಗೆ ಅನಿಲವಾಗಿ ಬಳಕೆಗೆ ಸರಬರಾಜು ಮಾಡಲಾಗುತ್ತದೆ.

ನೈಸರ್ಗಿಕ ಅನಿಲದ ಲಭ್ಯತೆ ಕಡಿಮೆ ಆಗುತ್ತಿರುವುದರಿಂದ ಕಚ್ಛಾ ಅನಿಲದ ಉತ್ಪಾದನೆ ಪ್ರತೀ ವರ್ಷ ಶೇ. 5ರಷ್ಟು ಕಡಿಮೆ ಆಗುತ್ತಿದೆ. ಇದರಿಂದ ನಗರದ ಅನಿಲ ಚಿಲ್ಲರೆ ಮಾರಾಟಗಾರರಿಗೆ ಸರಬರಾಜು ಕಡಿಮೆ ಆಗುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಭಾರತದಲ್ಲಿ ಉತ್ಪಾದನೆಯಾಗುವ ಕಚ್ಚಾ ಅನಿಲವು 2023ರ ಮೇ ತಿಂಗಳಲ್ಲಿ ಭಾರತದ ಶೇ. 90ರಷ್ಟು ಸಿಎನ್​ಜಿ ಅಗತ್ಯವನ್ನು ಪೂರೈಸುತ್ತಿತ್ತು. ಸೆಪ್ಟೆಂಬರ್​ನಲ್ಲಿ ದೇಶಾದ್ಯಂತ ಅಗತ್ಯ ಇರುವ ಸಿಎನ್​ಜಿಯಲ್ಲಿ ಶೇ. 67.74ರಷ್ಟನ್ನು ಮಾತ್ರ ಪೂರೈಸಲು ಆಗುತ್ತಿತ್ತು. ಅಕ್ಟೋಬರ್ 16ರಿಂದ ಇದು ಶೇ. 50.75ಕ್ಕೆ ಇಳಿದಿದೆ.

ಈ ಕೊರತೆ ನೀಗಿಸಲು ಗ್ಯಾಸ್ ರೀಟೇಲ್ ಕಂಪನಿಗಳು ದುಬಾರಿಯಾದ ಎಲ್​ಎನ್​ಜಿ ಅನಿಲವನ್ನು ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಹೀಗಾಗಿ, ಸಿಎನ್​ಜಿ ಬೆಲೆ ಒಂದು ಕಿಲೋಗೆ ಶೇ. 4ರಿಂದ 6ರಷ್ಟು ಹೆಚ್ಚಳ ಮಾಡುವುದು ಅನಿವಾರ್ಯವಾಗಬಹುದು.

ದೇಶೀಯವಾಗಿ ಉತ್ಪಾದನೆಯಾಗುವ ಸಿಎನ್​ಜಿ ಅನಿಲದ ಬೆಲೆ ಒಂದು ಎಂಎಂಬಿಟಿಯುಗೆ 6.50 ಡಾಲರ್ ಆಗುತ್ತದೆ. ಆದರೆ, ಆಮದಿತ ಎಲ್​ಎನ್​ಜಿ ಬೆಲೆ 11-12 ಡಾಲರ್ ಆಗುತ್ತದೆ. ಹೆಚ್ಚೂಕಡಿಮೆ ಎರಡು ಪಟ್ಟು ದರ ವ್ಯತ್ಯಾಸ ಆಗುತ್ತದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande