ಭಾರತೀಯ ಚಲನಚಿತ್ರಗಳನ್ನು ಶ್ಲಾಘಿಸಿದ ಪುಟಿನ್
ಮಾಸ್ಕೋ, 19 ಅಕ್ಟೋಬರ್(ಹಿ.ಸ.) : ಆ್ಯಂಕರ್ : ಭಾರತೀಯ ಚಲನಚಿತ್ರಗಳನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶ್ಲಾಘಿಸಿದ್ದು, ರಷ್ಯಾದ ಪ್ರೇಕ್ಷಕರಲ್ಲಿ ಅವು ಬಹಳ ಜನಪ್ರಿಯವಾಗಿವೆ ಎಂದು ಹೇಳಿದ್ದಾರೆ. ಮುಂದಿನ ವಾರ ಬ್ರಿಕ್ಸ್ ಶೃಂಗಸಭೆಗೆ ಮುನ್ನ ಮಾಸ್ಕೋದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಪುಟಿನ್,
Vladimir Putin


ಮಾಸ್ಕೋ, 19 ಅಕ್ಟೋಬರ್(ಹಿ.ಸ.) :

ಆ್ಯಂಕರ್ : ಭಾರತೀಯ ಚಲನಚಿತ್ರಗಳನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶ್ಲಾಘಿಸಿದ್ದು, ರಷ್ಯಾದ ಪ್ರೇಕ್ಷಕರಲ್ಲಿ ಅವು ಬಹಳ ಜನಪ್ರಿಯವಾಗಿವೆ ಎಂದು ಹೇಳಿದ್ದಾರೆ.

ಮುಂದಿನ ವಾರ ಬ್ರಿಕ್ಸ್ ಶೃಂಗಸಭೆಗೆ ಮುನ್ನ ಮಾಸ್ಕೋದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಪುಟಿನ್, ರಷ್ಯಾದಲ್ಲಿ ಭಾರತೀಯ ಚಲನಚಿತ್ರಗಳ ಪ್ರದರ್ಶನವನ್ನು ಮತ್ತಷ್ಟು ಉತ್ತೇಜಿಸಲು ಭಾರತದೊಂದಿಗೆ ಶೀಘ್ರದಲ್ಲೇ ಚರ್ಚೆಗಳು ನಡೆಯಲಿದೆ ಎಂದರು.

ಭಾರತ ಮತ್ತು ರಷ್ಯಾ ಬಲವಾದ ಸಾಂಸ್ಕೃತಿಕ ಬಾಂಧವ್ಯವನ್ನು ಹೊಂದಿವೆ. ಸಿನಿಮಾದ ಜೊತೆಗೆ, ಔಷಧ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಉಭಯ ದೇಶಗಳು ಸಹಕಾರ ಹೊಂದಿವೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande