ಮಲಯಾಳಂ ನಟಿ ಮನೆಯಲ್ಲಿ ನಿಷೇಧಿತ ಮಾದಕ ವಸ್ತು ಪತ್ತೆ
ತಿರುವನಂತಪುರಂ, 20 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಮನೆಯಲ್ಲಿ ನಿಷೇಧಿತ ಮಾದಕ ವಸ್ತು ಪತ್ತೆಯಾದ ಹಿನ್ನೆಲೆ ಮಲಯಾಳಿ ಕಿರುತೆರೆ ಧಾರಾವಾಹಿ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ. 34 ವರ್ಷದ ಕಿರುತೆರೆ ಧಾರಾವಾಹಿ ನಟಿ ಶ್ಯಾಮನಾಥ್ ಅವರನ್ನು ಕೇರಳದ ಓಝಿವುಪರದಲ್ಲಿರುವ ಅವರ ನಿವಾಸದಿಂದ ಪರವೂರು ಪೊಲೀಸರ
ನಿಷೇಧಿತ ಮಾದಕ ವಸ್ತು


ತಿರುವನಂತಪುರಂ, 20 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಮನೆಯಲ್ಲಿ ನಿಷೇಧಿತ ಮಾದಕ ವಸ್ತು ಪತ್ತೆಯಾದ ಹಿನ್ನೆಲೆ ಮಲಯಾಳಿ ಕಿರುತೆರೆ ಧಾರಾವಾಹಿ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ.

34 ವರ್ಷದ ಕಿರುತೆರೆ ಧಾರಾವಾಹಿ ನಟಿ ಶ್ಯಾಮನಾಥ್ ಅವರನ್ನು ಕೇರಳದ ಓಝಿವುಪರದಲ್ಲಿರುವ ಅವರ ನಿವಾಸದಿಂದ ಪರವೂರು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರಿಗೆ ನಟಿಯ ಮನೆಯಲ್ಲಿ ಸರಿಸುಮಾರು ಎರಡು ಮಿಲಿಗ್ರಾಂಗಳಷ್ಟು ಮೆಥಿಲೆನೆಡಿಯೋಕ್ಸಿಫೆನೆಥೈಲಮೈನ್ ಮಾದಕ ವಸ್ತು ಪತ್ತೆಯಾಗಿದೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಶ್ಯಾಮನಾಥ್ ಅವರು ಕೆಲವು ದಿನಗಳಿಂದ ನಿಷೇಧಿತ ವಸ್ತುವನ್ನು ಬಳಸುತ್ತಿದ್ದರು ಎಂದು ಶಂಕಿಸಲಾಗಿದೆ. ನಟಿಗೆ ಮಾದಕ ವಸ್ತು ಪೂರೈಸಿದವರ ಪತ್ತೆಗೆ ಸದ್ಯ ತನಿಖೆ ನಡೆಯುತ್ತಿದೆ.

ನಟಿಯ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್‌ನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande