ಟೆಲಿಕಾಂ ಕ್ಷೇತ್ರದಲ್ಲಿ ಬಿಎಸ್‌ಎನ್‌ಎಲ್ ಹೊಸ ಕ್ರಾಂತಿ: ಸಿಮ್ ಇಲ್ಲದೆ ಕರೆ
ನವದೆಹಲಿ, 19 ಅಕ್ಟೋಬರ್(ಹಿ.ಸ.) : ಆ್ಯಂಕರ್ : ಬಿಎಸ್‌ಎನ್‌ಎಲ್ ಇದೀಗ ಡೈರೆಕ್ಟ್ 2 ಡಿವೈಸ್ ತಂತ್ರಜ್ಞಾನದ ಮೂಲಕ ಯಾವುದೇ ನೆಟ್‌ವರ್ಕ್, ಸಿಮ್ ಇಲ್ಲದೆ ಕರೆ ಮಾಡುವ ಸೌಲಭ್ಯ ನೀಡುತ್ತಿದೆ. ಇದು ಗ್ಲೋಬಲ್ ಸ್ಯಾಟಲೈಟ್ ಕಮ್ಯೂನಿಕೇಶನ್ ವಯಾಸ್ಯಾಟ್ ಜೊತೆಗಿನ ಸಹಭಾಗಿತ್ವದಲ್ಲಿ ಬಿಎಸ್‌ಎನ್‌ಎಲ್ ಹೊಸ ಕ್ರಾಂತಿ ಮ
:


ನವದೆಹಲಿ, 19 ಅಕ್ಟೋಬರ್(ಹಿ.ಸ.) :

ಆ್ಯಂಕರ್ : ಬಿಎಸ್‌ಎನ್‌ಎಲ್ ಇದೀಗ ಡೈರೆಕ್ಟ್ 2 ಡಿವೈಸ್ ತಂತ್ರಜ್ಞಾನದ ಮೂಲಕ ಯಾವುದೇ ನೆಟ್‌ವರ್ಕ್, ಸಿಮ್ ಇಲ್ಲದೆ ಕರೆ ಮಾಡುವ ಸೌಲಭ್ಯ ನೀಡುತ್ತಿದೆ. ಇದು ಗ್ಲೋಬಲ್ ಸ್ಯಾಟಲೈಟ್ ಕಮ್ಯೂನಿಕೇಶನ್ ವಯಾಸ್ಯಾಟ್ ಜೊತೆಗಿನ ಸಹಭಾಗಿತ್ವದಲ್ಲಿ ಬಿಎಸ್‌ಎನ್‌ಎಲ್ ಹೊಸ ಕ್ರಾಂತಿ ಮಾಡುತ್ತಿದೆ. ಇದರ ಪ್ರಯೋಗ ಯಶಸ್ವಿಯಾಗಿದ್ದು, ಇದು ಎಲ್ಲ ಸ್ಥಳದಲ್ಲೂ ಅತ್ಯುತ್ತಮ ಸಂಪರ್ಕವನ್ನು ಒದಗಿಸಬಲ್ಲದು. ಶೀಘ್ರದಲ್ಲೇ ಈ ಸೇವೆ ಭಾರತೀಯರಿಗೆ ಲಭ್ಯವಾಗಲಿದೆ. ಈ ಮೂಲಕ ಬಿಎಸ್‌ಎನ್‌ಎಲ್ ಸ್ಯಾಟಲೈಟ್ ಸಂವಹನ ಕ್ರಾಂತಿ ಇದೀಗ ಟೆಲಿಕಾಂ ಕ್ಷೇತ್ರದ ಬುಡಮೇಲು ಮಾಡುವಂತಿದೆ.

ಪ್ರಯೋಗ ಯಶಸ್ವಿ

ವಯಾಸ್ಯಾಟ್ ಸಹಭಾಗಿತ್ವದಲ್ಲಿ ಬಿಎಸ್‌ಎನ್‌ಎಲ್ ಈಗಾಗಲೇ ಡಿ2ಡಿ ಪ್ರಯೋಗ ಯಶಸ್ವಿಯಾಗಿ ಮಾಡಿದೆ. ಡಿ2ಡಿ ಅಂದರೆ ನೇರವಾಗಿ ಸಾಧನಗೆ ಸಂಪರ್ಕ.ಇದೀಗ ಹಂತ ಹಂತವಾಗಿ ಡಿ2ಡಿ ಸ್ಯಾಟಲೈಟ್ ಕಮ್ಯೂನಿಕೇಶನ್ ಜಾರಿಯಾಗಲಿದೆ. ಈ ಮೂಲಕ ಭಾರತದಲ್ಲಿ ದೂರದ ಪ್ರದೇಶದಲ್ಲೂ ಕರೆ, ಜಗತ್ತಿನೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗಲಿದೆ. ದ್ವಿಮುಖ ಸಂದೇಶ ಕಳುಹಿಸುವಿಕೆ, ಎಸ್ಒಎಸ್ ಸಂದೇಶ ಸೇರಿದಂತೆ ಎರಡು ಮಾದಿರಯಲ್ಲಿ ಪ್ರಯೋಗ ನಡೆಸಲಾಗಿದೆ. ಸರಿಸುಮಾರು 36,000 ಕಿಲೋಮೀಟರ್ ದೂರದಲ್ಲಿರುವ ಭೂಸ್ಥಿರ ಎಲ್ ಬ್ಯಾಂಡ್ ಉಪಗ್ರಹಗಳಿಗೆ ಸಂದೇಶ ಕಳುಹಿಸಿದ ಪ್ರಯೋಗ ಯಶಸ್ವಿಯಾಗಿದೆ.

ಕರೆ ಮಾಡಲು ಯಾವುದೇ ಸಿಮ್ ಬೇಕಿಲ್ಲ

ಜಿಯೋ, ಏರ್‌ಟೆಲ್, ವಿಐ ಸೇರಿದಂತೆ ಕರೆ ಮಾಡಲು ಯಾವುದೇ ಸಿಮ್ ಬೇಕಿಲ್ಲ, ಹಳ್ಳಿಯಾಗಲಿ, ಕಾಡಾಗಲಿ, ನೆಟ್‌ವರ್ಕ್ ಇರಬೇಕಿಲ್ಲ. ಎಲ್ಲವೂ ಸ್ಯಾಟಲೈಟ್ ಮೂಲಕವೇ ಸಂವಹನ ನಡೆಯಲಿದೆ. ಆ್ಯಂಡ್ರಾಯ್ಡ್, ಐಒಎಸ್ ಮಾತ್ರವಲ್ಲ, ಸ್ಮಾರ್ಟ್‌ವಾಚ್ ಸೇರಿದಂತೆ ಸ್ಮಾರ್ಟ್ ಗ್ಯಾಜೆಟ್ ಇದ್ದರೆ ಸಾಕು, ಕಾಲ್ ಮಾಡಲು ಸಾಧ್ಯವಿದೆ. ಕಾರು ಬಳಕೆದಾರರು ಕೂಡ ಕಾರಿನಲ್ಲಿರುವ ಸ್ಮಾರ್ಟ್ ಗ್ಯಾಜೆಟ್ ಮೂಲಕ ಸುಲಭವಾಗಿ ಕರೆ ಮಾಡಬಹುದು.

ಪ್ರಮುಖವಾಗಿ ಈ ಸೇವೆ ನೆಟ್‌ವರ್ಕ್ ಇಲ್ಲದ, ದೂರದ ಪ್ರದೇಶದ ಮೊದಲ ಹಂತದಲ್ಲಿ ಬಳಕೆಯಾಗಲಿದೆ. ಕರೆ ಮಾಡಲು ಮೊಬೈಲ್ ಫೋನ್ ಬೇಕೆಂದಿಲ್ಲ. ಸ್ಮಾರ್ಟ್ ಗ್ಯಾಜೆಟ್ ಇದ್ದರೆ ಸಾಕು, ನೇರವಾಗಿ ಸ್ಯಾಟಲೈಟ್ ಮೂಲಕ ಸಂಪರ್ಕ ಸಾಧ್ಯವಿದೆ. ಈ ಮೂಲಕ ಮೂಲೆ ಮೂಲೆಯಲ್ಲರುವ ಮಂದಿಗೆ ಸಂಪರ್ಕ ಸಾಧ್ಯವಾಗಿಸಲು ಬಿಎಸ್‌ಎನ್‌ಎಲ್ ಮಹತ್ತರ ಹೆಜ್ಜೆ ಇಟ್ಟಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande