ತಿಗಳ ಸಮುದಾಯಕ್ಕೆ ಉದಯ್ ಕುಮಾರ್ ರವರಿಂದ ವಂಚನೆ
ತಿಗಳ ಸಮುದಾಯಕ್ಕೆ ಸಹ್ಯಾದ್ರಿ ಕಾಲೇಜಿನ ಉದಯ್ ಕುಮಾರ್ ರವರಿಂದ ವಂಚನೆ ; ಎಲ್.ಎ.ಮಂಜುನಾಥ್ ಆರೋಪ
ಕೋಲಾರದಲ್ಲಿ ತಿಗಳ ಸಮುದಾಯದ ಸಭೆ ನಡೆಸಿದ ಎಲ್.ಎ.ಮಂಜುನಾಥ್ ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷ ಎಂ.ಉದಯ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ಕೋಲಾರ,11 ಅಕ್ಟೋಬರ್ (ಹಿ.ಸ.)

ಆ್ಯಂಕರ್ :ಸಮುದಾಯಕ್ಕೆ ದ್ರೋಹ ಬಗೆದು ಊಟ ಮಾಡಿದ ತಟ್ಟೆಯನ್ನು ಎಸೆದು ಹೊಸ ತಟ್ಟೆಯನ್ನು ಹುಡಿಕಿಕೊಂಡು ಹೋಗಿರುವಂತಹ ಗುಳ್ಳೆ ನರಿಗಳನ್ನು ಕ್ಷಮಿಸಬಾರದು ಎಂದು ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷ ಎಂ.ಉದಯ್‌ಕುಮಾರ್ ವಿರುದ್ಧ ತಿಗಳ ಜನಾಂಗದ ಸಮನ್ವಯ ಸಮಿತಿಯ ಸಂಘದ ಸಂಸ್ಥಾಪಕ ಅಧ್ಯಕ್ಷರು ಎಲ್.ಎ.ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.

ಕೋಲಾರ ನಗರ ಕಾರಂಜಿಕಟ್ಟೆಯ ಶ್ರೀಧರ್ಮರಾಯಸ್ವಾಮಿ ದೇವಾಲಯದ ಆವರಣದಲಿ ಕೋಲಾರ ಜಿಲ್ಲಾ ತಿಗಳ ಜನಾಂಗದ ಸಮನ್ವಯ ಸಮಿತಿಯ ನೂತನ ಪದಾಧಿಕಾರಿಗಳು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಕೋಲಾರ ಜಿಲ್ಲೆಯಲ್ಲಿ ೨೦೦೪-೦೫ ರಲ್ಲಿ ನೋಂದಣೆಯಾದ ಸಂಘಕ್ಕೆ ಮೊದಲನೇ ಬಾರಿ ಅಧ್ಯಕ್ಷರಾಗಿ ಮಾಲೂರು ಎಂ.ಕೆ.ವೆ0ಕಟೇಶ್, ೨೦೧೦-೧೧ರವರಿಗೆ ಎರಡನೇ ಬಾರಿ ಅಧ್ಯಕ್ಷರಾಗಿ ಎಲ್.ಎ.ಮಂಜುನಾಥ್, ೨೦೧೧-೨೦೧೪ ರವರಿಗೆ ಮಧುಗಿರಿಗೆ ವರ್ಗವಣೆ ಯಾದಗ ೨೦೧೪ರಲ್ಲಿ ಮೂರನೇ ಬಾರಿ ಅಧ್ಯಕ್ಷರಾಗಿ ಎಂ.ಉದಯ್ ಕುಮಾರ್ ರವರನ್ನು ಅದ್ಯಕ್ಷರಾಗಿ ಸಂಘಕ್ಕೆ ಆಯ್ಕೆ ಮಾಡಲಾಯಿತು.

ಆ ನಂತರ ಸುಮಾರು ೧೦ ವರ್ಷಗಳ ಕಾಲ ಸಂಘದ ಅಧ್ಯಕ್ಷರಾಗಿ ಸಮುದಾಯಕ್ಕೆ ಏನೂ ಉಪಯೋಗವಾಗುವ ಕೆಲಸ ಮಾಡಿಲ್ಲ. ಸಮುದಾಯವನ್ನು ತೋರಿಸಿ ತನ್ನ ಕಾಲೇಜು ಬೆಳೆಸಿಕೊಂಡು ತಾನಾಯಿತು ತನ್ನ ಕಾಲೇಜಾಯಿತು ಎಂದು ನೋಡಿಕೊಂಡಿದ್ದವರು ಸಂಘದ ಸಂಘಟನೆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ, ಈಗ ಸಮುದಾಯದ ಯಾವುದೇ ದೇವಾಲಯದ ಗೌಡರು ಯಜಮಾನರಿಗೂ,ಅಧ್ಯಕ್ಷರಿಗೂ, ಪದಾದೀಕಾರಿಗಳಿಗೂ ಯಾರಿಗೂ ತಿಳಿಸದೆ ನಾಲ್ಕು ಗೊಡೆಗಳ ಮದ್ಯ ಒಂದು ಹೋಸ ಸಂಘವನ್ನು ಹುಟ್ಟುಹಾಕಿದ್ದಾರೆ ಎಂದು ಆರೋಪಿಸಿದರು.

ಅದಕ್ಕೆ ಅವರೆ ಅಧ್ಯಕ್ಷರಾಗಿದ್ದಾರೆ ಈಗ ಸವರು ಸಮುದಾಯಕ್ಕೆ ತಪ್ಪು ತಪ್ಪು ಮಾಹಿತಿ ನೀಡುವ ಮೂಲಕ ಸಮುದಾಯವನ್ನು ತಪ್ಪು ದಾರಿ ತಪ್ಪಿಸುತ್ತಿರುವುದು ಎಷ್ಟು ಸರಿಎನ್ನಿಸುತ್ತದೆ. ಇವೆಲ್ಲವನ್ನೂ ಸಮುದಾಯದ ಹಿರಿಯ ಮುಖಂಡರು ಮತ್ತು ದೇವಾಲಯದ ಗೌಡರು ಮತ್ತು ಯಜಮಾನರು ಇದನ್ನು ಪ್ರಶ್ನಿಸಬೇಕು. ತಿಂದ ಮನೆಗೆ ನಂಬಿಕೆ ದ್ರೋಹ ಬಗೆದ ಗುಳ್ಳೆನರಿಗಳನ್ನು ನಂಬಬೇಡಿ ಎಚ್ಚರ ವಿರಲಿ. ಇಂತಹ ಸಮಾಯ ಸಾದಕರಿಂದ ನೀವು ದೂರ ಹಿರಿ ಎಂದು ಹೆಚ್ಚರಿಕೆ ನೀಡಿದರು.

ಅಧÀ್ಯಕ್ಷ ಮುಳಬಾಗಿಲು ಎಂ.ವೆAಕಟೇಶ್ ಮಾತನಾಡಿ, ಒಂದು ಗುಡಿನಲ್ಲಿದ ಗುಂಪಿನ ಹುಲಿಗಳು ಗುಂಪಿನಿAದ ಆಚೆಗೆ ಹೋಗಿ ನರಿಗಳಾಗಿವೆ, ಯಾವತ್ತೂ ಒಟ್ಟಾಗಿ ಗುಂಪಾಗಿ ಇದ್ದಾಗ ಮಾತ್ರ ಆ ಸಮುದಾಯಕ್ಕೆ ಜನಾಂಗಕ್ಕೆ ಬೆಲೆ ಇರುತ್ತದೆ ಎಂದರು.

ಒಂದು ದೊಡ್ಡ ಸಮುದ್ರದಲ್ಲಿ ಒಂದು ಅನ್ನಿಯು ನೀರು ಆಚೆ ಹೋದರೆ ಕೆಲವೇ ನಿಮಿಷಗಳಲ್ಲಿ ಹಾವಿಯಾಗುತ್ತದೆ, ಅದುದರಿಂದ ಸಮುದಾಯ ಒಡೆಯುವವರನ್ನು ಮತ್ತು ಸಮುದಾಯಕ್ಕೆ ದ್ರೋಹ ಬಗೆಯುವವರನ್ನು ಊರುಗಳಿಗೆ ಬಂದರೆ ಛೀಮಾರಿ ಹಾಕಿ ಎಂದರು,

ಕೋಲಾರ ಜಿಲ್ಲಾ ತಿಗಳ ಜನಾಂಗದ ಸಮನ್ವಯ ಸಮಿತಿಯು ಈ ಸಂಘದಲ್ಲಿರುವ ಅಧ್ಯಕ್ಷರು ಪದಾಧಿಕಾರಿಗಳು ಹುಲಿ ಸಿಂಹಗಳ0ತೆ ಮುನ್ನಗ್ಗಿ ಸಮುದಾಯಕ್ಕೆ ದುಡಿಯುವ ಪದಾಧಿಕಾರಿಗಳು ಯಾವುದೇ ಕಾರಣಕ್ಕೂ ನಮ್ಮ ಒಗ್ಗಟ್ಟನ್ನು ಒಡೆಯಲು ಬಿಡಬಾರದು ಸಮುದಾಯಕ್ಕೆ ಏನೇ ತೊಂದರೆಯಾದರೂ ಒಗ್ಗಟ್ಟಿನಿಂದ ಹೋರಾಡುವುದಾಗಿ ತಿಳಿಸಿದರು.

ವೇಮಗಲ್ ಗೌಡರ ಚಿಕ್ಕಮುನಿಯಪ್ಪ, ಖಜಾಂಚಿ ನರಸಾಪುರ ಬಿ.ಶ್ರೀನಿವಾಸ್, ಕಾರ್ಯದರ್ಶಿ ಎನ್.ಪಲ್ಗುಣ, ಸಂಘಟನಾ ಕಾರ್ಯದರ್ಶಿಧರ್ಮರಾಯನಗರ ಜಿ. ನಾಗರಾಜ್, ಯುವ ವೇದಿಕೆ ಕಾರ್ಯದರ್ಶಿ ಮುದುವತ್ತಿ ಮೋಹನ್ ಬಾಬು, ಯು ವೇದಿಕೆ ಖಜಾಂಚಿ, ಕಾರಂಜಿಕಟ್ಟೆ ಆಂಜಿನಪ್ಪ, ಶ್ರೀಧರ್ಮರಾಯಸ್ವಾಮಿ ದೇವಾಲಯ ವೇಮಗಲ್ ಮಾಜಿ ಅಧ್ಯಕ್ಷ ಮಂಜುನಾಥ್, ಮುಂತಾದವರು ಉಪಸ್ಥಿತರಿದ್ದರು.

ಚಿತ್ರ : ಕೋಲಾರದಲ್ಲಿ ತಿಗಳ ಸಮುದಾಯದ ಸಭೆ ನಡೆಸಿದ ಎಲ್.ಎ.ಮಂಜುನಾಥ್ ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷ ಎಂ.ಉದಯ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande