ಹೊಸ ಮದ್ಯ ನೀತಿ,ಆದಾಯ ಹೆಚ್ಚಳದ ನಿರೀಕ್ಷೆಯಲ್ಲಿ ಆಂಧ್ರ ಪ್ರದೇಶ ಸರ್ಕಾರ
ಅಮರಾವತಿ, 18 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಆಂಧ್ರ ಪ್ರದೇಶದಲ್ಲಿ ಹೊಸ ಮದ್ಯ ನೀತಿ ಜಾರಿಯಾಗಿದೆ. ಈ ನೀತಿಯಿಂದ ಸರಕಾರವು ಆದಾಯ ಹೆಚ್ಚಳದ ನಿರೀಕ್ಷೆಯಲ್ಲಿ ಇದೆ. ಮದ್ಯದ ನೀತಿಯಡಿ 180 ಎಂಎಲ್ ಬಾಟಲಿಯನ್ನು ಕೇವಲ 99 ರೂಪಾಯಿಗೆ ಖರೀದಿಸಬಹುದು ಎಂದು ಅಲ್ಲಿನ ಸರ್ಕಾರ ಹೇಳಿದೆ. ಹೊಸ ಮದ್ಯ ನೀತಿ ಜಾರಿಗ
ಬೆಂಗಳೂರು, 18 ಅಕ್ಟೋಬರ್ (ಹಿ.ಸ.) :ಆ್ಯಂಕರ್ :


ಅಮರಾವತಿ, 18 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಆಂಧ್ರ ಪ್ರದೇಶದಲ್ಲಿ ಹೊಸ ಮದ್ಯ ನೀತಿ ಜಾರಿಯಾಗಿದೆ. ಈ ನೀತಿಯಿಂದ ಸರಕಾರವು ಆದಾಯ ಹೆಚ್ಚಳದ ನಿರೀಕ್ಷೆಯಲ್ಲಿ ಇದೆ. ಮದ್ಯದ ನೀತಿಯಡಿ 180 ಎಂಎಲ್ ಬಾಟಲಿಯನ್ನು ಕೇವಲ 99 ರೂಪಾಯಿಗೆ ಖರೀದಿಸಬಹುದು ಎಂದು ಅಲ್ಲಿನ ಸರ್ಕಾರ ಹೇಳಿದೆ. ಹೊಸ ಮದ್ಯ ನೀತಿ ಜಾರಿಗೆ ಬಂದಿರುವುದರಿಂದ ಆಂಧ್ರಪ್ರದೇಶದ ಗ್ರಾಹಕರು ಅಗ್ಗದ ದರದಲ್ಲಿ ಮದ್ಯ ಖರೀದಿಸಲು ಸಾಧ್ಯವಾಗುತ್ತದೆ. ಇಂದು ಸೆಪ್ಟೆಂಬರ್ 18 ರಂದು ರಾಜ್ಯ ಸಚಿವ ಸಂಪುಟ ಅಂಗೀಕರಿಸಿದ ಈ ನೀತಿಯ ಅಡಿ, ಯಾವುದೇ ಬ್ರಾಂಡ್‌ನ 180 ಮಿಲಿ ಮದ್ಯವನ್ನು 99 ರೂ.ಗೆ ಖರೀದಿಸಲು ಅವಕಾಶವಿದೆ. ಈ ಕ್ರಮದಿಂದ ರಾಜ್ಯ ಸರಕಾರಕ್ಕೆ 5,500 ಕೋಟಿ ಆದಾಯ ಬರುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.

ಹರಿಯಾಣ ಮತ್ತು ಇತರ ರಾಜ್ಯಗಳ ನೀತಿಗಳಂತೆ ಮದ್ಯದ ಮಾರಾಟದಿಂದ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಆಂಧ್ರ ಪ್ರದೇಶ ಸರ್ಕಾರವು ಹೊಸ ಮದ್ಯ ನೀತಿಯನ್ನು ಘೋಷಿಸಿದೆ ಎಂದು ತಿಳಿದು ಬಂದಿದೆ.

ರಾಜ್ಯಾದ್ಯಂತ 3,736 ಖಾಸಗಿ ಅಂಗಡಿಗಳಿಗೆ ಪರವಾನಗಿ ನೀಡಲು ಅಧಿಸೂಚನೆ ಸಹ ಹೊರಡಿಸಲಾಗಿದೆ. ಸರ್ಕಾರದ ಅಧಿಸೂಚನೆಯ ಪ್ರಕಾರ, ಭಾರತೀಯ ನಿರ್ಮಿತ ವಿದೇಶಿ ಮದ್ಯ ಮತ್ತು ವಿದೇಶಿ ಮದ್ಯ ಮಾರಾಟ ಮಾಡಲು ಪರವಾನಗಿಗಳನ್ನು ಆಯ್ಕೆ ಪ್ರಕ್ರಿಯೆಯ ಮೂಲಕ ಖಾಸಗಿ ವ್ಯಕ್ತಿಗಳು ಅಥವಾ ಘಟಕಗಳಿಗೆ ನೀಡಲಾಗುತ್ತದೆ. ಈ ಪರವಾನಗಿಗಳು ಅಕ್ಟೋಬರ್ 12, 2024 ರಿಂದ ಸೆಪ್ಟೆಂಬರ್ 30, 2026 ರವರೆಗೆ ಮಾನ್ಯವಾಗಿರುತ್ತವೆ.

ಆಂಧ್ರಪ್ರದೇಶದ ಪ್ರೀಮಿಯಂ ಮದ್ಯದ ಅಂಗಡಿಗಳು ಅರ್ಜಿದಾರರು ಮದ್ಯದ ನೀತಿ ಯೋಜನೆಯ ವಿಶೇಷ ವರ್ಗದ ಅಡಿ ಪ್ರೀಮಿಯಂ ಅಂಗಡಿ ಪರವಾನಗಿಗಾಗಿ ಸಹ ಅರ್ಜಿ ಸಲ್ಲಿಸಬಹುದು. ಆದೇಶದ ಪ್ರಕಾರ, ಆಂಧ್ರಪ್ರದೇಶದಲ್ಲಿ ಉನ್ನತ ಮಟ್ಟದ ಚಿಲ್ಲರೆ ಮಾರಾಟ ಒದಗಿಸಲು ರಾಜ್ಯ ಸರ್ಕಾರವು 12 ಪ್ರೀಮಿಯಂ ಸ್ಟೋರ್ ಪರವಾನಗಿಗಳನ್ನು ನೀಡುತ್ತದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande