ಸುರಿನಾಮೆಗೆ ತಲುಪಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಪರಮಾರಿಬೊ, 5 ಜೂನ್ (ಹಿ.ಸ): ಆ್ಯಂಕರ್: ಸುರಿನಾಮೆ ಅಧ್ಯಕ್ಷ ಚಂದ್ರಿಕಪೆರ್ಸಾದ್ ಸಂತೋಖಿ ಅವರ ಆಹ್ವಾನದ ಮೇರೆಗೆ ರ
ೇೇ


ಪರಮಾರಿಬೊ, 5 ಜೂನ್ (ಹಿ.ಸ):

ಆ್ಯಂಕರ್:

ಸುರಿನಾಮೆ ಅಧ್ಯಕ್ಷ ಚಂದ್ರಿಕಪೆರ್ಸಾದ್ ಸಂತೋಖಿ ಅವರ ಆಹ್ವಾನದ ಮೇರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸುರಿನಾಮೆ ರಾಜಧಾನಿ ಪರಮಾರಿಬೊಗೆ ನಿನ್ನೆ ತಲುಪಿದರು. ಜೊಹಾನ್ ಅಡಾಲ್ಫ್ ಪೆಂಗಾಲ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಆಗಮಿಸಿದ ರಾಷ್ಟ್ರಪತಿ ಮುರ್ಮು ಅವರನ್ನು ಬರಮಾಡಿಕೊಳ್ಳಲಾಯಿತು. ಈ ವೇಳೆ ಮುರ್ಮು ಸುರಿನಾಮೆಯ ನಿಯೋಗವನ್ನು ಭೇಟಿಯಾದರು. ರಾಷ್ಟ್ರಪತಿ ಅವರೊಂದಿಗೆ ಕೇಂದ್ರ ಗ್ರಾಹಕ ವ್ಯವಹಾರಗಳ ರಾಜ್ಯ ಖಾತೆ ಸಚಿವರಾದ ಸಾಧ್ವಿ ನಿರಂಜನ್ ಜ್ಯೋತಿ, ಸಂಸದೆ ರಮಾ ದೇವಿ ಹಾಗೂ ಇತರೆ ಅಧಿಕೃತ ನಿಯೋಗ ಸುರೆನಾಮೆಗೆ ಭೇಟಿ ನೀಡಿದೆ. ಸುರಿನಾಮೆಯಲ್ಲಿ ಭಾರತೀಯರು ನೆಲೆಯೂರಿ ೧೫೦ ವರ್ಷಗಳಾದ ಹಿನ್ನೆಲೆ ಆಚರಿಸಲಾಗುತ್ತಿರುವ ೧೫೦ನೇ ವಾರ್ಷಿಕ ಸಮಾರಂಭದಲ್ಲಿ ಮುರ್ಮು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದು ಈ ಭೇಟಿ ಐತಿಹಾಸಿಕ ಮಹತ್ವ ಪಡೆದುಕೊಂಡಿದೆ. ಈ ವೇಳೆ ಸುರಿನಾಮೆ ಅಧ್ಯಕ್ಷರೊಂದಿಗೆ ದ್ರೌಪದಿ ಮುರ್ಮು ನಿಯೋಗ ಮಟ್ಟದ ಮಾತುಕತೆ ನಡೆಸಲಿದ್ದಾರೆ. ಬಳಿಕ ರಾಷ್ಟ್ರಪತಿ ಅವರು ಐತಿಹಾಸಿಕ ಮಹತ್ವವುಳ್ಳ ತಾಣಗಳಿಗೆ ಭೇಟಿ ನೀಡಲಿದ್ದಾರೆ. ಅದೇ ರೀತಿ ಸುರಿನಾಮೆಯಲ್ಲಿನ ಆನಿವಾಸಿ ಭಾರತೀಯರೊಂದಿಗೆ ಮುರ್ಮು ಸಂವಾದ ನಡೆಸಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande